ಗೋಣಿಕೊಪ್ಪ ವರದಿ, ಡಿ. 31 : ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್‍ನಲ್ಲಿ ಸಾಧನೆಗೈದ ಜಿಲ್ಲೆಯ ಸಾಧಕರನ್ನು ಕರ್ನಾಟಕ ರಾಜ್ಯ ಮಾಸ್ಟರ್ ಅಥ್ಲೆಟಿಕ್ಸ್ ವತಿಯಿಂದ ಸನ್ಮಾನಿಸಲಾಯಿತು.

ಇತ್ತೀಚೆಗೆ ಬೆಂಗಳೂರು ವಿ.ಟಿ ಪ್ಯಾರಡೈಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧಕರಾದ ಪೆಮ್ಮಂಡ ಅಪ್ಪಯ್ಯ, ಮುಲ್ಲೇರ ಪೊನ್ನಮ್ಮ ಹಾಗೂ ಬೊಪ್ಪಂಡ ಕುಸುಮ ಭೀಮಯ್ಯ ಸನ್ಮಾನ ಸ್ವೀಕರಿಸಿದರು. ಈ ಸಂದರ್ಭ ರಾಜ್ಯ ಮಾಸ್ಟರ್ ಅಥ್ಲೆಟಿಕ್ಸ್ ಅಧ್ಯಕ್ಷ ಡೇವಿಡ್ ಪ್ರೇಮನಾಥ್, ಕಾರ್ಯದರ್ಶಿ ಎಚ್. ಸಿ. ಷಣ್ಮುಗಂ ಇದ್ದರು.