ಶನಿವಾರಸಂತೆ, ಜ. 4: ಭಾರತದಲ್ಲಿ ಪ್ರತಿ ವರ್ಷ ಆಗಸ್ಟ್ 29 ರಂದು ಕ್ರೀಡಾ ದಿವಸವನ್ನಾಗಿ ಭಾರತದ ಹಾಕಿ ಆಟಗಾರ ಧ್ಯಾನ್‍ಚಂದ್ ನೆನಪಿಗೋಸ್ಕರ ಆಚರಿಸಲಾಗುತ್ತದೆ. ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ಎಂ.ಎ. ಆದಿಲ್ ಪಾಶ ಹೇಳಿದರು.
ವಾಲಿಬಾಲ್ ಪಂದ್ಯಾವಳಿಯಲ್ಲಿ 9 ತಂಡಗಳು ಭಾಗವಹಿಸಿ ಪ್ರಥಮ ಬಹುಮಾನ ರೂ. 10 ಸಾವಿರ ಹಾಗೂ ಟ್ರೋಫಿಯನ್ನು ಹಾಸನ ತಂಡ ಪಡೆದುಕೊಂಡರೆ, ದ್ವಿತೀಯ ಬಹುಮಾನ ರೂ. 5 ಸಾವಿರ ಹಾಗೂ ಟ್ರೋಫಿಯನ್ನು ಸಿದ್ಧಲಿಂಗಪುರದ ತಂಡ ಪಡೆದುಕೊಂಡರು. ಇಲ್ಲಿನ ಬಜರಂಗದಳ ಸ್ಪರ್ಧೆ ಆಯೋಜಿಸಿತ್ತು.
ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಸಂತೋಷ್, ಪದಾಧಿಕಾರಿಗಳಾದ ತಸ್ಲೀಮ್, ಪ್ರವೀಣ್, ಜಗದೀಶ್, ದೀಪಕ್, ಗ್ರಾ.ಪಂ. ಸದಸ್ಯ ಆದಿತ್ಯಗೌಡ, ತೀರ್ಪುಗಾರರಾಗಿ ಪ್ರವೀಣ್, ಅಮೃತ್ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.