ಮಡಿಕೇರಿ, ಡಿ. 27: ನಗರದ ಹೊಸ ಬಡಾವಣೆಯ ಶ್ರೀ ಪ್ರಸನ್ನ ಗಣಪತಿ ದೇವಾಲಯದ 19ನೇ ವಾರ್ಷಿಕ ಪೂಜೋತ್ಸವವು ತಾ. 29ರಂದು ನಡೆಯಲಿದೆ. ಅಂದು ಬೆಳಿಗ್ಗೆ 7 ಗಂಟೆಯಿಂದ ದೈವಿಕ ಕೈಂಕರ್ಯಗಳೊಂದಿಗೆ; ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ಏರ್ಪಡಿಸಿದ್ದು, ಸಂಜೆ 6 ಗಂಟೆಯಿಂದ ದುರ್ಗಾಪೂಜೆ, ರಂಗಪೂಜೆ, ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಲಿದೆ.