v ಮಳೆ ಪರಿಹಾರಕ್ಕೆ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ಒತ್ತಡ ಹೆಚ್ಚಿದಾಗ ಬೆಳೆ ಹಾನಿಗೆ ಹೆಕ್ಟೇರ್ ರೂ. 10 ಸಾವಿರ ಪರಿಹಾರ ಹಾಗೂ ಮನೆ ಕಳೆದುಕೊಂಡ ಸುಮಾರು 27,000 ಮಂದಿಗೆ ತಲಾ ರೂ. 5 ಲಕ್ಷ ನೀಡುವದಾಗಿ ಮುಖ್ಯಮಮತ್ರಿ ಬಿಎಸ್. ಯಡಿಯೂರಪ್ಪ ಘೋಷಿಸಿದರು. v ಕರ್ನಾಟಕದಲ್ಲಿ ಮುಂದುವರಿದ ಮಳೆ; 7 ಸಾವು 10 ಸಾವಿರ ಮಂದಿ, ವಸತಿ ಕಳೆದುಕೊಂಡರು. v ‘‘ಅಕ್ರಮ ಹಣ ವಹಿವಾಟು” ಆರೋಪ vರಾಜ್ಯ ವಿಧಾನಸಭೆಗೆ ನಡೆದ ಉಪ ಚುನಾವಣೆಯ 15 ಸ್ಥಾನಗಳ ಪೈಕಿ ಬಿಜೆಪಿಗೆ 12, ಕಾಂಗ್ರೆಸ್ಗೆ 2, ಓರ್ವ ಪಕ್ಷೇತರರಿಗೆ ಜಯ. ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರ ಸುಭದ್ರ.
v ಕಾಂಗ್ರೆಸ್ ಶಾಸಕಾಂಗ ನಾಯಕತ್ವಕ್ಕೆ ಸಿದ್ದರಾಮಯ್ಯ ರಾಜೀನಾಮೆ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ.
v ಖ್ಯಾತ ಸಾಹಿತಿ ಎಲ್.ಎಸ್.ಶೇಷಗಿರಿ ರಾವ್ ನಿಧನ
ಹಿನ್ನೆಲೆ ತೆರಿಗೆ ಇಲಾಖೆಯಿಂದ ಬಂಧಿತರಾಗಿ 50 ದಿನಗಳ ಕಾಲ ತಿಹಾರ್ ಕಾರಾಗೃಹದಲ್ಲಿದ್ದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಜಾಮೀನಿನಲ್ಲಿ ಬಿಡುಗಡೆ. v ರಾಜ್ಯದ ಮಾಜಿ ಮಂತ್ರಿ ವೈಜನಾಥ್ ಪಾಟೀಲ್ ನಿಧನ.
v ಮಹಿಳೆಯರನ್ನು ಅತ್ಯಾಚಾರಗೈದು ಸಯನೈಡ್ ನೀಡಿ ಕೊಲ್ಲುತ್ತಿದ್ದ ಮೋಹನ್ಗೆ 4 ನೇ ಪ್ರಕರಣದಲ್ಲಿಯೂ ಮರಣ ದಂಡನೆ.
v ಅಂಗನವಾಡಿ ಕಾರ್ಯಕರ್ತೆಯರಿಗೆ ರಾಜ್ಯ ಸರಕಾರದಿಂದ ವೇತನ ಏರಿಕೆ.vಪೌರತ್ವ ಮಸೂದೆ ವಿರೋಧಿಸಿ ಕರ್ನಾಟಕದಾದ್ಯಂತ ಪ್ರತಿಭಟನೆ, ಮಂಗಳೂರಿನಲ್ಲ್ಲಿ ಹಿಂಸಾಚಾರ ಸಂದರ್ಭ ಪೊಲೀಸ್ ಗೋಲೀಬಾರ್ನಿಂದ ಇಬ್ಬರ ಸಾವು.
v 17 ಅನರ್ಹ ಶಾಸಕರ ಅನರ್ಹತೆಯನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದರೂ ಅವರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿತು.
vಕಂಕಣ ಸೂರ್ಯ ಗ್ರಹಣದ ದಿನ ವಿಶೇಷ ಚೇತನ ಮಕ್ಕಳ ಅಂಗ ವೈಕಲ್ಯ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿಂದ ಕಲಬುರ್ಗಿಯ ಸುಲ್ತಾನಪುರಿ ಗ್ರಾಮದಲ್ಲಿ ಮಕ್ಕಳನ್ನು ನೆಲದಲ್ಲಿ ಹೂತಿರುವದು.v ಸಿಎಎ ವಿರೋಧೀ ಪ್ರತಿಭಟನಾ ಹಿಂಸಾಚಾರ ಪ್ರಕರಣದಲ್ಲಿ ಮಂಗಳೂರು ಪೊಲೀಸರಿಂದ 12 ಮಂದಿಯ ಬಂಧನ
v ಸ್ವಾಮಿ ನಿತ್ಯಾನಂದ ವಿದೇಶಕ್ಕೆ ಪರಾರಿ, ರೆಡ್ ಅಲರ್ಟ್ ನೋಟೀಸ್ ನೀಡಲು ಕೇಂದ್ರದಿಂದ ಕರ್ನಾಟಕ ಸರಕಾರಕ್ಕೆ ಸೂಚನೆ.
vಧಾರ್ಮಿಕ- ಸಾಮಾಜಿಕ ಹರಿಕಾರ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಇಹಲೋಕ ನಿರ್ಗಮನ.ಲೋಕಸಭಾ ಚುನಾವಣೆ ಬಳಿಕ ಮೈತ್ರಿ ಸರಕಾರದ ಪತನ
ಜೆ.ಡಿ.ಎಸ್.ನ ಹೆಚ್. ಡಿ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ನ ಡಾ. ಜಿ. ಪರಮೇಶ್ವರ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಕಿತ್ತಾಟ ಜೋರಾಗಿದ್ದೇ 2019ರ ಆರಂಭದಲ್ಲಿ. ಲೋಕಸಭೆ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ದೋಸ್ತಿ ಸರ್ಕಾರದ ಹುಳುಕುಗಳು ಆರಂಭವಾದವು. ವರ್ಷದ ಆರಂಭದಿಂದಲೇ ಟಿಕೆಟ್ ಹಂಚಿಕೆ ಹಾಗೂ ಲೋಕಸಭೆ ಚುನಾವಣೆಗೆ ಮೈತ್ರಿಯ ಮಾತುಕತೆಗಳು ಆರಂಭವಾದವು. ಬಹಿರಂಗವಾಗಿ ಉಭಯ ಪಕ್ಷದ ನಾಯಕರು ಲೋಕಸಭೆಯಲ್ಲಿ ಸ್ವೀಪ್ ಮಾಡುತ್ತೇವೆ ಎಂದು ಹೇಳಿಕೊಂಡರು ಸೋಲು ಕಟ್ಟಿಟ್ಟ ಬುತ್ತಿ, ಮೈತ್ರಿ ಬೇಡವೆಂದು ಪ್ರತಿಯೊಬ್ಬರೂ ಮಾತನಾಡುತ್ತಿದ್ದರು. ಮೈತ್ರಿ ಇಷ್ಟವಿಲ್ಲದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಬಿಜೆಪಿ ಜತೆ ಕೈಜೋಡಿಸಿದರು. ಈ ಅನಧಿಕೃತ ಮೈತ್ರಿಯೇ ಸರ್ಕಾರ ಉರುಳಲು ಕಾರಣವಾಯಿತು.
ಲೋಕಸಭೆ ಚುನಾವಣೆ: ಲೋಕಸಭೆ ಚುನಾವಣೆಯಲ್ಲಿ 20-8 ಮೈತ್ರಿ ಸೂತ್ರದೊಂದಿಗೆ ಬಲಿಷ್ಠ ಬಿಜೆಪಿಯನ್ನು ಕಾಂಗ್ರೆಸ್-ಜೆಡಿಎಸ್ ಎದುರಿಸಿತು. ಆದರೆ ಫಲಿತಾಂಶ ಬಂದಾಗ ಬಿಜೆಪಿಯು ಬರೋಬ್ಬರಿ 25 ಸೀಟುಗಳನ್ನು ಬಾಚಿಕೊಂಡಿತು. ಬಿಜೆಪಿಯು ರಾಷ್ಟ್ರ ಮಟ್ಟದಲ್ಲಿ ಸಂಸದರ 300 ಸಂಖ್ಯೆ ದಾಟಲು ರಾಜ್ಯದ ಪಾತ್ರ ಪ್ರಮುಖವಾಯಿತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯ ಕನಸು ಕಾಣಲು ಬಿಜೆಪಿ ನಾಯಕರಿಗೆ ಅವಕಾಶ ಸೃಷ್ಟಿಸಿಕೊಟ್ಟಿತು.
ಹೊಸ ಸರ್ಕಾರ ರಚನೆ ಕಸರತ್ತು: ಲೋಕಸಭೆ ಚುನಾವಣೆ ಭರ್ಜರಿ ಗೆಲುವಿನಿಂದ ಬೀಗಿದ ಬಿ.ಎಸ್.ಯಡಿಯೂರಪ್ಪ, ಹೊಸ ಸರ್ಕಾರ ರಚನೆಗೆ ಕಸರತ್ತು ಆರಂಭಿಸಿದರು. ಜೂನ್ ಮೊದಲ ವಾರದಿಂದಲೇ ಆಪರೇಷನ್ ಕಮಲಕ್ಕೆ ಕೈ ಹಾಕಿದ ಯಡಿಯೂರಪ್ಪ ಪ್ರತಿಪಕ್ಷಗಳ 20ಕ್ಕೂ ಅಧಿಕ ಶಾಸಕರ ಬೆಂಬಲವಿದೆ ಎಂದು ಹೇಳಿಕೊಳ್ಳಲು ಆರಂಭಿಸಿದರು. ಇದಕ್ಕೆ ಪೂರಕವೆನ್ನುವಂತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಡ ತಾರಕಕ್ಕೇರಿತು. ಇವೆಲ್ಲ ನಾಟಕಗಳ ಮಧ್ಯೆ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಶಾಸಕರ ತಂಡ ಮುಂಬೈ ಪ್ರವಾಸ ಹೋಯಿತು. ಕೊನೆಗೂ 17 ಅತೃಪ್ತ ಶಾಸಕರು ದೋಸ್ತಿ ಸರ್ಕಾರ ಬೀಳಿಸಿ, ಹೊಸ ಸರ್ಕಾರ ರಚಿಸಲು ವೇದಿಕೆ ಸೃಷ್ಟಿಯಾಯಿತು.
ಮಹಾ ಪ್ರವಾಹ: ರಾಜಕೀಯ ಪ್ರಹಸನಗಳ ಮಧ್ಯೆಯೇ ಕರ್ನಾಟಕಕ್ಕೆ ಹಿಂದೆಂದೂ ಕಂಡರಿಯದ ಮಹಾ ಪ್ರವಾಹ ಅಪ್ಪಳಿಸಿತು. ಭೀಕರ ಮಳೆ ಹಾಗೂ ಪ್ರವಾಹದಿಂದ 13ಕ್ಕೂ ಅಧಿಕ ಜಿಲ್ಲೆಯ ಜನರು ತತ್ತರಿಸಿಹೋದರು. ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳು ಅಕ್ಷರಶಃ ನೀರಿನಲ್ಲಿ ಮುಳುಗಿಹೋದವು. ಕೃಷಿ ಭೂಮಿಗಳ ಜತೆ ಇಲ್ಲಿಯ ಜನರ ಜೀವನ ಕೂಡ ನೀರಿನಲ್ಲಿ ಮುಳುಗಿಹೋಯಿತು. ಆಡಳಿತಾರೂಢ ಬಿಜೆಪಿ ಸರ್ಕಾರ ಕೂಡ ಸರ್ಕಾರ ರಚನೆಯ ಕಸರತ್ತಲ್ಲಿ ಮುಳುಗಿದ್ದರೆ, ಪ್ರವಾಹದ ಗೋಳು ಕೇಳುವರಿಲ್ಲದಂತಾಗಿತ್ತು. ಇನ್ನೊಂದೆಡೆ ಕೇಂದ್ರ ಸರ್ಕಾರ ಕೂಡ ಸೂಕ್ತ ಪರಿಹಾರ ನೀಡಲೇ ಇಲ್ಲ. ಒಂದು ಹಂತದಲ್ಲಿ ಕನಿಷ್ಟ ಪರಿಹಾರ ಮೊತ್ತ ನೀಡಿ ಕೇಂದ್ರ ಸರ್ಕಾರ ಕೈ ತೊಳೆದುಕೊಂಡಿದೆ ಎನ್ನುವ ಆರೋಪವಿದೆ.