ಬಾಳೆಲೆಯ ಕಾವೇರಿ ಕಲಾ ಸಂಗೀತ ಶಾಲೆಯ ಗುರುಗಳಾದ ವತ್ಸಲಾ ನಾರಾಯಣ್ ಅವರ ಶಿಷ್ಯನಾದ ಅನ್ವಿತ್‍ಕುಮಾರ್ 2018-19ನೇ ಸಾಲಿನ ಕರ್ನಾಟಕ ಶಾಸ್ತ್ರೀಯ ಸಂಗೀತದ ಸೀನಿಯರ್ ವಿಭಾಗದ ಪರೀಕ್ಷೆ ಯಲ್ಲಿ ಶೇಕಡ 84.5 ಅಂಕಗಳಿಸಿ ಅತ್ಯುನ್ನತ ಶ್ರೇಣಿಯೊಂದಿಗೆ ಜಿಲ್ಲೆಗೆ ಪ್ರಥಮಸ್ಥಾನವನ್ನು ಪಡೆದಿರು ತ್ತಾನೆ. ಕೋಟೆ ಆಂಜನೇಯ ದೇವಸ್ಥಾನ ಮೈಸೂರು, ಕೃಷ್ಣಧಾಮ ಮೈಸೂರು, ಸುರಿಯ ದೇವಸ್ಥಾನ ಬೆಳ್ತಂಗಡಿ ತಾಲೂಕು, ಶ್ರೀಕ್ಷೇತ್ರ ಕುಂಟಾರು, ಕಾಸರಗೋಡು ಮುಂತಾದ ಕಡೆಗಳಲ್ಲಿ ತನ್ನ ಪ್ರತಿಭೆ ಯನ್ನು ಪ್ರದರ್ಶಿಸಿರುವದರ ಜೊತೆಗೆ ಭಾವಗೀತೆ, ಭಕ್ತಿಗೀತೆ, ಗಝಲ್ ಮುಂತಾದ ಹಲವಾರು ಸ್ಪರ್ಧೆಗಳಲ್ಲಿ ತಾಲೂಕು, ಜಿಲ್ಲೆ ವಲಯಮಟ್ಟ ಅಲ್ಲದೆ ರಾಜ್ಯಮಟ್ಟದಲ್ಲಿಯೂ ಪ್ರತಿನಿಧಿಸಿರುತ್ತಾನೆ. ಪೊನ್ನಂಪೇಟೆಯ ರಾಜಾರಾಂ ಅವರಲ್ಲಿ ವಯೋಲಿನ್ ಕಲಿತು ತನ್ನ ಪ್ರತಿಭೆಯನ್ನು 7ನೇ ಇನ್ಸಾಫಾ ಇಂಟರ್‍ನಾಶನಲ್ ಕಾಲ್ಫರೆನ್ಸ್ ಮತ್ತು ಸಿಲ್ಕ್ ಡೆವಲಪ್‍ಮೆಂಟ್ ಮೈಸೂರು ಮತ್ತು ಮಡಿಕೇರಿ ಆಕಾಶವಾಣಿಯ ಚಿಣ್ಣರ ಲೋಕದಲ್ಲಿ ಪ್ರದರ್ಶಿಸಿರುತ್ತಾನೆ. ಬಾಳೆಲೆಯ ಪ್ರತಿಭಾ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಯಾದ ಅನ್ವಿತ್ ಜೀó ಕನ್ನಡದ 14ನೇ ವಯೋಮಿತಿಯೊಳಗಿನ ಮಕ್ಕಳ ಸರಿಗಮಪದ ಮೆಗಾ ಆಡಿಶನ್‍ನಲ್ಲಿ ಭಾಗವಹಿಸಿರುತ್ತಾನೆ. ಅಂತೆಯೇ ಖ್ಯಾತ ಸಂಗೀತ ನಿರ್ದೇಶಕ ಬ್ರಹ್ಮ ಹಂಸಲೇಖ ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರತಿಭೆ ಪ್ರದರ್ಶಿಸಿದ್ದಾನೆ. ಬೆಂಗಳೂರಿನಲ್ಲಿ ನಡೆದ ವಾಯ್ಸ್ ಆಫ್ ಕರ್ನಾಟಕದಲ್ಲಿ ಸಮಾಧಾನಕರ ಬಹುಮಾನ ಮತ್ತು ವೀರಾಜಪೇಟೆಯ ವಾಯ್ಸ್‍ಆಫ್, ವೀರಾಜಪೇಟೆಯಲ್ಲಿ ದ್ವಿತೀಯ ಬಹುಮಾನ ಪಡೆದಿರುತ್ತಾನೆ. ಈತನ ಪ್ರತಿಭೆಯನ್ನು ಗುರುತಿಸಿ ಕೊಡಗು ಜಿಲ್ಲಾ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಮತ್ತು ಕೊಡ್ಲಿಪೇಟೆಯಲ್ಲಿ ನಡೆದ ಮಕ್ಕಳ ಶಾಸ್ತ್ರೀಯ ಸಮ್ಮೇಳನದಲ್ಲಿ ಇವನನ್ನು ಸನ್ಮಾನಿಸಿ ಗೌರವಿಸಲಾಗಿದೆ. ಈ ಪ್ರತಿಭಾಶಾಲಿ ಬಾಳೆಲೆ ಗಣೇಶ ಮಂದಿರದ ಅರ್ಚಕ ವಿಷ್ಣುಮೂರ್ತಿ ಅರಳಿತ್ತಾಯ-ಚಂದ್ರಕಲಾ ದಂಪತಿಗಳ ಪುತ್ರ.