ಸೋಮವಾರಪೇಟೆ: ಕೊಡಗು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಕ್ಕಳ ಸಹಾಯವಾಣಿ ಕೇಂದ್ರದ ವತಿಯಿಂದ ತಾಲೂಕಿನ ಕೂಡು ಮಂಗಳೂರು ಸರ್ಕಾರಿ ಶಾಲೆಯಲ್ಲಿ ತೆರೆದ ಮನೆ ಹಾಗೂ ಸ್ವಚ್ಛ ಭಾರತ್ ಅಭಿಯಾನ ಕಾರ್ಯಕ್ರಮ ನಡೆಯಿತು.

ಕುಶಾಲನಗರ ಗ್ರಾಮಾಂತರ ಠಾಣೆಯ ಪೇದೆ ಸತ್ಯ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಕಾಯ್ದೆಯ ಬಗ್ಗೆ ಮಾಹಿತಿ ಒದಗಿಸಿದರು.

ಮಕ್ಕಳ ಸಹಾಯವಾಣಿ ಕೇಂದ್ರದ ಕಾರ್ಯಕರ್ತೆ ಬಿ.ಕೆ. ಕುಮಾರಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಸ್ವಚ್ಛ ಭಾರತ್ ಅಭಿಯಾನದ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಸಿಆರ್‍ಪಿ ಗಿರೀಶ್ ಉಚಿತ ಶಿಕ್ಷಣದ ಬಗ್ಗೆ ಮಾತನಾಡಿದರು. ಕೊಡಗು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಗೇಶ್ ಸೇರಿದಂತೆ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಎಸ್‍ಡಿಎಂಸಿ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವೀರಾಜಪೇಟೆ: ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ವಿಚಾರ ಸಂಕಿರಣಗಳ ಪಾತ್ರ ಅಪಾರವಾಗಿದೆ ಎಂದು ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಮದಲೈಮುತ್ತು ಅಭಿಪ್ರಾಯಪಟ್ಟರು.

ಸಂತ ಅನ್ನಮ್ಮ ಕಾಲೇಜಿನ ಸಭಾಂಗಣದಲ್ಲಿ ಐಕ್ಯೂಎಸಿ ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಏರ್ಪಡಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿ, ವಿದ್ಯಾರ್ಥಿಗಳು ನಾಯಕತ್ವ ಗುಣವನ್ನು ಹೊಂದಿರಬೇಕು, ಜೀವನದ ಮೌಲ್ಯಗಳನ್ನರಿತು ಬಾಳುವುದರೊಂದಿಗೆ ಕೌಶಲ್ಯವನ್ನು ಮೂಡಿಸಿಕೊಳ್ಳಬೇಕು. ಸಮಾಜದ ಅಭಿವೃದ್ಧಿಗೆ ಪೂರಕವಾಗುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು.

ಅತಿಥಿಗಳಾಗಿ ಆಗಮಿಸಿದ ಬೆಂಗಳೂರಿನ ವೃತ್ತಿಪರ ನಿರೂಪಕಿ ರಿಧ ತರನ್ನ ಮಾತನಾಡಿ, ನಾಯಕತ್ವದ ಪಾತ್ರ ಮತ್ತು ಸ್ವ ನಿರ್ವಹಣೆ ಮತ್ತು ಭಾಷಣದ ಭಯದಿಂದ ಹೇಗೆ ಹೊರಬರಬಹುದು ಎಂಬ ವಿಚಾರದ ಬಗ್ಗೆ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರೆ.ಫಾ. ರೋನಿ ರವಿಕುಮಾರ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ವಿನಯ ಅತ್ಯಂತ ಮುಖ್ಯವಾಗಿದೆ. ವಿದ್ಯಾರ್ಥಿಗಳು ಸ್ವಾರ್ಥರಹಿತ ಜೀವನವನ್ನು ನಡೆಸಬೇಕು ಎಂದರು. ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ತೃಪ್ತಿ ಬೋಪಣ್ಣ ವೇದಿಕೆಯಲ್ಲಿ ಹಾಜರಿದ್ದರು. ವಿದ್ಯಾರ್ಥಿ ಸಿನಾನ್ ಸ್ವಾಗತಿಸಿ, ವಿಸ್ಮಿತಾ ಮತ್ತು ತಂಡದವರು ಪ್ರಾರ್ಥಿಸಿ, ಹುದಾ ಅತಿಥಿಗಳನ್ನು ಪರಿಚಯಿಸಿ, ಸುಚಿತ ನಿರೂಪಿಸಿ, ಗ್ರೀಷ್ಮಾ ವಂದಿಸಿದರು. ಕಾರ್ಯಕ್ರಮದಲ್ಲಿ 300ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಿದ್ದರು.

ನಾಪೆÉÇೀಕ್ಲು: ಮನುಷ್ಯನನ್ನಾಗಿ ಮಾಡುವ ವಿದ್ಯೆಗೆ ಮೇಲು, ಕೀಳು, ಬಡವ ಬಲ್ಲಿದನೆಂಬ ಬೇಧವಿಲ್ಲ ವಿಧ್ಯೆಯು ಮಾನವನ ಉನ್ನತಿಕರಣಕ್ಕೆ ದಾರಿಯಾಗಲಿದೆ ಎಂದು ಅಂತರರಾಷ್ಟ್ರೀಯ ಕ್ರೀಡಾಪಟು ತೀತಮಾಡ ಅರ್ಜುನ್ ದೇವಯ್ಯ ಅಭಿಪ್ರಾಯಪಟ್ಟರು.

ನಾಪೆÇೀಕ್ಲು ಬೇತು ಗ್ರಾಮದಲ್ಲಿರುವ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ 25ನೇ ವರ್ಷದ ಸಮಾರಂಭದಲ್ಲಿ ಬೆಳ್ಳಿಹಬ್ಬದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ರಾಷ್ಟ್ರೀಯ ಮಟ್ಟವನ್ನು ತಲುಪಲು ತಾಯಿಯ ಪ್ರೇರಣೆಯೇ ಕಾರಣ ಎಂದ ಅವರು, ಮಕ್ಕಳ ವಿಚಾರದಲ್ಲಿ ಪೋಷಕರು ಅತೀ ಹೆಚ್ಚಿನ ಮುತುವರ್ಜಿ ವಹಿಸಬೇಕು. ಅವರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇಕ್ರೆಡ್ ಹಾರ್ಟ್ ಶಾಲೆಯ ಅಧ್ಯಕ್ಷರು, ಪ್ರಾಂಶುಪಾಲ ಬದಂಜಟ್ಟೀರ ಗಪ್ಪಣ ವಹಿಸಿದ್ದರು ವೇದಿಕೆಯಲ್ಲಿ ಬಿದ್ದಾಟಂಡ ಜೀವನ್ ಕಾರ್ಯಪ್ಪ, ಶ್ಯಾಲಿನಿ ಕಾರ್ಯಪ್ಪ, ಜಯ ಗಪ್ಪಣ ಇದ್ದರು. ಶೈಕ್ಷಣಿಕ ವರ್ಷದಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.

ಕೋಟೆರ ನೀಲಮ್ಮ ಸ್ವಾಗತಿಸಿ, ಶಾಲೆಯ ಮುಖ್ಯಾ ಶಿಕ್ಷಕಿ ಬಿದ್ದಾಟಂಡ ಮಮತ ಚಿಣ್ಣಪ್ಪ ಶಾಲಾ ವರದಿ ವಾಚಿಸಿ, ನಿರೂಪಿಸಿದರು. ಶಿಕ್ಷಕ ಪೋರ್ಕೂವಂಡ ಸುನೀಲ್ ಮತ್ತು ಗಿರೀಶ್ ಅತಿಥಿಗಳ ಪರಿಚಯ ಮಾಡಿ, ಅಂಬ್ರಾಟಿ ಮೈನಾ ಕುಮಾರಿ ವಂದಿಸಿದರು. ನಂತರ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿದವು.

ಮಡಿಕೇರಿ: ಕುಶಾಲನಗರದ ಕೆ.ಎಂ.ಟಿ ವಿದ್ಯಾಸಂಸ್ಥೆಯು ವಾರ್ಷಿಕ ಕ್ರೀಡಾ ದಿನದ ಅಂಗವಾಗಿ ಪೋಷಕರಿಗಾಗಿ ಕ್ರೀಡೆಗಳÀನ್ನು ಆಯೋಜಿಸಲಾಗಿತ್ತು. ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪೊನ್ನಚ್ಚನ ಕವಿತಾ ಮೋಹನ್ ವಹಿಸಿ ಕ್ರೀಡಾ ಮಹತ್ವದ ಬಗ್ಗೆ ತಿಳಿಸಿದರು. ಗುಂಡು ಎಸೆತದ ಮೂಲಕ ಪೋಷಕರ ಕ್ರೀಡೆಯನ್ನು ಉದ್ಘಾಟಿಸಿದರು. ಅಧ್ಯಕ್ಷ ಪೊನ್ನಚ್ಚನ ಮೋಹನ್ ಕ್ರೀಡಾ ಧ್ವಜಾರೋಹಣ ನಡೆಸಿ, ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು. ಪ್ರಾಂಶುಪಾಲೆ ಸುಮಿತಾ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಹಾಜರಿದ್ದರು. ಪೂಜಾ ಸ್ವಾಗತಿಸಿ, ಮೇಘ ಕಾರ್ಯಕ್ರಮ ನಿರೂಪಿಸಿ, ಮಧುಶ್ರೀ ವಂದಿಸಿದರು.

ಮಡಿಕೇರಿ: ಸ್ವಚ್ಛ ಭಾರತ ಅಭಿಯಾನ ಅಂಗವಾಗಿ ಪ್ರತಿ ವರ್ಷ ಹಲವಾರು ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ವರ್ಷ ಭಾ.ಕೃ.ಅ.ಪ.-ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ ಪ್ರಾದೇಶಿಕ ಕೇಂದ್ರ ಅಪ್ಪಂಗಳದಲ್ಲಿ ತಾ. 16 ರಿಂದ 31 ರವರೆಗೆ 15 ದಿನಗಳ ಸ್ವಚ್ಛತಾ ಪಕ್ವಡವನ್ನು ಹಮ್ಮಿಕೊಳ್ಳಲಾಗಿತ್ತು. ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ತಾ. 25 ರಂದು ರಾಜಾಸೀಟಿನ ಒಳ ಆವರಣದಲ್ಲಿ ಪ್ಲಾಸ್ಟಿಕ್ ಹಾಗೂ ಇನ್ನಿತರೆ ತ್ಯಾಜ್ಯ ವಸ್ತುಗಳನ್ನು ತೆಗೆಯುವ ಮೂಲಕ ಪ್ರವಾಸಿಗರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಲಾಯಿತು. ಶಾಲಾ ವಿದ್ಯಾರ್ಥಿಗಳಲ್ಲಿ ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪಾಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮ ಆಯೋಜಿಸಿ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ನಾಪೆÇೀಕ್ಲು: ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವ ಶಿಕ್ಷಣವನ್ನು ಶಿಕ್ಷಕರು ನೀಡಬೇಕು. ಅಂತಹ ಶಿಕ್ಷಣವನ್ನು ಪಡೆದ ವಿದ್ಯಾರ್ಥಿಗಳು ಸಾಧಿಸುವ ಛಲವನ್ನು ಹೊಂದಿ ಆತ್ಮವಿಶ್ವಾಸದಿಂದ ಶಿಕ್ಷಣ ಪಡೆದರೆ ಯಶಸ್ಸು ಸಾಧಿಸಬಹುದು ಎಂದು ಬಲ್ಲಮಾವಟಿ ಗ್ರಾಮದ ನಿವೃತ್ತ ಕರ್ನಲ್ ಬೊಟ್ಟೋಳಂಡ ಎಂ. ಶಂಭು ಮುತ್ತಪ್ಪ ಹೇಳಿದರು.

ಬಲ್ಲಮಾವಟಿ ಗ್ರಾಮದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಸತತ ಪ್ರಯತ್ನ ಹಾಗೂ ಪ್ರಾಮಾಣಿಕತೆ ಅವರನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಶ್ರಮ ಮತ್ತು ಏಕಾಗ್ರತೆಯನ್ನು ಬೇಡುವ ಶಿಕ್ಷಣಕ್ಕಾಗಿ ತ್ಯಾಗ ಮಾಡಬೇಕು. ಪಡೆದ ಶಿಕ್ಷಣವನ್ನು ಯಾರೂ ಕಸಿಯಲಾಗದು. ಅದು ಜೀವನ ಪರ್ಯಂತ ಇರುತ್ತದೆ. ವಿದ್ಯೆಯಿಂದ ಹುದ್ದೆ, ಜೀವನದಲ್ಲಿ ಸಂತೃಪ್ತಿ ಸೇರಿದಂತೆ ಎಲ್ಲವನ್ನೂ ಪಡೆದುಕೊಳ್ಳಬಹುದು ಎಂದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೇತಾಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಅಪ್ಪಚೆಟ್ಟೋಳಂಡ ಕೆ. ಮನು ಮುತ್ತಪ್ಪ ಮಾತನಾಡಿ, ವಿದ್ಯಾರ್ಥಿಗಳನ್ನು ಸನ್ಮಾರ್ಗದಲ್ಲಿ ನೋಡಿಕೊಳ್ಳುವದು ಪೆÇೀಷಕರ ಜವಾಬ್ದಾರಿ ಎಂದರು. ಕೆನರಾ ಬ್ಯಾಂಕ್ ಬಲ್ಲಮಾವಟಿ ಶಾಖೆ ವ್ಯವಸ್ಥಾಪಕ ಕೀರ್ತನ್ ಕುಮಾರ್, ಕಾರ್ಯದರ್ಶಿ ಚೆಂಗೇಟಿರ ಎನ್. ಅಚ್ಚಯ್ಯ, ಸಂಚಾಲಕ ಎನ್.ಪಿ. ಚಿಂಗಪ್ಪ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಉಪಸ್ಥಿತರಿದ್ದರು.

ಶಾಲಾ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ವಿವಿಧ ಸ್ಪರ್ಧೆಗಳು ಜರುಗಿದವು. ಕ್ರೀಡಾಕೂಟದಲ್ಲಿ ವಿದ್ಯಾಸಂಸ್ಥೆಯ ನಿರ್ದೇಶಕ ಬದಂಜೆಟ್ಟಿರ ದೇವಿ ದೇವಯ್ಯ ಧ್ವಜಾರೋಹಣ ನೆರವೇರಿಸಿದರು. ಬಲ್ಲಮಾವಟಿ ಗ್ರಾಮದ ಕಾಫಿ ಬೆಳೆಗಾರ ಅಪ್ಪಚೆಟ್ಟೋಳಂಡ ಶ್ಯಾಂ ಕಾಳಯ್ಯ ಕ್ರೀಡಾಕೂಟವನ್ನು ಉದ್ಘಾಟಿಸಿದರು.

ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಎಂ.ಕೆ. ಸುತನ್ ಸುಬ್ಬಯ್ಯ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿರ್ದೇಶಕ ಚಂಗೇಟಿರ ಕುಮಾರ್ ಸೋಮಣ್ಣ ಪಾಲ್ಗೊಂಡಿದ್ದರು. ಗ್ರಾಮಸ್ಥರಿಗಾಗಿ ನಡೆದ ಹಗ್ಗಜಗ್ಗಾಟ ಸ್ಪರ್ಧೆಯು ವೀಕ್ಷಕರನ್ನು ರಂಜಿಸಿತು. ಪುರುಷರ ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪಡಿಯಾಣಿ ತಂಡ ಪ್ರಥಮ ಸ್ಥಾನವನ್ನು, ಪೇರೂರು ತಂಡ ದ್ವಿತೀಯ ಸ್ಥಾನವನ್ನು ಗಳಿಸಿತು. ಮಹಿಳೆಯರ ವಿಭಾಗದಲ್ಲಿ ಪೇರೂರು ತಂಡ ಪ್ರಥಮ ಸ್ಥಾನ ಗಳಿಸಿದರೆ, ಬಲ್ಲಮಾವಟಿ ತಂಡ ದ್ವಿತೀಯ ಸ್ಥಾನ ಗಳಿಸಿತು. ಭಾರದ ಕಲ್ಲು ಎಸೆತ ಹಾಗೂ ಪಾಸಿಂಗ್ ದಿ ಬಾಲ್ ಸ್ಪರ್ಧೆಗಳು ಜರುಗಿದವು. ಸಂಜೆ ವೇಳೆ ನಡೆದ ವಿದ್ಯಾರ್ಥಿಗಳ ಸಾಂಸ್ಕøತಿಕ ಕಾರ್ಯಕ್ರಮ ಜನಮನ ರಂಜಿಸಿತು.

ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಪ್ರಾರ್ಥನೆ, ಶಿಕ್ಷಕ ರವಿಕುಮಾರ್ ಎಸ್. ಪೂಜಾರ್ ಸ್ವಾಗತ, ಮುಖ್ಯ ಶಿಕ್ಷಕ ಕೆ.ಪಿ. ಕುಮಾರಸ್ವಾಮಿ ಪ್ರೌಢಶಾಲಾ ವರದಿ ವಾಚನ, ಸಿ.ಕೆ. ಕಾವೇರಿ ಪ್ರಾಥಮಿಕ ಶಾಲಾ ವರದಿ ವಾಚನ, ಸಿ.ಎಸ್. ಸುರೇಶ್ ನಿರೂಪಿಸಿ, ಕಾವೇರಿ ವಂದಿಸಿದರು.

ಕುಶಾಲನಗರ: ವಿದ್ಯಾರ್ಥಿಗಳು ಧ್ಯಾನದ ಮೂಲಕ ಏಕಾಗ್ರತೆ ಕಂಡುಕೊಳ್ಳಲು ಸಾಧ್ಯ ಎಂದು ಕುಶಾಲನಗರ ರೋಟರಿ ಅಧ್ಯಕ್ಷ ಎಂ.ಡಿ. ಅಶೋಕ್ ಹೇಳಿದರು. ಸ್ಥಳೀಯ ವಿವೇಕಾನಂದ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಕುಶಾಲನಗರದ ಸ್ಮಾರ್ಟ್ ಬ್ರೇನ್ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರಾದೇಶಿಕ ಮಟ್ಟದ ಅಬಾಕಸ್ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಧ್ಯಾನದ ಮೂಲಕ ಬೌದ್ದಿಕ ವಿಕಸನ ಸಾಧ್ಯ. ವಿದ್ಯಾರ್ಥಿಗಳು ಸಮಚಿತ್ತ, ಏಕಾಗ್ರತೆಗಳಿಸಲು ನಿಯಮಿತವಾಗಿ ಧ್ಯಾನಸ್ಥರಾಗಬೇಕಿದೆ. ಆ ಮೂಲಕ ಕಲಿಕೆ ಸದಾ ನೆನಪಿನಲ್ಲಿ ಉಳಿಯಲು ಸಾಧ್ಯ ಎಂದರು.

ವಿಶ್ವಮಾನವರಾಗುವ ನಿಟ್ಟಿನಲ್ಲಿ ಕುವೆಂಪು ಅವರ ಸಂದೇಶದ ತಿರುಳನ್ನು ವಿದ್ಯಾರ್ಥಿಗಳು ಮನನ ಮಾಡಬೇಕು ಎಂದು ಕರೆ ನೀಡಿದರು. ಸ್ಮಾರ್ಟ್ ಬ್ರೇನ್ ಸಂಸ್ಥೆ ನಿರ್ದೇಶಕಿ ಕುಸುಮ ಎಸ್. ರಾಜ್, ಪ್ರಮುಖರಾದ ಸುಖೇಶ್ ರಾಜ್, ಕೂಡಿಗೆಯ ಕೆಇಎಸ್ ಕಿಶೋರ ಕೇಂದ್ರದ ಮುಖ್ಯಸ್ಥೆ ಉಮಾ, ಶಿಕ್ಷಕರಾದ ರೇಖಾ, ರಾಧಿಕಾ ಇದ್ದರು.

ಈ ಸಂದರ್ಭ ಸ್ಪರ್ಧೆಗಳ ಪ್ರಶ್ನೆ ಪತ್ರಿಕೆಯನ್ನು ಅತಿಥಿಗಳು ಅನಾವರಣಗೊಳಿಸಿದರು. ಕುವೆಂಪು ಅವರ ಭಾವಚಿತ್ರಕ್ಕೆ ಪೂಜಿಸುವ ಮೂಲಕ ಕುವೆಂಪು ಜನ್ಮದಿನವನ್ನು ಆಚರಿಸಲಾಯಿತು. ಮೌನಾಚರಣೆ ಮೂಲಕ ಅಗಲಿದ ಪೇಜಾವರ ಶ್ರೀಗಳಿಗೆ ಸಂತಾಪ ಸೂಚಿಸಲಾಯಿತು.

ಅಬಾಕಸ್, ವೇದಿಕ್ ಮ್ಯಾಥ್ಸ್, ರೂಬಿಕ್ಸ್ ಕ್ಯೂಬ್, ಕ್ಯಾಲಿಗ್ರಫಿ, ಮಿಡ್ ಬ್ರೇನ್ ಸ್ಪರ್ಧೆಗಳು ಜರುಗಿದವು. ಕುಶಾಲನಗರ ಸೇರಿದಂತೆ ವೀರಾಜಪೇಟೆ, ಕೊಣನೂರು, ಕಕ್ಕಬೆ, ಮರಡಿಯೂರು ಮತ್ತಿತರ ಕಡೆಗಳ ಶಾಲೆಗಳ ನೂರಾರು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡರು. ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಗೋಣಿಕೊಪ್ಪಲು: ವೀರಾಜಪೇಟೆ ಕಾವೇರಿ ಕಾಲೇಜು ಎನ್.ಎಸ್.ಎಸ್.ಘಟಕ ಮತ್ತು ಮಂಗಳೂರು ವಿ.ವಿ. ಕಾಲೇಜು ಶಿಕ್ಷಣ ಇಲಾಖೆ ಆಶ್ರಯದಲ್ಲಿ ಹಾತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಸಮಾರೋಪಗೊಂಡಿತು.

ಹಾತೂರು ಶಾಲಾ ಆವರಣ ಸ್ವಚ್ಛತಾ ಕಾರ್ಯಕ್ರಮವಲ್ಲದೆ ಅಪರಾಹ್ನ ಶೈಕ್ಷಣಿಕ ಕಾರ್ಯಕ್ರಮ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಿಬಿರದ ಉದ್ಘಾಟನೆಯನ್ನು ವೀರಾಜಪೇಟೆ ಕಾವೇರಿ ಕಾಲೇಜು ನಿವೃತ್ತ ಕನ್ನಡ ಪ್ರಾಧ್ಯಾಪಕಿ ಪೆÇ್ರ. ಸುಶೀಲ ನೆರವೇರಿಸಿದರು. ಸಮಯ ಪರಿಪಾಲನೆ, ಏಕಾಗ್ರತೆ, ಭ್ರಾತೃತ್ವ ಬೆಳವಣಿಗೆಗೆ ಎನ್.ಎಸ್.ಎಸ್. ಶಿಬಿರ ಪೂರಕ. ಮೂಢನಂಬಿಕೆ, ಸಾಮಾಜಿಕ ಪಿಡುಗು ದೂರಮಾಡುವ ನಿಟ್ಟಿನಲ್ಲಿ ಶಿಬಿರಾರ್ಥಿಗಳು ಮುಂದಾಗಬೇಕು ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಕಾವೇರಿ ಕಾಲೇಜು ನಿವೃತ್ತ ಪ್ರಾಂಶುಪಾಲ ಇಟ್ಟೀರ ಕೆ. ಬಿದ್ದಪ್ಪ ಮಾತನಾಡಿ, ಭಾರತೀಯ ಸೈನ್ಯಕ್ಕೆ ಪುಟ್ಟ ಜಿಲ್ಲೆ ಕೊಡಗು ಹಲವು ವೀರಯೋಧರನ್ನು ನೀಡಿದೆ. ಇಂದಿನ ಯುವ ಜನಾಂಗ ಸೈನ್ಯಕ್ಕೆ ಸೇರುವದಕ್ಕೆ ಹಿಂದೇಟು ಹಾಕಬಾರದು ಎಂದು ಸಲಹೆ ನೀಡಿದರು.

ಹಾತೂರು ಗ್ರಾ.ಪಂ. ಉಪಾಧ್ಯಕ್ಷ ಗುಮ್ಮಟೀರ ದರ್ಶನ್, ಹಾತೂರು ಪ್ರೌಢಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಮುಕ್ಕಾಟೀರ ಎಂ. ಸುಬ್ರಮಣಿ, ಗ್ರಾ.ಪಂ. ಸದಸ್ಯ ಶ್ರೀನಿವಾಸ್, ವೀರಾಜಪೇಟೆ ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲ ಪೆÇ್ರ. ಎ.ಎಂ. ಕಮಲಾಕ್ಷಿ, ಪಾಲಚಂಡ ಜಗನ್, ಸುಮಿ ಜಗನ್, ಕೊಡಂದೇರ ಮುದ್ದಪ್ಪ ಮುಂತಾದವರು ಉಪಸ್ಥಿತರಿದ್ದರು. ಎನ್.ಎಸ್.ಎಸ್. ಯೋಜನಾಧಿಕಾರಿ ಹೆಚ್.ವಿ. ನಾಗರಾಜು ಸ್ವಾಗತಿಸಿ, ಕಾವೇರಪ್ಪ ನಿರೂಪಿಸಿದರೆ, ಆನಂದ ಕಾರ್ಲ ವಂದಿಸಿದರು.

ಹೆಬ್ಬಾಲೆ: ಇತ್ತೀಚಿನ ದಿನಗಳಲ್ಲಿ ಪೋಷಕರು ಮನೆಯಲ್ಲಿ ಸಿನಿಮಾ, ಧಾರಾವಾಹಿ ವೀಕ್ಷಣೆ ಮಾಡುತ್ತ ತಮ್ಮ ಜವಾಬ್ದಾರಿಯನ್ನು ಮರೆಯುತ್ತಿದ್ದಾರೆ. ಇದರ ಬದಲು ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸಿಕೊಡುವ ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸುವತ್ತ ಒತ್ತು ನೀಡಬೇಕು ಎಂದು ತೊರೆನೂರು ವಿರಕ್ತಮಠದ ಶ್ರೀ ಮಲ್ಲೇಶ ಸ್ವಾಮೀಜಿ ಹೇಳಿದರು.

ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ತೊರೆನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮಕ್ಕಳ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ಒದಗಿಸಿ ಉತ್ತಮ ಪ್ರಜೆಯನ್ನಾಗಿಸಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಹೆಚ್.ಆರ್. ಶ್ರೀನಿವಾಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಗಳಿಸುವ ಅಂಕಗಳ ಜೊತೆಯಲ್ಲಿ ಸಮಾಜದಲ್ಲಿ ಬದುಕಬೇಕಾದ ನೈತಿಕ ಶಿಕ್ಷಣ ಬಹಳ ಮುಖ್ಯವಾಗಿರುತ್ತದೆ ಎಂದು ಹೇಳಿದರು. ತಾ.ಪಂ. ಸದಸ್ಯ ಎನ್.ಎಸ್. ಜಯಣ್ಣ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚು ಮೊಬೈಲ್, ಕಂಪ್ಯೂಟರ್‍ಗಳನ್ನು ಅವಶ್ಯಕತೆ ಇದ್ದಾಗ ಮಾತ್ರ ಬಳಸಿ ಉಳಿದ ಸಮಯವನ್ನು ಓದಿನ ಕಡೆ ಗಮನ ನೀಡಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವುದು ಮುಖ್ಯವಾಗಿದೆ ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಟಿ.ವಿ. ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಬಿ. ದೇವರಾಜ್, ಉಪಾಧ್ಯಕ್ಷೆ ದಾಕ್ಷಾಯಿಣಿ ವೆಂಕಟೇಶ್, ಸದಸ್ಯರಾದ ಟಿ.ಡಿ. ಈಶ್ವರ, ಟಿ.ಎಲ್. ಮಹೇಶ್ ಕುಮಾರ್, ರೂಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಕೃಷ್ಣೇಗೌಡ, ನಿರ್ದೇಶಕ ಟಿ.ಕೆ. ಪಾಂಡುರಂಗ, ಎಪಿಸಿಎಂಎಸ್ಸಿ ನಿರ್ದೇಶಕ ಹೆಚ್.ಬಿ. ಚಂದ್ರಪ್ಪ, ಕುಶಾಲನಗರ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಟಿ.ಎಸ್. ತುಂಗರಾಜು, ರೈಲ್ವೆ ಇಲಾಖೆ ನಿವೃತ್ತ ನೌಕರ ಟಿ.ಎನ್. ಶಂಕರಯ್ಯ, ಪ್ರಾಥಮಿಕ ಶಾಲಾ ಸಮಿತಿ ಅಧ್ಯಕ್ಷ ರವಿಚಂದ್ರ, ಹೆಬ್ಬಾಲೆ ಪಿಯು ಕಾಲೇಜು ಪ್ರಾಂಶುಪಾಲ ಎನ್.ಎನ್. ಧರ್ಮಪ್ಪ, ತೊರೆನೂರು ಪ್ರೌಢಶಾಲೆ ಮುಖ್ಯ ಶಿಕ್ಷಕ ಬಿ.ಆರ್. ಕುಮಾರ್, ಮಾಜಿ ಸೈನಿಕ ಟಿ.ಕೆ. ರವಿ, ಟಿ.ಎಸ್. ಚಂದ್ರಶೇಖರ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಬಿ.ಆರ್. ಕುಮಾರ್ ಸ್ವಾಗತಿಸಿದರು. ಶಿಕ್ಷಕ ಟಿ.ಬಿ. ಮಂಜುನಾಥ್ ನಿರೂಪಿಸಿದರು. ಶಿಕ್ಷಕಿ ಬಿ.ಪಿ. ಸವಿತಾ ವರದಿ ವಾಚಿಸಿದರು. ವಿವಿಧ ಕ್ರೀಡಾ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಕಳೆದ ಸಾಲಿನ ಎಸ್.ಎಸ್.ಎಲ್.ಸಿ.ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸಾರ್ವಜನಿಕರು ಮತ್ತು ಶಿಕ್ಷಕರು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು. ನಂತರ ಶಾಲಾ ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಮನ ರಂಜಿಸಿತು.

ನಾಪೆÇೀಕ್ಲು: ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರವಿದ್ದು ಉತ್ತಮ ಶಿಕ್ಷಣದತ್ತ ಗಮನ ಹರಿಸಬೇಕು ಎಂದು ಕೊಂಗಂಡ ಮುದ್ದಯ್ಯ ಸುಬ್ಬಯ್ಯ ಟ್ರಸ್ಟ್‍ನ ನಿರ್ದೇಶಕ, ಸ್ಥಳೀಯ ವೈದ್ಯ ಡಾ. ಸಣ್ಣುವಂಡ ಕಾವೇರಪ್ಪ ಹೇಳಿದರು.

ನಾಪೆÇೀಕ್ಲು ಎಕ್ಸೆಲ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆದ ನವೋದಯ ಪರೀಕ್ಷಾ ತರಬೇತಿ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ವಿದ್ಯಾರ್ಥಿಗಳು ಸಂವಹನಕ್ಕೆ ಮಾತ್ರ ಮೊಬೈಲನ್ನು ಬಳಸಬೇಕು. ಗುರುಹಿರಿಯರ ಮಾರ್ಗದರ್ಶನದಲ್ಲಿ ಶಿಕ್ಷಣದಲ್ಲಿ ನಿರಂತರವಾಗಿ ತೊಡಗಿಸಿಕೊಂಡಾಗ ಉತ್ತಮ ಭವಿಷ್ಯ ಲಭಿಸುತ್ತದೆ. ಪರೀಕ್ಷಾ ಅವಧಿಯಲ್ಲಿ ನಿರಂತರ ಅಭ್ಯಾಸ ಮಾಡಿದಲ್ಲಿ ಗುರಿಸಾಧನೆ ಸಾಧ್ಯ ಎಂದರು.

ಜವಾಹರ್ ನವೋದಯ ವಿದ್ಯಾಲಯಗಳಲ್ಲಿ ಗ್ರಾಮೀಣ ಪ್ರದೇಶದ ಪ್ರತಿಭಾವಂತ ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಅತ್ಯಾಧುನಿಕ ಶಿಕ್ಷಣ ದೊರೆಯುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಕ್ಕಳನ್ನು ಸಜ್ಜುಗೊಳಿಸುವಲ್ಲಿ ಪೋಷಕರ ಪಾತ್ರ ಮುಖ್ಯವಾದುದು ಎಂದು ಅಭಿಪ್ರಾಯಪಟ್ಟ ಅವರು ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಮಾತ್ರವಲ್ಲ ಪೋಷಕರೂ ಮಾಹಿತಿ ತಂತ್ರಜ್ಞಾನದ ಜ್ಞಾನವನ್ನು ಹೊಂದಬೇಕಾಗಿದೆ. ವಿದ್ಯಾರ್ಥಿಗಳು ದಿನನಿತ್ಯ ಪತ್ರಿಕೆಯನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡು ಸಾಮಾನ್ಯ ಜ್ಞಾನವನ್ನು ವೃದ್ದಿಸಿಕೊಳ್ಳಬೇಕಾಗಿದೆ ಎಂದರು.

ಈ ಸಂದರ್ಭ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಕೊಂಗಾಂಡ ಸುಬ್ಬಯ್ಯ ಮುದ್ದಯ್ಯ ಟ್ರಸ್ಟ್ ವತಿಯಿಂದ ಪುರಸ್ಕರಿಸಲಾಯಿತು. ಪೋಷಕರ ಪರವಾಗಿ ಶಿಕ್ಷಕಿ ಸುಜಾತ ಮಾತನಾಡಿದರು. ವಿದ್ಯಾರ್ಥಿಗಳಿಗಾಗಿ ನಡೆಸಿದ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಬಹುಮಾನಗಳನ್ನು ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್‍ನ ಅಧ್ಯಕ್ಷ ಕುಟ್ಟಂಜೆಟ್ಟಿರ ಮಾದಪ್ಪ ವಹಿಸಿದ್ದರು. ಶಿಕ್ಷಕ ಸಿ.ಎಸ್. ಸುರೇಶ್ ಪ್ರಾಸ್ತಾವಿಕ ಮಾತನಾಡಿದರೆ, ಶಿಕ್ಷಕ ಶರತ್ ಸ್ವಾಗತಿಸಿ, ವಂದಿಸಿದರು.

ಸಂಪಾಜೆ: ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಸಂಪಾಜೆ ಇದರ ವಾರ್ಷಿಕೋತ್ಸವ ಸಮಾರಂಭ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀಧರ್ ಪಡ್ಪು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಮಾರ್ ಚೆದ್ಕಾರ್, ರಮಾದೇವಿ ಬಾಲಚಂದ್ರ ಕಳಗಿ, ಕಡಂಬಡ್ಕ ವೆಂಕಪ್ಪ, ಮುಖ್ಯೋಪಾಧ್ಯಾಯಿನಿ ಸಾವಿತ್ರಿ ಪಿ.ಎ., ಶಿಕ್ಷಣ ಇಲಾಖೆಯ ರಂಜಿತ್, ಕೃಷ್ಣ ಬೆಳ್ಚಪಾಡ, ಪುರುಷೋತ್ತಮ ಬಾಳೆಹಿತ್ಲು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಾಲಾ ವಾರ್ಷಿಕ ವರದಿಯನ್ನು ಶಾಲಾ ಶಿಕ್ಷಕಿ ಗಾಯತ್ರಿ ವಾಚಿಸಿದರು. ಅತಿಥಿ ಭಾಷಣ, ಕ್ರೀಡಾಕೂಟ ಬಹುಮಾನ ವಿತರಣೆ ನಂತರ ಅಪರಾಹ್ನ 2 ಗಂಟೆಯ ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮವು ನಡೆಯಿತು. ವಾರ್ಷಿಕೋತ್ಸವ ಸಮಾರಂಭದಲ್ಲಿ ಶಾಲಾ ಶಿಕ್ಷಕ ವೃಂದ, ಶಾಲಾ ಹಳೆ ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್�