ವೀರಾಜಪೇಟೆಯ ಹವ್ಯಾಸಿ ಚಿತ್ರ ಕಲಾವಿದ ಸಾದಿಕ್ ಹಂಸ ಅವರ ಆರ್ಟ್ಲಿಂಕ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ವೀರಾಜಪೇಟೆಯಲ್ಲಿ ಏರ್ಪಡಿಸಿದ್ದ ಮಕ್ಕಳ ಚಿತ್ರಕಲಾ ಉತ್ಸವ ವೀಕ್ಷಕರ ಕಣ್ಮನ ಸೆಳೆಯಿತು.
ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಕೂಡ ಏರ್ಪಡಿ ಲಾಗಿದ್ದು, ಮಕ್ಕಳು ಉತ್ಸಾಹದಿಂದಲೇ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಚಿತ್ರಕಲಾ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ವೀರಾಜಪೇಟೆ ನಗರ ಜೆಡಿಎಸ್ ಅಧ್ಯಕ್ಷ ಪಿ. ಎ. ಮಂಜುನಾಥ್, ಕಲೆಯಲ್ಲಿ ಜೀವನ ಶೈಲಿಯನ್ನೇ ಬದಲಾಯಿಸುವ ಶಕ್ತಿ ಅಡಗಿದೆ ಎಂದರು. ಚಿತ್ರಕಲೆಯ ಕುರಿತು ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿ ರುವದ ನಿಜಕ್ಕೂ ಶ್ಲಾಘನೀಯ ವೆಂದರು. ಕಲೆಯೂ ಮಾನವನ ಅವಿಭಾಜ್ಯ ಅಂಗವೆಂದು ಪಟ್ಟಣ ಪಂಚಾಯ್ತಿ ಸದಸ್ಯೆ ಮನೆಯಪಂಡ ದೇಚಮ್ಮಕಾಳಪ್ಪ ಹೇಳಿದರು.
ನಗರದ ಹಿರಿಯ ವಕೀಲ ಎಸ್. ಆರ್. ಜಗದೀಶ್ ಮಾತನಾಡಿ ಕೊಡಗಿನಲ್ಲಿ ಚಿತ್ರಕಲೆಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ ಎಂದು ಹೇಳಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ. ದರ್ಶನ್ ಅವರು ಮಾತನಾಡಿ, ಚಿತ್ರಕಲೆಗೆ ಇಲಾಖೆಯಿಂದ ಎಲ್ಲಾ ತರದ ಸಹಕಾರವನ್ನು ನೀಡ ಲಾಗುವದು ಎಂದರು.
ಜಿಲ್ಲೆಯ ಛಾಯಾಚಿತ್ರ ಗ್ರಾಹಕ ಕುಮಾರ್, ಪತ್ರಕರ್ತ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಟಿ. ಕೆ. ಬೋಪಯ್ಯ ಮುಂತಾದವರು ಮಾತನಾಡಿದರು.
ಚಿತ್ರಕಲಾ ಉತ್ಸವದಲ್ಲಿ ವಿವಿಧ ಶಾಲೆಗಳ 50ಕ್ಕೂ ಅಧಿಕ ವಿದ್ಯಾರ್ಥಿ ಗಳು ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದರು.1 ರಿಂದ 4ನೇ ತರಗತಿಯ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಸ್ಪರ್ಧೆಯಲ್ಲಿ ವೀರಾಜಪೇಟೆ ಕಾವೇರಿ ಶಾಲೆಯ ಆಯಿಶಾ (ಪ್ರಥಮ) ಯಶ್ವಿತಾ ದ್ವಿತೀಯ) ತೈರಾಮಂದಣ್ಣ (ತೃತೀಯ) ಬಹುಮಾನಗಳನ್ನು ಪಡೆದರು.
5 ರಿಂದ 7ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಎಸ್. ಎಂ.ಎಸ್. ಶಾಲೆಯ ಕವೀನ್ಕುಶಾಲಪ್ಪ (ಪ್ರಥಮ) ಅಂತ ಅನ್ನಮ್ಮ ಶಾಲೆಯ ಪ್ರಜ್ವಲ್ (ದ್ವಿತೀಯ) ಕೂರ್ಗ್ವ್ಯಾಲಿ ಶಾಲೆಯ ರುಕ್ಸಾನ ತಲತ್ (ತೃತೀಯ) ಬಹುಮಾನಗಳನ್ನು ಪಡೆದರು. 8 ರಿಂದ 10ನೇ ತರಗತಿ ವಿಭಾಗದಲ್ಲಿ ಕಾವೇರಿಶಾಲೆಯ ಪ್ರಣವ್ (ಪ್ರಥಮ) ರೀದ್ಯಾಮುತ್ತಮ್ಮ (ದ್ವಿತೀಯ) ಲಿಫನ್ ಮುತ್ತಪ್ಪ (ತೃತೀಯ) ಬಹುಮಾನ ಗಳನ್ನು ಗಳಿಸಿದರು. ಒಟ್ಟಾರೆ ಚಿತ್ರಕಲಾ ಉತ್ಸವ ನೆರೆದಿದ್ದ ಜನರ ಮನ ಸೆಳೆಯಿತು.
-ಕೆ. ಕೆ. ಎಸ್., ವೀರಾಜಪೇಟೆ.