v ತನ್ನ ಒಂದು ಕೃತಕ ಕಾಲನ್ನು ದೌರ್ಬಲ್ಯ ವೆಂದು ಭಾವಿಸದೆ ಉತ್ತರ ಪ್ರದೇಶದ ಕ್ರೀಡಾಪಟು ಅರುಣಿಮಾ ಸಿನ್ಹಾ ಅಂಟಾರ್ಟಿಕಾದ ಮೌಂಟ್ ವಿನ್ಸನ್ ಬೆಟ್ಟ ಏರಿ ದಾಖಲೆ ಸ್ಥಾಪಿಸಿದ್ದಾರೆ.

v ಸಾಮಾನ್ಯ ವರ್ಗದ ವಿಭಾಗದಡಿಯಲ್ಲಿ ಆರ್ಥಿಕ ದುರ್ಬಲರಿಗೆ ಕೇಂದ್ರ ಸರಕಾರ ಶೇ. 10 ಮೀಸಲಾತಿ ಘೋಷಿಸಿತು. v ದೇನಾ ಬ್ಯಾಂಕ್-ವಿಜಯಾ ಬ್ಯಾಂಕ್‍ಗಳು ಬ್ಯಾಂಕ್ ಆಫ್ ಬರೋಡದಲ್ಲಿ ವಿಲೀನವಾದವು.

v ಗಡಿ ಪ್ರದೇಶ ಜಮ್ಮು-ಕಾಶ್ಮೀರ ಹೆದ್ದಾರಿಯ ಪುಲ್ವಾಮಾದಲ್ಲಿ ಉಗ್ರರು 40 ಮಂದಿ ರಿಸರ್ವ್ ಪೊಲೀಸರನ್ನು ಒಯ್ಯುತ್ತಿದ್ದ ವಾಹನದ ಮೇಲೆ ಆತ್ಮಾಹುತಿ ದಾಳಿ ನಡೆಸಿ ಎಲ್ಲರನ್ನೂ ಹತೈಗೈದರು. v ಅಸ್ಸಾಂನ ಗೋಲಾಘಾಟ್ ಮತ್ತು ಜೋರ್ಹತ್ ಜಿಲ್ಲೆಗಳಲ್ಲಿ ವಿಷ ಬೆರೆತ ಮದ್ಯ ಸೇವಿಸಿ 168 ಮಂದಿ ಸತ್ತು 300 ಮಂದಿ ಚಿಕಿತ್ಸೆಗೆ ಒಳಗಾದರು. v ಪಾಕ್ ಆಕ್ರಮಿತ ಪ್ರದೇಶ ಬಾಲಾಕೋಟ್‍ನಲ್ಲಿ ಉಗ್ರಗಾಮೀ ಶಿಬಿರಗಳ ಮೇಲೆ ಭಾರತವು ವ್ಯವಸ್ಥಿತ ವಾಯು ಧಾಳಿ ನಡೆಸಿ ಧ್ವಂಸಗೊಳಿಸಿತು.

v ಭಾರತವು ಪ್ರಥಮ ಬಾರಿಗೆ ಉಪಗ್ರಹ ವಿರೋಧಿ ಅಸ್ತ್ರ (ಮಿಷನ್ ಶಕ್ತಿ) ವನ್ನು ಹೊಂದುವ ಮೂಲಕ ವಿಶ್ವದ 4ನೆ ರಾಷ್ಟ್ರವಾಗಿ ಪರಿಗಣಿತಗೊಂಡಿತು

v ದೇಶದಲ್ಲಿ ಲೋಕಸಭೆಗೆ ಸದಸ್ಯರುಗಳನ್ನು ಆರಿಸಲು ಸಾರ್ವತ್ರಿಕ ಚುನಾವಣೆಗೆ ಮತದಾನ ಪ್ರಕ್ರಿಯೆ ಪ್ರಾರಂಭಗೊಂಡಿತು.v ಒಡಿಶಾದಲ್ಲಿ ಚಂಡಮಾರುತ ಫನಿ ರಭಸ

v ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭಾರೀ

ಬಹುಮತ ಸಾಧಿಸು ವದರೊಂದಿಗೆ ನರೇಂದ್ರ ಮೋದಿ ದ್ವಿತೀಯ ಬಾರಿಗೆ ದೇಶದ ಪ್ರಧಾನಿ ಯಾಗಿ ಆಯ್ಕೆ ಗೊಂಡರು.

v ಸೂರತ್‍ನಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ 22 ಮಂದಿ ಭಸ್ಮಗೊಂಡರು.*ವಿದಿಶಾ ಬಾಲಿಯಾನ್ ಮಿಸ್ ವಿಶ್ವ ಕಿವುಡು ಸುಂದರಿಯಾಗಿ ಭಾರತದಿಂದ ಆಯ್ಕೆಯಾದ ಪ್ರಥಮಳೆನಿಸಿದಳು

v ಇಸ್ರೋದಿಂದ ಚಂದ್ರಯಾನ-2 ಉಡಾವಣೆ v ದೇಶದಲ್ಲಿ ತ್ರಿವಳಿ ತಲಾಖ್ ನಿಷೇಧ ಮಸೂದೆ ಅಂಗೀಕಾರv ಜಮ್ಮು ಕಾಶ್ಮಿರದಲ್ಲಿ ಅಸ್ತಿತ್ವದಲ್ಲಿದ್ದ 370 ನೇ ವಿಧಿ ಹಾಗೂ 35 ಎ ವಿಧಿ ರದ್ದು. ಜಮ್ಮು ಕಾಶ್ಮೀರ ಮತ್ತು ಲಡಾಕ್‍ಗಳನ್ನು ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಣೆ

v ಮಹಾರಾಷ್ಟ್ರದಲ್ಲಿ ಭಾರೀ ಮಳೆ-ಪ್ರವಾಹ-ಹಾನಿ.

v ಸಿಬಿಐನಿಂದ ಕೇಂದ್ರದ ಮಾಜಿ ವಿತ್ತ ಸಚಿವ ಚಿದಂಬರ್ ಬಂಧನv ಹೈದರಾಬಾದ್ ನ 74 ವಯಸ್ಸಿನ ಮಹಿಳೆ ಎರ್ರಮಟ್ಟಿ ಮಂಗಮ್ಮ ( ಪತಿ ರಾಜಾರಾವ್) ವೈದ್ಯಕೀಯ ಆಧುನಿಕ ವಿಧಾನದ ಮೂಲಕ ಅವಳಿ ಮಕ್ಕಳನ್ನು ಹೆತ್ತು ದಾಖಲೆ ಸ್ಥಾಪಿಸಿದಳುvದೇಶದ ಸರ್ವೋಚ್ಚ ನ್ಯಾಯಾಲಯದಿಂದ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣಕ್ಕೆ ಅಸ್ತು; ಮಸೀದಿಗೂ ಪ್ರತ್ಯೇಕ ಜಾಗ ನೀಡಿಕೆಗೆ ತೀರ್ಪು.

v ಹೈದರಾಬಾದ್ ಸನಿಹ ಶಂಶಾಬಾದ್ ನಲ್ಲಿ 26 ವರ್ಷದ ವೈದ್ಯೆಯೊಬ್ಬರನ್ನು ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿದರು. ಆರೋಪಿಗಳ ಬಂಧನದ ಬಳಿಕ ಪ್ರತಿಧಾಳಿ ಘಟನೆ ಹಿನ್ನೆಲೆ ಪೊಲೀಸರು ನಾಲ್ವರನ್ನೂ ಗುಂಡೇಟಿನಿಂದ ಹತ್ಯೆ ಮಾಡಿದರು.v ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆ-ರಾಜ್ಯಸಭೆಯಲ್ಲಿ ಬಹುಮತದಿಂದ ಅಂಗೀಕಾರ.ದೇಶದಲ್ಲಿ ಮೃತರಾದ ಪ್ರಮುಖರು

v ಕೇಂದ್ರ ಮಾಜಿ ಸಚಿವ ಜಾರ್ಜ್ ಫರ್ನಾಂಡಿಸ್, ಕೇಂದ್ರದ ಮಾಜಿ ಸಚಿವ ಮನೋಹರ್ ಪರ್ರಿಕರ್, ಮಾಜಿ ಸಚಿವ ಅರುಣ್ ಜೇಟ್ಲಿ

v ಖ್ಯಾತ ವಕೀಲ ರಾಂಜೇಟ್ ಮಲಾನಿ.

v ದೇಶದ ಬಹುತೇಕ ಕಡೆ ಪೌರತ್ವ ಮಸೂದೆ ತಿದ್ದುಪಡಿಗೆ ವಿರೋಧ, ಪ್ರತಿಭಟನೆ, ಹಿಂಸಾಚಾರ, ಸಾವು-ನೋವು.

v ಅಪರೂಪದ ಕಂಕಣ ಸೂರ್ಯಗ್ರಹಣ ದರ್ಶನ ಬಿಜೆಪಿಯ ಬಲಕ್ಕೆ ಸವಾಲೊಡ್ಡಿದ ಪ್ರ್ರಾದೇಶಿಕ ಪಕ್ಷಗಳು : ಬಿಜೆಪಿ ಭಾರಿ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೂ ದೇಶದ ಅನೇಕ ರಾಜ್ಯಗಳಲ್ಲಿ ತನ್ನ ಪ್ರಾಬಲ್ಯ ಕಳೆದುಕೊಂಡಿತು. ಶೇ 71ರಷ್ಟು ಭಾಗದ ಮೇಲೆ ಬಿಜೆಪಿ ಪ್ರಭಾವವಿತ್ತು. ಅನೇಕ ರಾಜ್ಯಗಳಲ್ಲಿ ಮಿತ್ರಪಕ್ಷಗಳೊಂದಿಗೆ ಸೇರಿ ಸರ್ಕಾರ ರಚಿಸಿತ್ತು. ಆದರೆ ಈಗ ಅದು ಶೇ 41ಕ್ಕೆ ಇಳಿದಿದೆ. ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಹಾಗೆಯೇ ರಾಜಕೀಯ ಹಿನ್ನಡೆ ಅನುಭವಿಸಿದ್ದ ಕಾಂಗ್ರೆಸ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಚತ್ತೀಸ್Àಗಡದಲ್ಲಿ ಅಧಿಕಾರಕ್ಕೆ ಬರುವ ಮೂಲಕ ಮತ್ತೆ ಚೇತರಿಸಿಕೊಂಡಿದೆ. ಹಾಗೆಯೇ ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ, ಜಾರ್ಖಂಡ್‍ಗಳಲ್ಲಿ ಪ್ರಾದೇಶಿಕ ಪಕ್ಷಗಳು ತಮ್ಮ ಶಕ್ತಿ ಪ್ರದರ್ಶಿಸಿವೆ. ಈ ವರ್ಷವೇ ಬಿಜೆಪಿ ಐದನೇ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದೆ.

ಜಾರ್ಖಂಡ್‍ನಲ್ಲಿ ಕೈತಪ್ಪಿದ ಅಧಿಕಾರ : ಜಾರ್ಖಂಡ್‍ನಲ್ಲಿ ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ ಅಧಿಕಾರ ನಡೆಸಿದ್ದ ಬಿಜೆಪಿ, ವರ್ಷದ ಕೊನೆಯಲ್ಲಿ ಸೋಲಿನ ಆಘಾತ ಅನುಭವಿಸಿತು. ಜೆಎಂಎಂ ಪಕ್ಷದ ಮೈತ್ರಿಕೂಟ ಪಾರಮ್ಯಕ್ಕೆ ಬಿಜೆಪಿ ಶರಣಾಯಿತು. ಹರಿಯಾಣದಲ್ಲಿ 90 ಕ್ಷೇತ್ರಗಳಲ್ಲಿ ಬಿಜೆಪಿ 40ರಲ್ಲಿ ಜಯಗಳಿಸಿತು. ಕಾಂಗ್ರೆಸ್ 31 ಸ್ಥಾನ ಗಳಿಸಿತು. ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡ ಬಿಜೆಪಿ ಮತ್ತೆ ಅಧಿಕಾರಕ್ಕೇರಿತು

ಮಹಾರಾಷ್ಟ್ರದಲ್ಲಿ ಅಚ್ಚರಿಯ ಬೆಳವಣಿಗೆ : ಅದಕ್ಕೂ ಮೊದಲು ಮಹಾರಾಷ್ಟ್ರದಲ್ಲಿ ಅಕ್ಟೋಬರ್‍ನಲ್ಲಿ ನಡೆದ ಚುನಾವಣೋತ್ತರ ನಾಟಕೀಯ ಬೆಳವಣಿಗೆಗಳು ಕುತೂಹಲ ಕೆರಳಿಸಿತ್ತು. ಜಂಟಿಯಾಗಿ ಚುನಾವಣೆ ಎದುರಿಸಿದ್ದ ಬಿಜೆಪಿ-ಶಿವಸೇನಾ ಮೈತ್ರಿಕೂಟಕ್ಕೆ ಬಹುಮತ ಸಿಕ್ಕರೂ ಅಧಿಕಾರ ಹಂಚಿಕೆ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯ ಭಾರಿ ರಾಜಕೀಯ ಬದಲಾವಣೆಗೆಗೆ ಕಾರಣವಾಯಿತು. ಶಿವಸೇನಾ ತನ್ನ ಸೈದ್ಧಾಂತಿಕ ವೈರಿಗಳಾದ ಕಾಂಗ್ರೆಸ್ ಮತ್ತು ಎನ್‍ಸಿಪಿ ಜತೆಗೂಡಿ ಸರ್ಕಾರ ರಚನೆಗೆ ಪ್ರಯತ್ನ ನಡೆಸಿತ್ತು. ಅಹೋರಾತ್ರಿ ಬೆಳವಣಿಗೆಯಲ್ಲಿ ಎನ್‍ಸಿಪಿ ನಾಯಕ ಅಜಿತ್ ಪವಾರ್, ಬಿಜೆಪಿ ಜತೆ ಕೈಗೂಡಿಸಿ ಸರ್ಕಾರ ರಚಿಸಿದ್ದರು. ಆದರೆ ಅದಕ್ಕೆ ಎನ್‍ಸಿಪಿಯ ಇತರ ಶಾಸಕರ ಬೆಂಬಲ ಸಿಗದ ಕಾರಣ ಅದು ಮೂರೇ ದಿನದಲ್ಲಿ ಬಿದ್ದುಹೋಯಿತು. ಕೊನೆಗೆ ಶಿವಸೇನಾ-ಎನ್‍ಸಿಪಿ-ಕಾಂಗ್ರೆಸ್ ತ್ರಿಪಕ್ಷೀಯ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು.

ಸೋತ ರಾಹುಲ್, ಹುದ್ದೆ ತ್ಯಾಗ: ಲೋಕಸಭೆ ಚುನಾವಣೆಯಲ್ಲಿನ ಆಘಾತಕಾರಿ ಸೋಲು ಕಾಂಗ್ರೆಸ್ ನಾಯಕತ್ವದ ಮೇಲೆ ತೀವ್ರ ಪರಿಣಾಮ ಬೀರಿತು. ಸೋಲಿಗೆ ಹೊಣೆ ಹೊತ್ತು ಪಕ್ಷದ ಅಧ್ಯಕ್ಷ ಸ್ಥಾನ ತ್ಯಜಿಸುವುದಾಗಿ ರಾಹುಲ್ ಗಾಂಧಿ ಪ್ರಕಟಿಸಿದರು. ಅವರ ಮನವೊಲಿಕೆಯ ಪ್ರಯತ್ನ ವಿಫಲವಾಯಿತು. ಅವರ ಜಾಗಕ್ಕೆ ನೆಹರೂ-ಗಾಂಧಿ ಕುಟುಂಬದವರಲ್ಲದ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂಬ ಒತ್ತಾಯ ಕೇಳಿಬಂದರೂ ಅದು ಈಡೇರಲಿಲ್ಲ. ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷರಾಗಿ ಪಕ್ಷದ ಜವಾಬ್ದಾರಿ ಹೊತ್ತುಕೊಂಡರು. ಲೋಕಸಭೆ ಚುನಾವಣೆಯಲ್ಲಿ ಗಾಂಧಿ ಕುಟುಂಬ ಮೊದಲ ಸೋಲು ಕೂಡ ಕಂಡಿತು. ಅಮೇಠಿಯಲ್ಲಿ ರಾಹುಲ್ ಗಾಂಧಿ ಬಿಜೆಪಿಯ ಸ್ಮೃತಿ ಇರಾನಿ ಎದುರು ಸೋಲಿನ ಕಹಿ ಅನುಭವಿಸಿದರು. ವಯನಾಡು ಕ್ಷೇತ್ರದಲ್ಲಿಯ ಸ್ಪರ್ಧಿಸಿದ್ದ ರಾಹುಲ್, ಅಲ್ಲಿ ಸುಲಭದ ಜಯಗಳಿಸಿದರು. ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ವರ್ಚಸ್ಸಿನ ಮೂಲಕ ಮತಗಳನ್ನು ಸೆಳೆಯುವ ಪ್ರಯತ್ನವೂ ಕಾಂಗ್ರೆಸ್‍ಗೆ ಕೈಕೊಟ್ಟಿತು. ನಂತರದ ವಿಧಾನಸಭೆ ಚುನಾವಣೆಗಳ ಪ್ರಚಾರದಲ್ಲಿ ರಾಹುಲ್ ಗಾಂಧಿ ನಿರಾಸಕ್ತಿ ಪ್ರದರ್ಶಿಸಿದ್ದರು.

ಆಂಧ್ರದಲ್ಲಿ ಜಗನ್ ದರ್ಬಾರು : ಎನ್‍ಡಿಎ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಆಂಧ್ರಪ್ರದೇಶದ ಟಿಡಿಪಿ ನಾಯಕ ಎನ್. ಚಂದ್ರಬಾಬು ನಾಯ್ಡು, ಲೋಕಸಭೆ ಮತ್ತು ವಿÀಧಾನಸಭೆ ಎರಡು ಚುನಾವಣೆಯಲ್ಲಿಯೂ ಭಾರಿ ಮುಖಭಂಗ ಅನುಭವಿಸಿದರು. ವಿಧಾನಸಭೆ ಚುನಾವಣೆಯಲ್ಲಿ 175 ಕ್ಷೇತ್ರಗಳ ಪೈಕಿ 151 ಕಡೆ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‍ಆರ್ ಕಾಂಗ್ರೆಸ್ ಜಯಗಳಿಸಿದರೆ, ಟಿಡಿಪಿ ಕೇವಲ 23 ಸೀಟುಗಳಲ್ಲಿ ಗೆಲುವು ಸಾಧಿಸಿತು.

ನವೀನ್ ಪಟ್ನಾಯಕ್ ಪ್ರಾಬಲ್ಯ : ಲೋಕಸಭೆ ಚುನಾವಣೆಯೊಂದಿಗೇ ಒಡಿಶಾದ ವಿಧಾನಸಭೆ ಚುನಾವಣೆ ಕೂಡ ನಡೆಯಿತು. ಸತತ ಮೂರನೇ ಬಾರಿಗೆ ಮುಖ್ಯಮಂತ್ರಿ ಯಾಗುವ ಮೂಲಕ ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್ ಬಿಜೆಪಿಗೆ ಸೆಡ್ಡು ಹೊಡೆದರು. 147 ಕ್ಷೇತ್ರಗಳಲ್ಲಿ ಬಿಜೆಡಿ 113 ಕಡೆ ಗೆಲುವು ಸಾಧಿಸಿತು. ಬಿಜೆಪಿ 23 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಗಳಿಸಿದ್ದು ಕೇವಲ 9 ಸ್ಥಾನ. ಈಶಾನ್ಯ ಭಾಗದಲ್ಲಿರುವ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಏಪ್ರಿಲ್‍ನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಹಿನ್ನಡೆ ಅನುಭವಿಸಿತು. ಸಿಕ್ಕಿಂನಲ್ಲಿ 32 ಸದಸ್ಯಬಲದ ವಿಧಾನಸಭೆಯಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ 17 ಸ್ಥಾನಗಳೊಂದಿಗೆ ಬಹುಮತ ಸಾಧಿಸಿತು. ಮತ್ತೊಂದು ಪ್ರಾದೇಶಿಕ ಪಕ್ಷ ಎಸ್‍ಡಿಎಫ್ ಉಳಿದ 15 ಸ್ಥಾನಗಳನ್ನು ಗೆದ್ದಿತು. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಶೂನ್ಯ ಸಾಧನೆಯೊಂದಿಗೆ ಭಾರಿ ಮುಖಭಂಗ ಅನುಭವಿಸಿದ್ದವು. ಗೋವಾದಲ್ಲಿ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್‍ನ 15 ಶಾಸಕರಲ್ಲಿ 10 ಮಂದಿ ಬಿಜೆಪಿ ಸೇರಿದರು.