ಮಡಿಕೇರಿ, ಡಿ. 27: ಜಿಲ್ಲೆಯ ಎಲ್ಲಾ ವರ್ಗದ (ಎಪಿಎಲ್, ಬಿಪಿಎಲ್, ಎಎವೈ) ಪಡಿತರ ಚೀಟಿ ಕುಟುಂಬದ ಸದಸ್ಯರುಗಳು ಬೆರಳಚ್ಚನ್ನು ಪಡೆದು ಇಕೆವೈಸಿ ಪ್ರಕ್ರಿಯೆ ಮಾಡಬೇಕಿದೆ. ಈ ಪ್ರಕ್ರಿಯೆಯನ್ನು ಪಡಿತರ ಚೀಟಿ ಕುಟುಂಬದ ಎಲ್ಲಾ ಸದಸ್ಯರು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗೆ ಜನವರಿ 1 ರಿಂದ 10 ರೊಳಗಾಗಿ ತೆರಳಿ ಬೆರಳಚ್ಚನ್ನು ನೀಡಿ ಇಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.