ಗೋಣಿಕೊಪ್ಪಲು, ಜ. 2: ಗೋಣಿಕೊಪ್ಪ ಸೆಂಟ್ ಥಾಮಸ್ ಶಾಲೆಯಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮವು ತಾ.3ರಂದು (ಇಂದು) ಮಧ್ಯಾಹ್ನ 4 ಗಂಟೆಗೆ ಬೆಳ್ತಂಗಡಿಯ ರೆ.ಡಾ.ಲಾರೆನ್ಸ್ ಮುಕ್ವಿ ಸಾನ್ನಿಧ್ಯದಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಸ್ವಾಮೀಜಿಗಳಾದ ಶ್ರೀಬೋಧ ಸ್ವರೂಪನಂದಾಜಿ ಮಹರಾಜ್, ಗೋಣಿಕೊಪ್ಪ ಶಾಫಿ ಜುಮಾ ಮಸೀದಿಯ ಖತೀಬ್ ಮಹಮ್ಮದ್ ಹಾಲಿ ಫೈಜಿ, ಮೈಸೂರಿನ ಸೆಂಟ್ ಥಾಮಸ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ರೆ.ಡಾ. ವರ್ಗಿಸ್ ಕೆಲಂಪರಂಬಿಲ್ ಆಗಮಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ಜಿಲ್ಲಾ ಪಂಚಾಯ್ತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸಿ.ಕೆ.ಬೋಪಣ್ಣ, ಗ್ರಾಮ ಪಂಚಾಯಿತಿ ಅಧ್ಯಕೆÀ್ಷ ಸೆಲ್ವಿ, ಸಾರ್ರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್. ಮಚ್ಚಾಡೋ, ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಕಲಾ ಬೆಳಗಿ, ಮೈಸೂರು ಸೆಂಟ್ ಥಾಮಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರೆ.ಫಾದರ್ ಜೋಸೆಫ್ ಪಿಲಿಫ್ ಎನ್. ಗೋಣಿಕೊಪ್ಪ ಸೆಂಟ್ ಥಾಮಸ್ ಶಾಲೆಯ ವ್ಯವಸ್ಥಾಪಕ ರೆ.ಫಾದರ್ ಅಲೆಕ್ಸ್ ಒಟ್ಟಪಾಲಕಲ್, ನಿವೃತ್ತ ಮುಖ್ಯೋಪಾಧ್ಯಾಯ ಇಮೆಕ್ಯೂಲೆಟ್, ಶಾಲಾ ಆಡಳಿತ ಮಂಡಳಿಯ ಪ್ರಮುಖರಾದ ಎಂ.ಪಿ. ಕೇಶವ್ಕಾಮತ್, ಅಬ್ದುಲ್ಸಮ್ಮದ್, ಎ.ಜೆ. ಬಾಬು, ವಿಲ್ಸನ್, ಪ್ರಭಾವತಿ, ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಪಿ.ಕೆ.ಪ್ರವೀಣ್, ಉಪಾಧ್ಯಕ್ಷ ಕುಲ್ಲಚಂಡ ಪ್ರವೀಣ್ ಗಣಪತಿ, ಕಾರ್ಯದರ್ಶಿ ಎಂ.ಕೆ.ಮಾಚಯ್ಯ, ಶರತ್ಕಾಂತ್, ಖಜಾಂಜಿ ಚಂದನ್ ಕಾಮತ್, ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಶಾಲೆಯ ಸುವರ್ಣ ಮಹೋತ್ಸವದ ಸವಿ ನೆನಪಿನಲ್ಲಿ ಹಳೆಯ ವಿದ್ಯಾರ್ಥಿಗಳಿಂದ ನಿರ್ಮಾಣವಾಗಲಿ ರುವ ಸುಸಜ್ಜಿತವಾದ ಆಧುನಿಕ ಶೈಲಿಯ ರೂ. 11 ಲಕ್ಷ ವೆಚ್ಚದ ಬಾಸ್ಕೆಟ್ಬಾಲ್ ಮೈದಾನಕ್ಕೆ ಶಾಸಕ ಕೆ.ಜಿ.ಬೋಪಯ್ಯ ಭೂಮಿ ಪೂಜೆ ನೆರವೇರಿಸಲಿದ್ದಾರೆ.