ಮಡಿಕೇರಿ, ಜ. 3: ಭಾಗಮಂಡಲ ವಲಯದ ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಬೆಲೆ ಬಾಳುವ ಹರಳು ಕಲ್ಲು ಸಾಗಾಟ ದಂಧೆಯಲ್ಲಿ ಭಾಗಿಯಾಗಿದ್ದ ಮೇಕೇರಿ ಗ್ರಾಮದ ಎಂ.ಕೆ. ಸಲೀಂ, ತ್ಯಾಗರಾಜ ಕಾಲೋನಿ ಮಡಿಕೇರಿಯ ಎಂ.ಡಿ. ಶರಿಫ್ ಅವರನ್ನು ವಶಕ್ಕೆ ಪಡೆದು ಅವರುಗಳ ಮನೆ, ತೋಟಗಳಲ್ಲಿ ಅಡಗಿಸಿಟ್ಟಿದ್ದ 16.44 ಕೆ.ಜಿ. ಹರಳು ಕಲ್ಲುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ (ಮೊದಲ ಪುಟದಿಂದ) ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಮಡಿಕೇರಿ ಗೌಡ ಸಮಾಜ ಬಳಿಯ ನಿವಾಸಿ ಅನಿಲ್‍ಕುಮಾರ್, ತ್ಯಾಗರಾಜ ಕಾಲೋನಿಯ ಮಹಮ್ಮದ್ ಆಲಿ, ಬೆಟ್ಟಗೇರಿಯ ರಾಶಿದ್ ಹಾಗೂ ತಣ್ಣಿಮಾನಿ ಗ್ರಾಮದ ಮಿಟ್ಟು (ರಂಜಿತ್), ಪಾಪು (ಹರೀಶ್), ಪುಟ್ಟ (ಲಕ್ಷ್ಮಣ) ಇವರುಗಳು ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ಮುಂದುವರಿದಿದೆ.

ಇಲಾಖೆ ವತಿಯಿಂದ ತನಿಖೆ ಮುಂದುವರಿದಿದ್ದು, ದೊರೆತ ಖಚಿತ ಮಾಹಿತಿಯನ್ವಯ ಮಡಿಕೇರಿಯ ಗಣಪತಿ ಬೀದಿಯ ಎಂ.ಪಿ. ಸುಲ್ತಾನ್ ಅವರ ಮನೆಗೆ ದಾಳಿ ನಡೆಸಿಲಾಗಿದ್ದು, ಅಕ್ರಮವಾಗಿ ದಾಸ್ತಾನಿರಿಸಲಾಗಿದ್ದ 12.35 ಕೆ.ಜಿ.ಯಷ್ಟು ಕಲ್ಲನ್ನು ವಶಪಡಿಸಿಕೊಳ್ಳಲಾಗಿದೆ. ಸುಲ್ತಾನ್ ತಲೆಮರೆಸಿಕೊಂಡಿದ್ದಾನೆ. ಇದಲ್ಲದೆ ಸಂಪಾಜೆ ಗ್ರಾಮದ ಈ.ಆರ್. ಅಬ್ದುಲ್ ಕುಂಞÂ (ಅಂದಾಯಿ) ಅವರ ಮನೆ ಮೇಲೆ ದಾಳಿ ನಡೆಸಿದ ಸಂದರ್ಭ ಮನೆಯಲ್ಲಿ 106 ಕೆ.ಜಿ.ಯಷ್ಟು ಹರಳು ಕಲ್ಲು ಲಭಿಸಿದ್ದು, ಅದನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ

ಪ್ರಭಾಕರನ್ ಮಾರ್ಗದರ್ಶನದಲ್ಲಿ ಮಡಿಕೇರಿ ಎಸಿಎಫ್ ನಿಲೇಶ್ ಶಿಂಧೆ ನೇತೃತ್ವದಲ್ಲಿ ಸಂಪಾಜೆ-ಮಡಿಕೇರಿ ವಲಯದ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ಅಕ್ರಮ ಮರ ಸಾಗಾಟ, ಮರ ಕಡಿತಲೆ, ಹರಳು ಕಲ್ಲು ದಂಧೆ, ಕಲ್ಲು ಬೇಟೆ ಇನ್ನಿತರ ಅರಣ್ಯ ಅಪರಾಧ ಕಂಡುಬಂದಲ್ಲಿ ಇಲಾಖೆಯ ಸಹಾಯವಾಣಿ ಸಂಖ್ಯೆ 1926ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ತಿಳಿಸಿದ್ದಾರೆ. - ಕುಡೆಕಲ್ ಸಂತೋಷ್