ಮಡಿಕೇರಿ, ಜ. 4: ಕೊಡಗು ಜಿಲ್ಲಾ ಘಟಕದ ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಮಾಸಿಕ ಪ್ರಥಮ ಸಭೆ ತಾ. 2 ರಂದು ಮಡಿಕೇರಿಯ ವಿದ್ಯಾಭವನದಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಕಿಗ್ಗಾಲು ಗಿರೀಶ್ ಅಧ್ಯಕ್ಷತೆಯಲ್ಲಿ ಜರುಗಿತು.

ಶೋಭಾ ಸುಬ್ಬಯ್ಯ ಅವರ ಪ್ರಾರ್ಥನೆಯ ನಂತರ ಜಿಲ್ಲಾ ಸಮಿತಿಯ ಸದಸ್ಯರ ಆಯ್ಕೆ, ತ್ರೈಮಾಸಿಕ ಕ್ರಿಯಾ ಯೋಜನೆ, ಹಣಕಾಸಿನ ಮಂಡನೆಯ ಬಗ್ಗೆ ಚರ್ಚೆ ನಡೆಯಿತು. ಆಶಾ ಧರ್ಮಪಾಲರನ್ನು ಖಜಾಂಚಿಯಾಗಿ ಆರಿಸಲಾಯಿತು. ಶೋಭಾ ಸುಬ್ಬಯ್ಯ, ಕಸ್ತೂರಿ ಗೋವಿಂದಮ್ಮಯ್ಯ, ಬೈತಡ್ಕ ಜಾನಕಿ, ಸುಶೀಲಾ ಕುಶಾಲಪ್ಪ, ಆಶಾ ಧರ್ಮಪಾಲ್, ಕೋರನ ಸುನೀಲ್, ತಮ್ಮಣ್ಣಪ್ಪ ಮೊದಲಾದವರು ಉಪಸ್ಥಿತರಿದ್ದ ಸಭೆಯನ್ನು ಬಬ್ಬೀರ ಸರಸ್ವತಿ ಸ್ವಾಗತಿಸಿ, ವಂದಿಸಿದರು.