ಮಡಿಕೇರಿ ಬಳಿಯ ಸಂಪಿಗೆಕಟ್ಟೆ ನಿವಾಸಿ, ಇಂದಿರಗಾಂಧಿ ವೃತ್ತದ ರಾಘವೇಂದ್ರ ಸ್ಟೋರ್ ಮಾಲೀಕ ಪಿ.ಆರ್. ನಂದಕುಮಾರ್ (79) ಅವರು ತಾ. 30 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 31 ರಂದು (ಇಂದು) ಮಲ್ಲಿಕಾರ್ಜುನ ನಗರದ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. ಮೃತರು ಪತ್ನಿ, ಈರ್ವರು ಪುತ್ರರನ್ನು ಅಗಲಿದ್ದಾರೆ.
ಟಕುಶಾಲನಗರ ಮಾದಾಪಟ್ಟಣ ಗ್ರಾಮದ ನಿವಾಸಿ ಶ್ರೀರಂಗ (75) ತಾ. 30 ರಂದು ನಿಧನರಾದರು. ಮೃತರ ಅಂತ್ಯಕ್ರಿಯೆ ತಾ. 31 ರಂದು (ಇಂದು) ಮಾದಾಪಟ್ಟಣದಲ್ಲಿ ನಡೆಯಲಿದೆ. ಮೃತರು ಪತ್ನಿ, ಓರ್ವ ಪುತ್ರ, ಐವರು ಪುತ್ರಿಯರನ್ನು ಅಗಲಿದ್ದಾರೆ.
ಟಕಡಿಯತ್ತೂರು ಗ್ರಾಮದ ಮಚ್ಚಂಡ ಚಿಣ್ಣಪ್ಪ (91) (ನಿವೃತ್ತ ಎಡಿಎಲ್ಆರ್) ಅವರು ತಾ.30 ರಂದು ನಿಧನರಾದರು. ಮೃತರು ಪತ್ನಿ ಇಬ್ಬರು ಪುತ್ರರನ್ನು ಅಗಲಿದ್ದು; ಅಂತ್ಯಕ್ರಿಯೆ ತಾ. 31 ರಂದು (ಇಂದು) 2 ಗಂಟೆಗೆ ಸ್ವಗ್ರಾಮದಲ್ಲಿ ನಡೆಯಲಿದೆ.
ಟಕೊಡಗರಹಳ್ಳಿ ನಿವಾಸಿ, ಜ್ಯೋತಿಷ್ಯರಾಗಿದ್ದ ಬಿ.ವಿ. ದಿನಕರ್ರಾವ್ (75) ತಾ. 29 ರಂದು ನಿಧನರಾದರು. ಮೃತರು ಪತ್ನಿ, ಹಾಗೂ ಈರ್ವರು ಪುತ್ರರನ್ನು ಆಗಲಿದ್ದಾರೆ.