2019 ರಲ್ಲಿ ವಿಶ್ವಮಟ್ಟದಲ್ಲಿ ಎಡೆಬಿಡದ ಶೃಂಗಸಭೆಗಳು, ದುರಂತಗಳು ಪ್ರತಿಭಟನೆಗಳದ್ದೇ ಕಾರುಬಾರು.v ಅಮೇರಿಕಾದ ಇತಿಹಾಸ ದಲ್ಲಿಯೇ ಪ್ರಥಮ ಬಾರಿ ಯೆಂಬಂತೆ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಣು ಶಕ್ತಿಯ ಪ್ರಬಲ ರಾಷ್ಟ್ರವಾದ ಉತ್ತರ ಕೊರಿಯಾದ ಪರಮೋಚ್ಚ ನಾಯಕ ಕಿಂ ಜಾನ್‍ಗುನ್ ಜೊತೆ ಪರಮಾಣು ಶಾಂತಿ ಸ್ಥಾಪನೆ ಕುರಿತು ಮಾತುಕತೆ ನಡೆಸಿದರು.v ಇಂಗ್ಲೆಂಡ್‍ನ ಪ್ರಧಾನಿ ತೆರೆಸ ಮೇ ಅವರು ತನ್ನ ರಾಷ್ಟ್ರವನ್ನು ಬ್ರೆಕ್ಸಿಟ್ ಚಾಲನೆ ಮೂಲಕ ಯುರೋಪ್ ರಾಷ್ಟ್ರಗಳ ಒಕ್ಕೂಟದಿಂದ ಹೊರಬರಲು ನಡೆಸಿದ ಪ್ರಯತ್ನ ವಿಫಲಗೊಂಡಿತು. ಬಳಿಕ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಚುನಾವಣೆ ಘೋಷಣೆÉಯಾಯಿತು. ನೂತನ ಪ್ರಧಾನಿಯಾಗಿ ಬೊರಿಸ್ ಜಾನ್‍ಸನ್ ಚುನಾಯಿತರಾದರು.

v ತಾಲಿಬಾನ್ ಉಗ್ರಗಾಮಿಗಳೊಂದಿಗಿನ ಶಾಂತಿ ಮಾತುಕತೆಯನ್ನು ಅಮೇರಿಕಾ ಸ್ಥಗಿತಗೊಳಿಸಿತು v ಇರಾಕ್‍ನ ಇಸ್ಲಾಮಿಕ್ ರಾಜ್ಯ ನಾಯಕ ಅಬೂಬಕರ್ ಅಲ್ ಬಾಗ್ದಾದಿ ಅಮೇರಿಕಾ ಪಡೆಗಳಿಂದ ಹತ್ಯೆಗೊಳಗಾದ. v ಅಲ್ಬಾನಿಯಾದಲ್ಲಿ ಸಂಭವಿಸಿದ ಭೂಕಂಪ 52 ಮಂದಿಯನ್ನು ಬಲಿತೆಗೆದುಕೊಂಡಿತು.v ಮುಖ್ಯವಾಗಿ ಬ್ರ್ರೆಜಿಲ್ ಮತ್ತಿತರ ದೇಶಗಳಲ್ಲಿ 5,500 ಕಿ.ಮೀ ವರೆಗೆ ಪಸರಿಸಿರುವ ಮಳೆ ಪೂರಕ ಅಮೇಜಾನ್ ಅರಣ್ಯ ಪ್ರದೇಶವು ಬಹುತೇಕ ಕಾಡ್ಗಿಚ್ಚಿನಲ್ಲಿ ಸುಟ್ಟು ಹೋಯಿತು. v ಸಿರಿಯಾದ ಆಂತರಿಕ ಯುದ್ಧದಲ್ಲಿ ಅಮಾಯಕರ ಮಾರಣ ಹೋಮ ಮುಂದುವರಿದಿದೆ. ಸಿರಿಯಾ ಮೂಲ ನಿವಾಸಿಗಳಿಗೆ 2019 ರಲ್ಲಿ ಅಮೇರಿಕಾ ತಾನು ಈ ಹಿಂದೆ ನೀಡಿದ್ದ ಮಿಲಿಟರಿ ಬೆಂಬಲ ಹಿಂತೆಗೆದುಕೊಂಡಿದೆ.v ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಗ್ದಂಡನೆಗೆ ಗುರಿಯಾದರು. ಉಕ್ರೇನ್ ಅಧ್ಯಕ್ಷರ ವಿರುದ್ಧ ತನ್ನ ಅಧಿಕಾರ ದುರುಪಯೋಗ ಮಾಡಿಕೊಂಡು ಒತ್ತಡ ಹೇರಿದ ಆರೋಪ ಹಾಗೂ ಅಧಿಕಾರ ದುರ್ಬಳಕೆ ತನಿಖೆಗೆ ಸಂಸತ್ತಿಗೆ ಅಡ್ಡಿಪಡಿಸಿದ ಆರೋಪಕ್ಕಾಗಿ ಡೆಮೋಕ್ರೆಟ್‍ಗಳು ನೀಡಿದ ದೂರಿನ ಅನ್ವಯ ಈ ವಾಗ್ದಂಡನೆ ವಿಧಿಸಲಾಗಿದೆ.

v ಚೀನಾದ ವಿಶೇಷ ಆಡಳಿತವಿದ್ದರೂ ಸ್ವಾಯತ್ತ ರಾಷ್ಟ್ರವೆನಿಸಿರುವ ಹಾಂಕಾಂಗ್‍ನಲ್ಲಿ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಕ ಪ್ರತಿಭಟನೆ ನಡೆಯಿತು. ಶಂಕಿತ ಆರೋಪಿಗಳನ್ನು ಚೀನಾಕ್ಕೆ ಒಪ್ಪಿಸುವ ಮಸೂದೆ ವಿರುದ್ಧ ಜನ ದಂಗೆಯೆದ್ದರು. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ವಾತಂತ್ರ್ಯ ಪರ ಹೋರಾಟಗಾರರು ಅಧಿಕ ಸ್ಥಾನಗಳಿಸಿದರು.