ಸೋಮವಾರಪೇಟೆ, ಜ.2: ನ್ಯಾಷನಲ್ ಶೊಟೊಕಾನ್ ಕರಾಟೆ ಮಲ್ಟಿಪರ್‍ಪೋಸ್ ಫೆಡೆರೇಷನ್ ವತಿಯಿಂದ ಹಾಸನ ಜಿಲ್ಲೆಯ ಅರಕಲಗೂಡುವಿನಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪಟ್ಟಣಕ್ಕೆ ಸಮೀಪದ ಬಜೆಗುಂಡಿ ಗ್ರಾಮದ ಪಿ.ಎಲ್.ಇಬ್ಬನಿ ದ್ವಿತೀಯ ಸ್ಥಾನವನ್ನು ಗಳಿಸಿದ್ದಾಳೆ.

ರಾಮನಾಥಪುರದ ಶ್ರೀದಕ್ಷಿಣಕಾಶಿ ವಿದ್ಯಾಸಂಸ್ಥೆಯಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿರುವ À ಇಬ್ಬನಿ, ಬಜೆಗುಂಡಿ ಗ್ರಾಮದ ಪಿ.ಎ.ಲೋಕೇಶ್ ಮತ್ತು ನಯನ ದಂಪತಿ ಪುತ್ರಿ.