ಮಡಿಕೇರಿ, ಡಿ. 27: ಡಿಸೆಂಬರ್ ತಿಂಗಳಿನಲ್ಲಿ ಕ್ರಿಸ್‍ಮಸ್ ಮತ್ತು 2020ನೇ ಹೊಸ ವರ್ಷದ ಆಚರಣೆಗಾಗಿ ಸನ್ನದುದಾರರು ಹಾಗೂ ಖಾಸಗಿ ವ್ಯಕ್ತಿಗಳು, ಸಂಘ-ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವಿಸಲು ಸಿಎಲ್-5 ಸನ್ನದು ಮಂಜೂರು ಮಾಡಲು ಅಬಕಾರಿ ಆಯುಕ್ತರು ಪೂರ್ವಾನುಮತಿ ನೀಡಿದ್ದಾರೆ.
ಈ ಹಿನ್ನೆಲೆ ಕ್ರಿಸ್‍ಮಸ್ ಮತ್ತು 2020ನೇ ಹೊಸ ವರ್ಷದ ಆಚರಣೆಗಾಗಿ ಸನ್ನದುದಾರರು ಹಾಗೂ ಖಾಸಗಿ ವ್ಯಕ್ತಿಗಳು, ಸಂಘ-ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವಿಸಲು ಸಿಎಲ್-5 ಸನ್ನದು ಕಡ್ಡಾಯವಾಗಿ ಷರತ್ತುಗಳನ್ವಯ ಪಡೆಯಬೇಕು.
ಸಿಎಲ್-5 ಸನ್ನದು ಶುಲ್ಕ ರೂ. 10 ಸಾವಿರ ಹೆಚ್ಚುವರಿ ಸನ್ನದು ಶುಲ್ಕ ರೂ. 1,500 ರಂತೆ ಕಡ್ಡಾಯವಾಗಿ ಪಾವತಿಸಬೇಕು. ಸಿಎಲ್-5 ಸನ್ನದುಗಳಲ್ಲಿ ಯಾವುದೇ ರೀತಿಯ ಅನಧಿಕೃತ ಮದ್ಯ ಸೇವಿಸಲು ಅವಕಾಶವಿಲ್ಲ. ಕೆಎಸ್‍ಬಿಸಿಎಲ್ ಡಿಪೋನಿಂದ ಅಧಿಕೃತವಾಗಿ ಪಡೆದುಕೊಂಡ ಮದ್ಯ, ಬೀಯರ್ ಮಾತ್ರ ಬಳಸತಕ್ಕದ್ದು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.