*ಗೋಣಿಕೊಪ್ಪಲು, ಡಿ. 27: ಪೆÇನ್ನಂಪೇಟೆ ಸಾಯಿ ಶಂಕರ್ ವಿದ್ಯಾಸಂಸ್ಥೆ ಮತ್ತು ಪ್ರಶಾಂತಿ ನಿಲಯದ ವತಿಯಿಂದ ತಾ. 28ರಂದು (ಇಂದು) ಜ್ಯೋತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.
ತಾ. 28ರಂದು (ಇಂದು) ಸಂಜೆ 4 ಗಂಟೆಗೆ ಪ್ರಶಾಂತಿ ನಿಲಯದ ಸಾಯಿ ಕಲಾವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಶಾಸಕ ಕೆ.ಜಿ. ಬೋಪಯ್ಯ ಮತ್ತು ವಿಧಾನಪರಿಷತ್ ಸದಸ್ಯ ಮಂಡೇಪಂಡ ಸುನೀಲ್ ಸುಬ್ರಮಣಿ ಹಾಗೂ ಸಾಯಿ ಶಂಕರ್ ವಿದ್ಯಾಸಂಸ್ಥೆಯ ಮುಖ್ಯಸ್ಥ ಕೋಳೆರ ಝರು ಗಣಪತಿ ಉಪಸ್ಥಿತರಿರುವರು ಎಂದು ವಿದ್ಯಾಸಂಸ್ಥೆಯ ಕಾರ್ಯದರ್ಶಿ ತಿಳಿಸಿದ್ದಾರೆ.