ಮಡಿಕೇರಿ, ಜ. 2: ಕಟ್ಟೆಮಾಡು ಗ್ರೀನ್ಸ್ ಯುವಕ ಸಂಘದ ಆಶ್ರಯದಲ್ಲಿ ತಾ. 5 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕಟ್ಟೆಮಾಡು ಗ್ರಾಮದ ಗ್ರೀನ್ಸ್ ಯುವಕ ಸಂಘದ ಕಟ್ಟಡದಲ್ಲಿ ಉಚಿತ ಎಲುಬು ತಪಾಸಣಾ -ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ.
ಶಿಬಿರದಲ್ಲಿ ಕಾಲುನೋವು, ಕೈನೋವು, ಗಂಟುನೋವು ಇನ್ನಿತರ ಯಾವುದೇ ತರಹದ ಮೂಳೆಗಳ ಗಂಟುನೋವುಗಳ ತಪಾಸಣೆ ನಡೆಸಲಾಗುವದು. ಶಿಬಿರದಲ್ಲಿ ಮೈಸೂರಿನ ಇ.ಎಸ್.ಐ. ಆಸ್ಪತ್ರೆಯ ಎಲುಬು ತಜ್ಞ ವೈದ್ಯ ಡಾ. ರಮೇಶ್ ಜೇವೂರ್ ಭಾಗವಹಿಸಲಿದ್ದಾರೆ ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.