ಸೋಮವಾರಪೇಟೆ, ಡಿ. 31: ತಾಲೂಕಿನ ಸಿದ್ಧಲಿಂಗಪುರ-ಅರಶಿಣಗುಪ್ಪೆ ಗ್ರಾಮದ ಶ್ರೀ ಮಂಜುನಾಥ ಮತ್ತು ನವನಾಗ ಸನ್ನಿಧಿಯಲ್ಲಿ ಮಾಸಿಕ ಪಂಚಮಿ ಪೂಜೆ ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು.
ದೇವಾಲಯದ ಪ್ರಧಾನ ಗುರುಗಳಾದ ಶ್ರೀರಾಜೇಶ್‍ನಾಥ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ಅರ್ಚಕರುಗಳಾದ ಜಗದೀಶ್ ಉಡುಪ, ಮಣಿಕಂಠನ್ ನಂಬೂದರಿ, ಹಾನಗಲ್ಲು ಪ್ರಸಾದ್ ಭಟ್, ವಾದಿರಾಜ್, ಮೋಹನ್ ಅವರುಗಳು ಪೂಜಾ ಕಾರ್ಯಗಳನ್ನು ನಡೆಸಿದರು.
ಮಂಜುನಾಥ ಸನ್ನಿಧಿಯಲ್ಲಿ ಗಣಪತಿ ಹೋಮ, ಅಭಿಷೇಕ, ರುದ್ರಾಭಿಷೇಕ, ಅಲಂಕಾರ ಪೂಜೆ, ನವನಾಗ ಸನ್ನಿಧಿಯಲ್ಲಿ ಅಲಂಕಾರ ಪೂಜೆ, ತಂಬಿಲ ಸೇವೆ, ಪುಷ್ಪಾಲಂಕಾರ, ವಿವಿಧ ಅಭಿಷೇಕ, ಮಹಾಮಂಗಳಾರತಿ ನಂತರ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು.
ಎಂಟಿಬಿ ಬೆಂಬಲಿಗರಿಂದ ಸೇವೆ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಇದೀಗ ಸರ್ಕಾರದಲ್ಲಿ ಉನ್ನತ ಹುದ್ದೆಯ ನಿರೀಕ್ಷೆಯಲ್ಲಿರುವ ಎಂಟಿಬಿ ನಾಗರಾಜ್ ಅವರಿಗೆ ಸೂಕ್ತ ಸ್ಥಾನಮಾನ ಲಭಿಸಬೇಕೆಂದು ನಾಗರಾಜ್ ಅವರ ಬೆಂಬಲಿಗರು, ಮಂಜುನಾಥ ಮತ್ತು ನವನಾಗ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಿದರು.