ಕರಿಕೆ, ಜ. 1: ಲಯನ್ಸ್ ಕ್ಲಬ್ ಕೋಳಿಚಾಲ್ ಇವರ ನೇತೃತ್ವದಲ್ಲಿ ಕರಿಕೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸಭಾ ಭವನದಲ್ಲಿ ಉಚಿತ ಕಣ್ಣಿನ ಪೊರೆ ಚಿಕಿತ್ಸಾ ಶಿಬಿರವನ್ನು ತಾ. 5 ರಂದು ಹಮ್ಮಿಕೊಳ್ಳಲಾಗಿದೆ.
ಲಯನ್ಸ್ ಕ್ಲಬ್ ಕೋಳಿಚಾಲ್, ಮಾವುಂಗಾಲ್ ಸಂಜೀವಿನಿ ಆಸ್ಪತ್ರೆ, ಕರಿಕೆ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇವರ ಸಂಯುಕ್ತ ಆಶ್ರಯ ದಲ್ಲಿ ನಡೆಯಲಿದ್ದು, ಶಿಬಿರದಲ್ಲಿ ಕನ್ನಡಕ ಅಗತ್ಯವಿರುವವರಿಗೆ ಅರ್ಧ ಬೆಲೆಯಲ್ಲಿ ಕನ್ನಡಕ ವಿತರಿಸಲಾಗು ವುದು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗವನ್ನು ಪಡೆದು ಕೊಳ್ಳುವಂತೆ ಕಾರ್ಯ ಕ್ರಮ ಆಯೋಜಕರು ಕೋರಿದ್ದಾರೆ.