ಮಡಿಕೇರಿ, ಡಿ. 28: ಭತ್ತ ಖರೀದಿ ಸಂಬಂಧ ಬೆಂಬಲ ಬೆಲೆ ಯೋಜನೆಯಡಿ ರೈತರ ಹೆಸರು ನೋಂದಣಿ ಪ್ರಕ್ರಿಯೆಯು ಜನವರಿ ಮೊದಲ ವಾರದಿಂದ ಆರಂಭ ವಾಗಲಿದೆ ಎಂದು ಆಹಾರ, ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ. ರೈತರು ಮಡಿಕೇರಿ, ಗೋಣಿಕೊಪ್ಪ ಹಾಗೂ ಕುಶಾಲನಗರ ಎಪಿಎಂಸಿ ಗಳಲ್ಲಿ ತಮ್ಮ ಹೆಸರು ನೋಂದಣಿ ಮಾಡಬೇಕಿದ್ದು, ಕೃಷಿ ಇಲಾಖೆಯಿಂದ ಪಡೆದಿರುವ ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆಯಡಿ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹಾಜರುಪಡಿಸಿ ನೋಂದಣಿ ಮಾಡಬೇಕಿದೆ ಎಂದು ಉಪ ನಿರ್ದೇಶಕರು ಕೋರಿದರು.
ಭತ್ತ ಬೆಂಬಲ ಬೆಲೆಯಡಿ ಹೆಸರು ನೋಂದಣಿ ಮಾಡಿದ ನಂತರ ಕೃಷಿಕರಿಗೆ ಹತ್ತಿರವಿರುವ ಅಕ್ಕಿ ಗಿರಣಿ ಜೊತೆ ಮ್ಯಾಪ್ ಮಾಡಲಾಗುತ್ತದೆ. ನಂತರ ಎಸ್ಎಂಎಸ್ ಮೂಲಕ ಯಾವ ದಿನಾಂಕದಂದು ಅಕ್ಕಿ ಗಿರಣಿಗೆ ಭತ್ತ ಪೂರೈಸಬೇಕು ಎಂಬ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಅವರು ತಿಳಿಸಿದರು. ಜಿಲ್ಲೆಯಲ್ಲಿ 13 ಅಕ್ಕಿ ಗಿರಣಿಗಳಿದ್ದು, ನೋಂದಣಿ ಮಾಡಿದ ನಂತರ ಎಸ್ಎಂಎಸ್ನಲ್ಲಿ ಬರುವ ಹತ್ತಿರದ ಅಕ್ಕಿ ಗಿರಣಿಗೆ ಬೆಂಬಲಬೆಲೆಯಡಿ ಭತ್ತ ನೀಡಬೇಕಿದೆ. ಬೆಂಬಲ ಬೆಲೆಯಡಿ ಭತ್ತ ಖರೀದಿ ಮಾಡಿದ ಹಣವನ್ನು ಆಹಾರ ನಿಗಮ ದಿಂದ ಭರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕೃಷಿಕರ ಫ್ರೂಟ್ಸ್ ಗುರುತಿನ ಚೀಟಿ ಹೊರತುಪಡಿಸಿ ಇತರ ದಾಖಲೆಗಳ ಅಗತ್ಯವಿಲ್ಲ ಎಂದು ಹೇಳಿದರು. ಹೆಚ್ಚಿನ ಮಾಹಿತಿಗೆ 9972364303 (ಮಡಿ ಕೇರಿ), 8553869697 (ವೀರಾಜ ಪೇಟೆ), 988549159 (ಸೋಮ ವಾರಪೇಟೆ) ಸಂಪರ್ಕಿಸಬಹುದಾಗಿದೆ.
ಅಕ್ಕಿ ಗಿರಣಿಗಳ ಮಾಹಿತಿ: ಸೋಮವಾರಪೇಟೆ ತಾಲೂಕಿನ ಅನ್ನಪೂರ್ಣ, ಶ್ರೀಕೃಷ್ಣ, ಬಸವರಾಜು, ಗಜಾನನ, ಹೊನ್ನಮ್ಮ ವೆಂಕಟೇಗೌಡ, ಸಂದೀಪ್, ಶ್ರೀ ಸಿದ್ದೇಶ್ವರ, ಶ್ರೀ ವಿನಾಯಕ, ಶ್ರೀ ಮಂಜುನಾಥೇಶ್ವರ, ತೇಜಸ್ವಿನಿ, ಪೊನ್ನಂಪೇಟೆಯ ಚೆರಿಯಪಂಡ ಕುಶಾಲಪ್ಪ ಉತ್ತಪ್ಪ, ವೀರಾಜಪೇಟೆಯ ಜೆ.ಎನ್. ಪುಷ್ಪರಾಜ್, ಶ್ರೀ ವೆಂಕಟೇಶ್ವರ ಅಕ್ಕಿ ಗಿರಣಿಗಳು.