ಚೆಟ್ಟಳ್ಳಿ, ಡಿ. 28: ಮಡಿಕೇರಿಯ ಬಾಲಭವನದಲ್ಲಿ ನಡೆದ ಜಂಟಿ ಕ್ರಿಯಾ ಸಮಿತಿಯ ಸಮಾವೇಶದಲ್ಲಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಧರ್ಮೆಶ್ ಮಾತನಾಡಿ ಕೇಂದ್ರ ಸರ್ಕಾರವು ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಮೂಲಕ ಸರ್ಕಾರಿ ಉದ್ದಿಮೆಗಳನ್ನು ಖಾಸಗೀ ಕರಣಗೊಳಿಸಿ ಉದ್ಯೋಗಗಳನ್ನು ಕಡಿತಗೊಳಿಸುವುದರ ಮೂಲಕ ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಹದೇವ್ ಮಾತನಾಡಿ ಸುಳ್ಳು ಭರವಸೆಯಲ್ಲಿ ಬಡ ಕಾರ್ಮಿಕರನ್ನು ಭ್ರಮನಿರಸನಗೊಳಿಸಿ ಅವರ ಹಕ್ಕುಗಳನ್ನು ಕಸಿದುಕೊಳ್ಳಲಾಗುತಿದೆ ಎಂದರು. ಈ ಸಂದರ್ಭ ಜನವರಿ 8 ಮತ್ತು 9 ರ ಅಖಿಲ ಭಾರತ ಮುಷ್ಕರದ ಕರ ಪತ್ರವನ್ನು ಬಿಡುಗಡೆ ಗೊಳಿಸಲಾಯಿತು.

ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಭರತ್, ಆಶಾ ಕಾರ್ಯಕರ್ತರ ರಾಜ್ಯ ಕಾರ್ಯದರ್ಶಿ ಬಿ. ರವಿ, ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಗುಣಶೇಖರ್, ಎ.ಸಿ. ಸಾಬು, ಹೆಚ್.ಬಿ. ರಮೇಶ್. ರಾಚಪ್ಪಾಜೀ, ಎನ್.ಡಿ. ಕುಟ್ಟಪ್ಪ, ಸೋಮಪ್ಪ ಮತ್ತಿತರರು ಹಾಜರಿದ್ದರು.