ಶ್ರೀಮಂಗಲ, ಜ. 3 : ಮಡಿಕೇರಿ ಯಲ್ಲಿ ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆ ವತಿಯಿಂದ ಕೊಡಗಿನ ಮೂಲಕ ಬಹುಪಥದ ಹೆದ್ದಾರಿ ಮತ್ತು ರೈಲ್ವೆ ಮಾರ್ಗ ನಿರ್ಮಿಸುವುದನ್ನು ವಿರೋಧಿಸಿ ಈ ಹಿಂದೆ ನಡೆಸಿದ ರ್ಯಾಲಿಯ ಸಭೆಯಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಅವ್ಯಾಚ ಶಬ್ಧಗಳಿಂದ ನಿಂಧಿಸಿ ಸಭೆಗೆ ತಡೆ ಯೊಡ್ಡಿದ ಆರೋಪದಡಿ ಮಡಿಕೇರಿ ನಗರ ಪೋಲಿಸ್ ಠಾಣಾಧಿಕಾರಿ ಯವರು ಹಲವರ ಮೇಲೆ ಮೊಕದ್ದಮೆ ದಾಖಲಿಸಿ ಮಡಿಕೇರಿ ಜೆಎಂಎಫ್ಸಿ ಕಿರಿಯ ವಿಭಾಗದ ಸಿವಿಲ್ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.ತಾ. 8.12.2018ರಂದು ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆ ವತಿಯಿಂದ ಮಡಿಕೇರಿಯ ಮ್ಯಾನ್ಸ್ಕಾಂಪೌಂಡ್ನಿಂದ ಮಡಿಕೇರಿಯ ಮುಖ್ಯ ಬೀದಿಯ ಮೂಲಕ ರ್ಯಾಲಿ ನಡೆಸಿ ಗಾಂಧಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಭೆಗೆ ಕೆಲವರು ತಡೆಯೊಡ್ಡಿದ್ದರು.
ತಡೆಯೊಡ್ಡಿದವರು ರೈಲ್ವೆ ಹಾಗೂ ಬಹುಪಥ ಹೆದ್ದಾರಿ ಪರ ಘೋಷಣೆ ಕೂಗಿ ಈ ಎರಡು ಯೋಜನೆ ಜಾರಿಗಾಗಿ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆಯ ಅಧ್ಯಕ್ಷ ಚೊಟ್ಟೇಕ್ಮಾಡ ರಾಜೀವ್ ಬೋಪಯ್ಯ ಹಾಗೂ ಇತರರು ಸಭೆಗೆ ಅಡ್ಡಿಪಡಿಸಿದವರ (ಮೊದಲ ಪುಟದಿಂದ) ಮೇಲೆ ಮಡಿಕೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ನಗರಠಾಣಾ ತನಿಖಾಧಿಕಾರಿ ಎಂ.ಷಣ್ಮುಗಂ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.ಇದರಲ್ಲಿ ಆರೋಪಿಗಳಾದ ಬಲ್ಲಮಾವಟಿ ಗ್ರಾಮದ ಅಪ್ಪಚಟ್ಟೋಳಂಡ ಮನುಮುತ್ತಪ್ಪ, ನಾಪೋಕ್ಲು ಕೊಳಕೇರಿ ಗ್ರಾಮದ ಬಿದ್ದಾಟಂಡ ಜಿನ್ನುನಾಣಯ್ಯ, ಮಡಿಕೇರಿ ಅರುವತ್ತೋಕ್ಲು ಗ್ರಾಮದ ತಳೂರ್ ಕಿಶೋರ್ಕುಮಾರ್, ಹುದಿಕೇರಿ ಬೆಳ್ಳೂರು ಗ್ರಾಮದ ನೂರೇರ ಮನೋಜ್ಕುಮಾರ್, ಅರಮೇರಿ ಗ್ರಾಮದ ಕುಂಬೆಯಂಡ ಗಣೇಶ್, ಕುಂದ ಗ್ರಾಮದ ಗುಮ್ಮಟ್ಟೀರ ಕಿಲನ್ಗಣಪತಿ, ಮಡಿಕೇರಿ ಸುಬ್ರಮಣ್ಯ ನಗರದ ಕೆ.ಎ.ಅಪ್ಪಣ್ಣ, ಭಾಗಮಂಡಲದ ಕೋರಂಗಾಲ ಗ್ರಾಮದ ಕಾಳನ ರವಿ, ಮಡಿಕೇರಿಯ ಪಿ.ಜಿ.ಸುಕುಮಾರ್, ನಾಪೋಕ್ಲು ಗ್ರಾಮದ ಮುರುಳಿ, ಮಡಿಕೇರಿಯ ಪುದಿಯತಂಡ ಸುಭಾಷ್ಸೋಮಯ್ಯ, 2ನೇ ಮೊಣ್ಣಂಗೇರಿಯ ಎ.ಪಿ. ಧನಂಜಯ, ಇಬ್ನಿವಳವಾಡಿಯ ನಂದಿನೆರವಂಡ ರವಿಬಸಪ್ಪ, ಬೆಟ್ಟಗೇರಿ ಅರುವತ್ತೋಕ್ಲು ಗ್ರಾಮದ ಬೆಪ್ಪುರನ ಮೇದಪ್ಪ, ಮಡಿಕೇರಿಯ ಮಹೇಶ್ ಜೈನಿ, ಮಡಿಕೇರಿಯ ವಿ.ಆರ್. ಮನುಮಂಜುನಾಥ್, ಬೇಂಗೂರು ಅರುವತ್ತೋಕ್ಲು ಗ್ರಾಮದ ಕೆ.ಬಿ. ಬೋಪಣ್ಣ, ವೀರಾಜಪೇಟೆ ಚಿಕ್ಕಪೇಟೆಯ ಜೋಕಿಂ ರೋಡ್ರಿಗಸ್, ಮಗ್ಗುಲ ಗ್ರಾಮದ ವಾಟೇರಿರ ಬೋಪಣ್ಣ, ನಾಪೋಕ್ಲುವಿನ ಜಗದೀಶ್, ಕಕ್ಕಬ್ಬೆ ಗ್ರಾಮದ ಬೊಳಿಯಾಡಿರ ಸಂತುಸುಬ್ರಮಣಿ, ಮಗ್ಗುಲ ಗ್ರಾಮ ವಾಟೇರಿರ ಟಿ.ಅಪ್ಪಣ್ಣ, ಹುದಿಕೇರಿ ಬೆಳ್ಳೂರು ಗ್ರಾಮದ ನೂರೇರ ಮನೋಹರ್, ಹುದಿಕೇರಿ ಗ್ರಾಮದ ಬಂಟರ ರಮೇಶ್ ಅವರ ಮೇಲೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಆರೋಪಿಗಳ ಮೇಲೆ ಐಪಿಸಿ 1860, ಯು/ಎಸ್, 143, 145, 447, 504, 149, ಕಲಾಂನಂತೆ ಕೇಸು ದಾಖಲಿಸಿ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.