ವೀರಾಜಪೇಟೆ,ಡಿ. 31: ಸಮಾಜ ಕಲ್ಯಾಣ, ವ್ಯಕ್ತಿ ವಿಕಸನ ಮತ್ತು ಸದೃಢÀ ಸಮಾಜ ನಿರ್ಮಾಣ ಮಾಡಲು ಸಂಘವು ಎಂದು ಕಟಿಬದ್ಧ ಉತ್ತಮ ಸ್ವಯಂ ಸೇವಕರನ್ನು ಶಾಖೆಯು ತನ್ಮೂಲಕ ಸಮಾಜಕ್ಕೆ ನೀಡುತ್ತಾ ಬಂದಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಜಿಲ್ಲಾ ಸಂಪರ್ಕ ಪ್ರಮುಖ್ ಅರುಣ್ ಕುಮಾರ್ ಅಭಿಮತ ವ್ಯಕ್ತಪಡಿಸಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ವೀರಾಜಪೇಟೆ ನಗರ ಶಾಖೆಯು ನಗರದ ದೇವಾಂಗ ಬೀದಿಯಲ್ಲಿರುವ ದೇವಾಲಯದ ಅವರಣದಲ್ಲಿ ಆಯೋಜಿಸಿಲಾಗಿದ್ದ ಶಾಖಾ ವಾರ್ಷಿಕೋತ್ಸವ ದಿನ ಆಚರಣೆಯ ಪ್ರಾಮುಖ್ಯತೆ ಬಗ್ಗೆ ಬೌದಿಕ್ ನೀಡಿ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘಟನಾತ್ಮಕ ಕಾರ್ಯಗಳು ಶಾಖೆಯ ಮೂಲಕವೇ ನಡೆಯುತ್ತದೆ. ಪ್ರತಿಯೊಂದು ಶಾಖೆಯು ಸಾರ್ವಜನಿಕ ಬಯಲು ಸ್ಥಳಗಳಲ್ಲಿ ಒಂದು ಗಂಟೆಯ ಕಾಲ ನಿಗದಿತ ಸಮಯದಲ್ಲಿ ನಡೆಯುತಿರುವುದು ವಿಶೇಷತೆ.ಶಾಖೆಯು ಸ್ವಯಂ ಸೇವಕರಿಗೆ ರಾಷ್ಟ್ರ ಭಕ್ತಿ, ಮೌಲ್ಯಯುತವಾದ ಜೀವನ ಸಾಗಿಸುವ ವಿಧಾನ, ಶಾರೀರಿಕ ವ್ಯಾಯಾಮಗಳು, ಭೌದಿಕ್, ತುರ್ತು ಸಂದರ್ಭದಲ್ಲಿ ಎದುರಿಸುವ ವಿಧಾನಗಳು, ಸ್ವಚ್ಛತೆ ಬಗ್ಗೆ ತಿಳುವಳಿಕೆ, ದೇಶಭಕ್ತಿ ಗಾಯನ ಹೀಗೆ ಹಲವಾರು ರೀತಿಯಲ್ಲಿ ಸ್ವಯಂ ಸೇವಕರಿಗೆ ಶಾಖೆಯಲ್ಲಿ ತಿಳಿಸಿಕೊಡಲಾಗುತ್ತಿದೆ. ಅಂಕಿ ಅಂಶಗಳ ಪ್ರಕಾರ ದೇಶ ಮತ್ತು ವಿದೇಶಗಳಲ್ಲಿ ಒಟ್ಟು 50 ಸಾವಿರ ನಿತ್ಯ ಶಾಖೆಗಳು ಕಾರ್ಯನಿರ್ವಹಿಸುತ್ತಿದೆ. ಉತ್ತಮ ಸಮಾಜ ನಿರ್ಮಾಣ ಮಾಡಲು ಕಂಕಣಬದ್ದವಾಗಿ ಕಾರ್ಯನಿರ್ವಹಿಸುತ್ತಿದೆ. ನವ ಭಾರತ ನಿರ್ಮಾಣದ ಪರಿಕಲ್ಪನೆ ಕನಸು ಸಾಕಾರಗೊಳಿಸುವಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ತನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ತಾಲೂಕು ಸಂಘ ಚಾಲಕ್ ಪ್ರಿನ್ಸ್ ಗಣಪತಿ ಅವರು ಸ್ವಯಂ ಸೇವಕರು ಸಂಘದ ತತ್ವ ಸಿದ್ಧಾಂತಗಳ ಅವಲಂಬಿಸಿಕೊಂಡು ಮುಂದುವರೆಯಬೇಕು ಶಾಖೆಯಲ್ಲಿ ಸ್ವಯಂ ಸೇವಕರ ಸಂಖ್ಯೆ ಹೆಚ್ಚಾಗಬೇಕು ಸಮಾಜ ನಿರ್ಮಾಣದಲ್ಲಿ ಸಂಘಟಿತವಾಗಿ ಮುನ್ನಡೆಯಬೇಕು ಎಂದು ಹೇಳಿದರು. ಚಾಮುಂಡಿ ಶಾಖಾ ವಾರ್ಷಿಕೋತ್ಸವದಲ್ಲಿ ಬಾಲಕ ಸ್ವಯಂ ಸೇವಕರಿಂದ ಶಾರೀರಿಕ್, ದಂಡ ಪ್ರಯೋಗ, ಪಥ ಸಂಚಲನ, ಯೋಗ ನಿಯುದ್ದ ಮತ್ತು ದೇಶಭಕ್ತಿ ಗಾಯನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಗರ ಶಾಖೆಯ ಸ್ವಯಂ ಸೇವಕರು ಶಾಖಾ ವಿದ್ಯಾರ್ಥಿಗಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. -ಕೆ.ಕೆ.ಎಸ್.