ಒಮ್ಮೆ ಈ ಚುಕ್ಕಿಯನ್ನು ನೋಡಿ, ಅದು ಎಲ್ಲಿ ? ಅಲ್ಲಿ ನಮ್ಮ ಮನೆ ಅಲ್ಲಿ ನಾವು ! ನಿಮ್ಮ ಜೀವನದಲ್ಲಿ ಯಾರ ಬಗ್ಗೆ ಕೇಳಿದ್ದೀರೋ, ನಾವು ಅನುಭವಿಸಿರುವ ಸುಖ-ದುಃಖಗಳ ಸಾಗರ, ಸಾವಿರಾರು ವಿಶ್ವಾಸಿ ಧರ್ಮಗಳು, ಸಿದ್ಧಾಂತಗಳು ಹಾಗೂ ಆರ್ಥಿಕ ಉಪದೇಶಗಳು, ಪ್ರತಿ ಬೇಟೆಗಾರನು ಹಾಗೂ ಅನ್ವೇಷಕನು, ಪ್ರತಿ ನಾಯಕನು ಹಾಗೂ ಹೇಡಿಯು, ಸೃಷ್ಟಿಕರ್ತನು ಹಾಗೂ ವಿಧ್ವಂಸಕನು, ಪ್ರತಿ ರಾಜನು ಹಾಗೂ ರೈತನು, ಪ್ರೇಮದಲ್ಲಿರುವ ಎಲ್ಲಾ ಯುವ ಜೋಡಿಗಳು, ಪ್ರತಿ ಆಶಾಭರಿತ ಮಗುವು, ಪ್ರತಿ ತಂದೆ-ತಾಯಿಂದಿರು, ಪ್ರತಿ ಸಂಶೋಧಕನು ಹಾಗೂ ಪರಿಶೋಧಕನು, ಪ್ರತಿ ನೈತಿಕತೆಯ ಶಿಕ್ಷಕನು, ಪ್ರತಿ ಭ್ರಷ್ಟ ರಾಜಕಾರಣಿಯು, ಪ್ರತಿ ಅತಿಮುಖ್ಯ ನಾಯಕನು, ಪ್ರತಿ ಸಂತನು ಹಾಗೂ ಪಾಪಿಯು ಜನಿಸಿ ಬದುಕು ಸಾಗಿಸಿದ್ದು, ಸೂರ್ಯನ ಕಿರಣಗಳಲ್ಲಿ ನೇತಾಡುತ್ತಿರುವ ಆ ಧೂಳಿನ ಕಣದಲ್ಲಿ, ನದಿಗಳ ಪ್ರಮಾಣದಷ್ಟು ರಕ್ತ ಸುರಿಸಿದ ಸೇನಾಪತಿಗಳು, ಚಕ್ರವರ್ತಿಗಳು, ಯೋಚಿಸಿ, ಇವರು ಇಷ್ಟೆಲ್ಲಾ ಮಾಡಿದ್ದು ಈ ಸಣ್ಣ ಚುಕ್ಕಿಯ ಕ್ಷಣಿಕ ಒಡೆಯರಾಗಿ ಮೆರೆಯಲು.

ಈ ಸಣ್ಣ ಚುಕ್ಕಿಯೇ ನಾವು-ನೀವು ಎಲ್ಲಾ ವಾಸಿಸಿರುವ ಭೂಮಿಯ ನೋಟ, ವಾಯೇಜರ್-1 ಎಂಬ ಬಾಹ್ಯಾಕಾಶ ವಿಮಾನ 6 ಬಿಲಿಯನ್ ಕಿ.ಮೀ. ದೂರದಿಂದ ಸೆರೆ ಹಿಡಿದಿರುವ ಭೂಮಿಯ ಚಿತ್ರ.

-ಕಾರ್ಲ್ ಸಾಗನ್