*ಗೋಣಿಕೊಪ್ಪಲು, ಜ. 2: ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ಚಿಕಿತ್ಸೆಗಾಗಿ ನೀಡುವ ಪರಿಹಾರ ಧನವನ್ನು ಶಾಸಕರು ಫಲಾನುಭವಿಗಳಿಗೆ ವಿತರಿಸಿದರು.

ವೀರಾಜಪೇಟೆ ಶಾಸಕರ ಕಚೇರಿಯಲ್ಲಿ ಎರಡು ಲಕ್ಷದ ಹನ್ನೆರಡು ಸಾವಿರ ರೂಪಾಯಿಗಳ 3 ಚೆಕ್ಕುಗಳನ್ನು ಶಾಸಕರು ವಿತರಿಸಿದರು.

ಇಪ್ಪತ್ತೊಂದು ಸಾವಿರದ ಐದುನೂರ ಎಪ್ಪತ್ಮೂರು ರೂಪಾಯಿಗಳ ಚೆಕ್ಕನ್ನು ಹಾಲುಗುಂದ ಗ್ರಾಮದ ನಿವಾಸಿ ಆಲಿ ಕೆ.ವೈ, ಪೆÇನ್ನಪ್ಪಸಂತೆ ಧನುಗಾಲ ಗ್ರಾಮದ ನಿವಾಸಿ ಜಾನಕಿಯವರಿಗೆ ಐವತ್ತು ಸಾವಿರ ರೂಪಾಯಿ ಹಾಗೂ ಸಿದ್ದಾಪುರ ನಿವಾಸಿ ಎಸ್.ಸಿ. ಗುರುರಾಜ್ ಅವರಿಗೆ ಒಂದು ಲಕ್ಷದ ನಲವತ್ತು ಸಾವಿರ ಆರುನೂರ ತೊಂಬತ್ತೆರಡು ಸಾವಿರ ರೂಪಾಯಿಯ ಪರಿಹಾರ ನಿಧಿ ಚೆಕ್ಕನ್ನು ಶಾಸಕರಿಂದ ಪಡೆದುಕೊಂಡರು.