ಗೋಣಿಕೊಪ್ಪ ವರದಿ, ಜ. 2 : ಚೆನ್ನೈ ಸ್ಪೋಟ್ರ್ಸ್ ಯೂನಿವರ್ಸಿಟಿ, ಇಂಡಿಯನ್ ವಿಶ್ವವಿದ್ಯಾಲಯ ಒಕ್ಕೂಟ ವತಿಯಿಂದ ಚೆನ್ನೈ ವಿವಿ ಮೈದಾನದಲ್ಲಿ ನಡೆದ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯ ಮಟ್ಟದ ಮಹಿಳಾ ಹಾಕಿ ಟೂರ್ನಿಯಲ್ಲಿ ಕೊಡಗು ಜಿಲ್ಲೆಯ ಆಟಗಾರರನ್ನು ಒಳಗೊಂಡಿರುವ ಮಂಗಳೂರು ವಿಶ್ವವಿದ್ಯಾಲಯ ತಂಡವು ದ್ವಿತೀಯ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಗೆದ್ದುಕೊಂಡಿದೆ.
ಟೂರ್ನಿಯಲ್ಲಿ ಚೆನ್ನೈ ವಿವಿ ಹಾಗೂ ಕ್ಯಾಲಿಕಟ್ ವಿವಿ ವಿರುದ್ಧ ಗೆಲುವು ದಾಖಲಿಸಿದ್ದ ಮಂಗಳೂರು ತಂಡವು ಬುಧವಾರ ಮೈಸೂರು ವಿವಿ ವಿರುದ್ಧ 0-1 ಗೋಲುಗಳಿಂದ ಸೋಲನುಭವಿಸಿತ್ತು. ಮೈಸೂರು ವಿವಿ ಪ್ರಥಮ ಸ್ಥಾನ ಪಡೆದುಕೊಂಡಿತು.
ತಂಡದಲ್ಲಿ ಸಿ.ಜೆ. ಸಂಗೀತ, ಸಿ.ಆರ್. ಕುಮುದಾ, ಎನ್. ನಿವೇದಿತಾ, ಎಂ.ಎಸ್. ಜೀರ್ತನಾ, ಕೆ. ಪಿ. ಮಿಲನ, ಕೆ. ಎಸ್. ವಿದ್ಯಾ, ಕೆ. ಎ. ಪಾರ್ವತಿ, ಪಿ.ಎ. ಪವಿತ್ರ, ಆರ್. ಸುಶ್ಮಿತಾ, ಎಸ್.ಪಿ. ಲಿಕಿತಾ, ಪ್ರಿಯಾದರ್ಶಿನಿ, ಕೆ.ಎ. ದೀಪ್ತಿ, ಕೆ.ಎಸ್. ನೀತು, ಕೆ. ಅಗ್ನಿಸ್, ಎಂ.ಜೆ. ಲೀಲಾವತಿ, ಚೆಲುವಾಂಬ ಹಾಗೂ ಪದ್ಮಪ್ರಿಯ ಇದ್ದರು. ತರಬೇತುದಾರರಾಗಿ ಮೂಕಚಂಡ ನಿರನ್ ನಾಚಪ್ಪ, ವ್ಯವಸ್ಥಾಪಕರಾಗಿ ಸಾಹಿರಾ ಬಾನು ಕಾರ್ಯನಿರ್ವಹಿಸಿದರು.