ಕಾವೇರಿ ಕಥನ ಒಂದನ್ನು ಓದಿ ಮುಗಿಸಿದ ಕೂಡಲೇ ಶಕ್ತಿ ಬಳಗದ ಜತೆ ನನ್ನ ಗೆಲುವು ಅಭಿಪ್ರಾಯ ಹಂಚಿಕೊಂಡಿದ್ದೆ. ಅದರಲ್ಲಿ ಮುಖ್ಯವಾದದ್ದು ಕಾವೇರಿ ಕಥನ ಉತ್ತಮ ಲೇಖನವಾಗಿ ಹೊರ ಬರುವ, ಪ್ರಕಟವಾಗುವ ಎಲ್ಲಾ ಮುನ್ಸೂಚನೆ ನನ್ನ ಗ್ರಹಿಕೆಗೆ ಬಂದಿತ್ತು. ಧಾರಾವಾಹಿ ತರದಲ್ಲಿ ಕಥನಕ್ಕೆ ಭಾನುವಾರವನ್ನು ಮೀಸಲಿಟ್ಟಿದ್ದು ತುಂಬಾ ಅನುಕೂಲಕರವಾಯಿತು.

ರಾಜೇಂದ್ರಣ್ಣ ಬಳಸುವ ಪದಗಳು ಆ ವಾಕ್ಯ ರಚನೆ ಇವೆಲ್ಲವೂ ಕಿರಿಯರಿಂದ ಹಿಡಿದು, ಹಿರಿಯ ನಾಗರಿಕರಿಗೂ ಮುದ ಕೊಡುವಂತೆ ಓದಿಸುತ್ತಿದೆ.

ಹೀಗಾಗಿ ‘ಶಕ್ತಿ’ ಬಳಗದೊಂದಿಗೆ ‘‘ನಾನು ಪುರಾಣವನ್ನು ನಂಬುವದಿಲ್ಲ’’ ಎಂದಿದ್ದೆ ಹಾಗಂತ ಓದುವದೇ ಎಂದೇನಿಲ್ಲ. ಕಾವೇರಿ ಕಥನ ಓದುಗರಲ್ಲಿ ನಾನು ಹಾಗೂ ಮನೆಮಂದಿ ‘‘ರೆಗ್ಯುಲರ್ ರೀಡರ್ಸ್’’ ಕೊಡಗಿನ ಬಹುತೇಕ ಮನೆಗಳಲ್ಲಿ ನನ್ನ ಮನೆಯಂತೆ ಪ್ರತೀ ಭಾನುವಾರದ ‘‘ಕಾವೇರಿ ಕಥನ’’ ಕಾದು ಕುಳಿತಿರುವ ಅದೆಷ್ಟೋ ಕುಟುಂಬಗಳಿವೆ. ಎಂಬದು ನನಗೆ ಖಾತರಿ ಆಗಿದೆ.

‘‘ಕಾವೇರಿ ಕಥನ’’ ಓದಿದಾಗಲೇ ಶಕ್ತಿ ಬಳಗದೊಂದಿಗೆ ಒಂದು ಮಾತನ್ನು ಹಂಚಿಕೊಂಡಿದ್ದೆ. ‘‘ಕಾವೇರಿ ಕಥನ’’ ಎರಡು ಕೆಲಸ ಮಾಡುವ ಸಾಧ್ಯತೆ ಇದೆ. ಇದು ಬೇರೆ ಧಾರಾವಾಹಿಗಳಿಗಿಂತ ಭಿನ್ನವಾಗಿ ಮೂಡಿ ಬರುತ್ತಿರುವ ಲೇಖನವಾದ್ದರಿಂದ ಬಹಳಷ್ಟು ಓದುಗರು ಭಾನುವಾರಕ್ಕೆ ಕಾಲತುದಿಯಲ್ಲಿ ಕಾಯುತ್ತಾರೆ. ಹಲವಾರು ಆಸಕ್ತರು ಭಾನುವಾರದ ಹಾಳೆಯನ್ನು ಸಂಗ್ರಹಿಸುವ ಅವಕಾಶವೂ ಇದೆ ಎಂದು ಹೇಳಿದ್ದೆ.

ನಾನು ಒಬ್ಬ ವಿಮರ್ಶಕನಾಗಿ ನನ್ನ ಊಹೆ ವೈಯಕ್ತಿಕವಾಗಿ ನನ್ನ ಅರಿವಿಗೆ ಬಂದಿದೆ ಎಂದು ಹೇಳಿಕೊಳ್ಳಲು ಸಂತೋಷ ಪಡುತ್ತೇವೆ.

ನನ್ನ ಮದುವೆಯಾಗಿ 20 ವರುಷಕಳೆಯಿತು, ವೈಭವೋಪೇತ ಸಮಾಗಮಕ್ಕಾಗಿ ಲೋಪಾಮುದ್ರೆ ಮತ್ತು ಅಗಸ್ತ್ಯರ ನಡುವಿನ ಸಂಭಾಷಣೆಗಳು ಕಚಗುಳಿ ಇಡುತ್ತದೆ. ಲೋಮಶರು ಹೇಗೆ ಹೇಳಿದ್ದರೋ ನನಗೆ ಗೊತ್ತಿಲ್ಲ. ರಾಜೇಂದ್ರರು ಮಾತ್ರ ಅದನ್ನು ನವಿರಾಗಿ ಓದುಗರಿಗೆ ಅವರದೇ ಆದ ಶೈಲಿಯಲ್ಲಿ ಉಣ ಬಡಿಸುತ್ತಿದ್ದಾರೆ. ಕಾವೇರಿ ಕಥನ ಓದಿದ ನಂತರವೇ ವೈಭವೋಪೇತ ಸಮಾಗಮಕ್ಕೆ ಹೇಗೆಲ್ಲಾ ತಯಾರಿ ಇರುತ್ತದೆ ಎಂಬ ಅರಿವೇ ನನಗಿರಲಿಲ್ಲ. ಬೆಂಕಿಯಂತ ಅಗಸ್ತ್ಯರಂತಹವರೇ ಲೋಪಾಮುದ್ರೆಯ ಮಾತುಗಳಿಗೆ ತಾಳ್ಮೆ ವಹಿಸಿ ಇದೀಗ ತಯಾರಿಗಾಗಿ ಹೊರಟಾಗಿದೆ. ಅವರ ಸಮಾಗಮದ ಕುತೂಹಲ ಕಥನಕ್ಕಾಗಿ ನನ್ನಂತ ಎಷ್ಟೋ ಜನರು ಕಾದು ಕುಳಿತಿದ್ದಾರೋ ? ಏನೋ ಪ್ರಥಮ ಬಾರಿಗೆ ಪತ್ನಿಯೊಂದಿಗೆ ಸಮಾಗಮ ನಡೆಸಬೇಕೆನ್ನುವ ಆತುರದಲ್ಲಿದ್ದ ಅಗಸ್ತ್ಯರಿಗೆ ಲೋಪಾಮುದ್ರೆಯ ಮಾತುಗಳು ಹೇಗಾಗಿರಬೇಡ ? ಆ ಹೊತ್ತಿನಲ್ಲಿ ಬಯಕೆಯ ಶಿಖರ ತಲುಪಿದ್ದ ಅಗಸ್ತ್ಯರು ತನ್ನ ಸಹಜ ಸ್ವಭಾವದಲ್ಲಿದ್ದಿದ್ದರೆ ಶಾಪ ಕೊಟ್ಟಾಗಿರುತ್ತಿತ್ತು. ಇಲ್ಲಿ ಹಾಗಾಗಲಿಲ್ಲ, ತಾಳ್ಮೆಯಿಂದ ಇದ್ದು ತಯಾರಿ ನಡೆಸಲು ಹೊರಟಿದ್ದು ಕುತೂಹಲ ಮೂಡಿಸಿದೆ.

ಈ ಕಥನ ಓದುವ ಯುವಕ-ಯುವತಿಯರು ಕೂಡ ಪರಸ್ಪರ ದೈಹಿಕ ಸಮಾಗಮ ಆಗುವದಕ್ಕೂ ಮುನ್ನ ಯಾವ ರೀತಿಯ ಪೂರ್ವ ತಯಾರಿ ಮಾಡಿಕೊಳ್ಳಬೇಕೆಂಬ ಶೈಲಿಯನ್ನು ಒಂದಷ್ಟು ಜನ ಪಾಲಿಸಬಹುದೇನೋ ? 20 ವರ್ಷದ ಮೊದಲೇ ಗೊತ್ತಿದ್ದರೆ ನಾನೂ ವಿವಾಹಾನಂತರ ನನ್ನ ಬಾಳ ಸಂಗಾತಿಯೊಂದಿಗೆ ಪ್ರಥಮ ಸಮಾಗಮದ ಪೂರ್ವ ತಯಾರಿ ನಡೆಸಿ ಭಿನ್ನವಾಗಿ ನಡೆಸಬಹುದಿತ್ತೇನೋ ಅನ್ನಿಸಿತು. ಏನೇ ಆಗಲಿ ಕಾವೇರಿ ಕಥನ ಸುಂದರವಾಗಿ ಮೂಡಿ ಬರುತ್ತಿದೆ. ಮುಂದಿನ ಕುತೂಹಲ ಘಟ್ಟಕ್ಕಾಗಿ ಕಥನ-10ರವರೆಗೂ ಕಾಯ ಬೇಕೇನೋ !

?ಅಲ್ಲಾರಂಡ ವಿಠಲನಂಜಪ್ಪ

9448312310