ಶ್ರೀಮಂಗಲ, ಡಿ. 31: ದಕ್ಷಿಣ ಕೊಡಗಿನ ಶ್ರೀಮಂಗಲ ಮತ್ತು ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯದಂಚಿನ ಗ್ರಾಮಗಳಲ್ಲಿ ಕಾಡಾನೆ ಹಿಂಡುಗಳು ಕಾಫಿ ತೋಟಗಳಲ್ಲಿ ಸೇರಿಕೊಂಡಿದ್ದು, ಕಾಫಿ ಹಣ್ಣಾಗಿರುವುದರಿಂದ ಕಾಫಿ ಕಟಾವು ಮಾಡಲು ಸಾಧ್ಯವಿಲ್ಲದಂತಾಗಿದೆ. ತೋಟಗಳಲ್ಲಿ ಕಾಡಾನೆಗಳಿರುವುದ ರಿಂದ ಬೆಳೆಗಾರರು ಮತ್ತು ಕಾರ್ಮಿಕರಿಗೆ ತೋಟಕ್ಕೆ ತೆರಳಲು ಆತಂಕ ಮೂಡಿಸಿದೆ. ಕಾಡಾನೆಗಳನ್ನು ಅರಣ್ಯಕ್ಕೆ ಸೇರಿಸಲು ಅರಣ್ಯ ಇಲಾಖೆ ಕೂಡಲೇ ಕಾರ್ಯಪ್ರವೃತ್ತರಾಗುವ ಮೂಲಕ ಅರಣ್ಯ ಇಲಾಖೆ ಆತಂಕವನ್ನು ದೂರಮಾಡಬೇಕೆಂದು ಕೊಡಗು ಬೆಳೆಗಾರರ ಒಕ್ಕೂಟ ಮತ್ತು ಜಿಲ್ಲಾ ಸಾರ್ವಜನಿಕ ಹಿತರಕ್ಷಣ ಸಮಿತಿ ಒತ್ತಾಯಿಸಿದೆ.
ಸೋಮವಾರ ಶ್ರೀಮಂಗಲ ಪ್ರವಾಸಿ ಮಂದಿರದಲ್ಲಿ ಉಭಯ ಸಂಘಟನೆಯ ಮುಖಂಡರು ಶ್ರೀಮಂಗಲ ವಲಯ ಅರಣ್ಯಾಧಿಕಾರಿ ವಿರೇಂದ್ರ ಮರಿಬಸಣ್ಣವರ್ ಅವರೊಂದಿಗೆ ಈ ಬಗ್ಗೆ ಸಮಾ ಲೋಚನೆ ನಡೆಸಿತು. ಕಾಡಾನೆಗಳನ್ನು ಅರಣ್ಯಕ್ಕೆ ಸೇರಿಸಲು ಸಂಘಟನೆ ಯಿಂದ ಅರಣ್ಯ ಇಲಾಖೆಗೆ ಅಗತ್ಯ ನೆರವು ನೀಡುವುದಾಗಿ ಕೊಡಗು ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕೈಬೀಲೀರ ಹರೀಶ್‍ಅಪ್ಪಯ್ಯ ಮತ್ತು ಜಿಲ್ಲಾ ಸಾರ್ವಜನಿಕ ಹಿತರಕ್ಷಣ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ ಭರವಸೆ ನೀಡಿದರು.
ಈ ಸಂದರ್ಭ ಉಭಯ ಸಂಘಟನೆಯ ಪ್ರಮುಖರು ಅರಣ್ಯ ಇಲಾಖೆಯ ಉನ್ನತಾಧಿಕಾರಿಗ ಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಗಮನ ಸೆಳೆದರು. ಈಗಾಗಲೇ ಸತತ ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಇದೀಗ ಅಳಿದುಳಿದ ಕಾಫಿ ಫಸಲನ್ನು ಕಟಾವು ಮಾಡುವ ಸಂದರ್ಭದಲ್ಲಿ ಕಾಡಾನೆಗಳು ತೋಟದಲ್ಲಿ ಸೇರಿಕೊಂಡು ಕಾಫಿ ಹಣ್ಣುಗಳನ್ನು ತಿಂದು ಹಾಗೂ ಕಾಫಿ ಗಿಡಗಳನ್ನು ನಷ್ಟ ಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನೆಮ್ಮಲೆ, ಬೀರುಗ, ಮಂಚಳ್ಳಿ ಗ್ರಾಮಗಳಲ್ಲಿ ಕಾಡಾನೆ ಸೇರಿಕೊಂಡಿದೆ. ಇದರಿಂದ ಕಾಫಿ ಕಟಾವು ಮಾಡಲು ಕಾರ್ಮಿಕರು, ಬೆಳೆಗರರು ತೊಟಕ್ಕೆ ಹೋಗಲು ಭಯದ ವಾತಾವರಣ ವಿದೆ ಎಂದು ಸಂಘಟನೆಯ ಪ್ರಮುಖರು ಅರಣ್ಯಾಧಿಕಾರಿಗಳ ಗಮನ ಸೆಳೆದರು. ಈ ಸಂದರ್ಭ ಮಾತನಾಡಿದ ವಲಯ ಅರಣ್ಯಾಧಿ ಕಾರಿ ವಿರೇಂದ್ರ ಮರಿಬಸಣ್ಣವರ್ ಶ್ರೀಮಂಗಲ ವಲಯ ಅರಣ್ಯ ವ್ಯಾಪ್ತಿಯ ಅಂಚಿನಲ್ಲಿ ತೂಗು ಸೋಲಾರ್ ಬೇಲಿ ನಿರ್ಮಾಣ ವಾರದಲ್ಲಿ ಮುಗಿಯಲಿದೆ. ಕಾಡಾನೆಗಳು ಅರಣ್ಯದಿಂದ ಗ್ರಾಮಕ್ಕೆ ನುಸುಳುವ ಹಲವು ಜಾಗಗಳನ್ನು ಗುರುತಿಸಲಾಗಿದೆ. ಕಾಡಾನೆಗಳನ್ನು ಅರಣ್ಯಕ್ಕೆ ಸೇರಿಸಿದ ನಂತರ ಅಂತಹ ಜಾಗದಲ್ಲಿ ಅರಣ್ಯ ಇಲಾಖಾ ಸಿಬ್ಬಂದಿಗಳು ರಾತ್ರಿ ಪಹರೆ ಏರ್ಪಡಿಸಿ ಮತ್ತೆ ಕಾಡಾನೆಗಳು ಗ್ರಾಮಕ್ಕೆ ನುಸುಳದಂತೆ ಎಚ್ಚರಿ ವಹಿಸಲಾಗುವುದು. ಗ್ರಾಮದಲ್ಲಿರುವ ಕಾಡಾನೆಗಳನ್ನು ಕಾರ್ಯಾಚರಣೆ ನಡೆಸಿ ಅರಣ್ಯಕ್ಕೆ ಸೇರಿಸುವುದರಿಂದ ಕಾಡಾನೆಗಳು ಬೆದರಿ ಓಡಾಡುವುದ ರಿಂದ ಕಾಫಿ ಪಸಲಿಗೆ ಮತ್ತಷ್ಟು ಹಾನಿಯಾಗುತ್ತದೆ. ಕಾಡಾನೆಗಳು ತನ್ನಷ್ಟಕ್ಕೆ ತಾವೇ ಅರಣ್ಯಕ್ಕೆ ಸೇರಿಕೊಳ್ಳುವಂತೆ ದಿನನಿತ್ಯ ಅವುಗಳ ಚಲನ ವಲನಗಳನ್ನು ಗಮನಿಸಲಾಗುತ್ತದೆ ಎಂದರು.
ಕೊಡಗಿನ ಅರಣ್ಯದಂಚಿನಲ್ಲಿ ವನ್ಯ ಪ್ರಾಣಿಗಳು ಗ್ರಾಮಕ್ಕೆ ನುಸುಳದಂತೆ ಶಾಶ್ವತ ಯೋಜನೆ ಗಳನ್ನು ಸರಕಾರ ರೂಪಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಅಗತ್ಯ ಯೋಜನೆ ಜಾರಿಗೆ ತರಬೇಕೆಂದು ಪ್ರಮುಖರು ಒತ್ತಾಯಿಸಿದರು.
ಸಭೆಯಲ್ಲಿ ಬೆಳೆಗಾರ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಜಂಟಿ ಕಾರ್ಯ ದರ್ಶಿ ಬಾಚಂಗಡ ದಾದಾದೇವಯ್ಯ, ಖಜಾಂಚಿ ಮಾಣೀರ ವಿಜಯ್ ನಂಜಪ್ಪ, ಸ್ಥಾಪಕ ಸದಸ್ಯ ಮಾಣೀರ ಮುತ್ತಪ್ಪ, ಹಿತರಕ್ಷಣ ಸಮಿತಿಯ ಅಜ್ಜಮಾಡ ರಾಜುನಂಜಪ್ಪ ಹಾಜರಿದ್ದರು.