ಶಿಲ್ಪಿ ತನ್ನ ಪ್ರತಿಭೆ ಮತ್ತು ಕಲಾಶಕ್ತಿಯಿಂದ ಮೊರಡಗಲ್ಲನ್ನು ಕಡೆದು ಅಪೂರ್ವ ಕಲಾಕೃತಿಯನ್ನು ನಿರ್ಮಿಸುವಂತೆ, ಶಿಕ್ಷಕ ತನ್ನ ಶಕ್ತಿ ಸಾಮಥ್ರ್ಯ ಮತ್ತು ಪ್ರತಿಭೆಯಿಂದ ವಿದ್ಯಾರ್ಥಿಯನ್ನು ಅಪೂರ್ವ ಮೂರ್ತಿ ಶಿಲ್ಪವನ್ನಾಗಿ ನಿರ್ಮಾಣ ಮಾಡುತ್ತಾನೆ. ಆದ್ದರಿಂದ ಶಿಕ್ಷಕನೇ ವಿದ್ಯಾರ್ಥಿಯ ದಾರಿದೀಪ, ಮಾರ್ಗದರ್ಶಕ. ಇವನೇ ಸಮಾಜದ ನಿರ್ಮಾತೃ. ಇವನ ವ್ಯಕ್ತಿತ್ವದ ಪ್ರತಿಭೆ ಯಲ್ಲಿಯೇ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂಬ ಅಭಿಪ್ರಾಯಗಳು ಇಂದು ದೂರವಾಗಿವೆ. ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿ ತನಗೆ ಇಷ್ಟಬಂದ ರೀತಿಯಲ್ಲಿ ಶಿಕ್ಷಣ ಪಡೆಯುವ ಅವಕಾಶಗಳು ಹೆಚ್ಚಾಗಿವೆ.

ಮಕ್ಕಳಲ್ಲಿ ಕಂಡುಬರುವ ಓದು, ಬರಹ, ಲೆಕ್ಕಾಚಾರಗಳನ್ನೇ ಕಲಿಕೆ ಎನ್ನವುದು. ಮುಂದೆ ಎದುರಾಗುವ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ಎದುರಿಸುವಂತೆ ಮೂಲ ವರ್ತನೆಗಳನ್ನು ಅನುಭವಗಳ ಮೂಲಕ ಮಾರ್ಪಡಿಸುವುದೇ ಶಿಕ್ಷಣ. ಹೀಗೆ ಯಾವುದೇ ಮೂಲವರ್ತನೆ ಮಾರ್ಪಾಡಾದರೂ ಅದು ಕಲಿಕೆಯಾಗುತ್ತದೆ. ಮಕ್ಕಳ ಓದು, ಬರಹ, ಲೆಕ್ಕಾಚಾರಗಳ ಜೊತೆಗೆ, ಸಾಂಸ್ಕøತಿಕ ಅಂಶಗಳನ್ನು, ಸಂಪ್ರದಾಯಗಳನ್ನು ಕಲಿಯುವರು, ಕೌಟುಂಬಿಕ ಜೀವನದಲ್ಲಿ ಸಂಬಂಧಿಕರ ನಡವಳಿಕೆಗಳನ್ನು ಕಲಿಯುವರು, ಪ್ರೀತಿ, ಭಯ, ಕೋಪ, ದ್ವೇಷ, ಆತ್ಮವಿಶ್ವಾಸ ಇವುಗಳನ್ನು ಬೆಳೆಸಿಕೊಳ್ಳುವರು, ಅಲ್ಲದೆ ಅನೇಕ ಗುಣಗಳನ್ನು ರೂಪಿಸಿಕೊಳ್ಳುವರು. ಇವೆಲ್ಲವೂ ಹೊಸದಾಗಿ ರೂಪಿತವಾದ ಅಂಶಗಳೇ ಆಗಿವೆ. ಕಲಿಕೆ ಎಂದರೆ ವ್ಯಕ್ತಿಯ ವರ್ತನೆಯಲ್ಲಿ ಬದಲಾವಣೆಗಳನ್ನು ತರುವುದಾಗಿದೆ. ಮಾನವರು ತಮ್ಮ ಜೀವನಪೂರ್ತಿ ಅನೇಕ ಬದಲಾವಣೆಗಳನ್ನು ಹೊಂದುತ್ತಿರುತ್ತಾರೆ. ಮಾನವನಿಗೆ ಕಲಿಕೆ ಅನಿವಾರ್ಯ ಹಾಗೂ ಅಗತ್ಯ. ಅವನ ಭವಿಷ್ಯ, ಕಲಿಕೆಜ್ಞಾನ, ಕೌಶಲ್ಯತೆ, ಆಸಕ್ತಿ ನಾನಾ ಬಗೆಯ ಸಾಮಥ್ರ್ಯಗಳು ಮತ್ತು ಅಭಿರುಚಿಗಳಿಗೆ ಸಂಬಂಧಪಟ್ಟಂತೆ ಆತ ತನ್ನ ಕಲಿಕೆಯನ್ನು ಮುಂದಿನ ಭವಿಷ್ಯಕ್ಕೆ ಅನುಗುಣವಾಗಿ ಅನುಸರಿಸುತ್ತಾರೆ. ಕಲಿಕೆಯಲ್ಲಿ ಇಂದು ಪ್ರಾಥಮಿಕ ಶಿಕ್ಷಣ, ಪ್ರೌಢಶಿಕ್ಷಣ, ಉನ್ನತ ಶಿಕ್ಷಣ ಎಂದು ವಿಭಾಗಿಸಿ ವಿವಿಧ ಹಂತದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮುಗಿಸಿದ ನಂತರ ಮುಂದೆ ಏನು ? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿರುತ್ತದೆ. ಅದಕ್ಕೆ ಅನುಗುಣವಾಗಿ ಪದವಿ ಶಿಕ್ಷಣವನ್ನು ವಿಶ್ವವಿದ್ಯಾನಿಲಯಗಳು ಪರಿಚಯಿಸಿವೆ. ಅದರಂತೆ ಪದವಿ ಶಿಕ್ಷಣದಲ್ಲಿ ವಿವಿಧ ವಿಷಯಗಳನ್ನು ವಿಭಾಗ ಮಾಡಿ ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ಪಡೆಯುವಂತೆ ಮಾಡಿದೆ ಯಾದರೂ ಆದರೆ ಪದವಿ ಶಿಕ್ಷಣದಲ್ಲಿ ಅನೇಕ ಬದಲಾವಣೆಯಾಗಿರುವುದನ್ನು ಇತ್ತೀಚಿನ ದಿನಗಳಲ್ಲಿ ಕಾಣಬಹುದು. ವಾರ್ಷಿಕ ಪದ್ಧತಿ ಇದ್ದು ನಂತರ ಅದು ಬದಲಾಗಿ ಸೆಮಿಸ್ಟರ್ ಪದ್ಧತಿಯಾಗಿ ಪರಿವರ್ತಿತವಾಯಿತು. ನಂತರ ಕ್ರೆಡಿಟ್ ಆಧಾರಿತ ಸೆಮಿಸ್ಟರ್ ಪದ್ಧತಿ ಬಂತು. ಈಗ ಅದು ಆಯ್ಕೆ ಆಧಾರಿತ ಸೆಮಿಸ್ಟರ್ ಪದ್ಧತಿಯಾಗಿ ಬದಲಾಗಿದೆ.

ಆಯ್ಕೆ ಆಧಾರಿತ ಪದ್ಧತಿ ಎಂದರೇನು ?: ವಿದ್ಯಾರ್ಥಿ ತನ್ನ ಸಾಮಾನ್ಯ ವಿಷಯದ ಜೊತೆಗೆ ಅಧಿಕವಾಗಿ ತನಗೆ ಇಷ್ಟ ಇರುವ ಒಂದು ವಿಷಯವನ್ನು ಆಯ್ಕೆಮಾಡಿಕೊಂಡು ಕಲಿಯುವ ಶಿಕ್ಷಣವನ್ನು ಆಯ್ಕೆ ಆಧಾರಿತ ಶಿಕ್ಷಣ ಪದ್ಧತಿ ಎನ್ನುವರು. ಅಂದರೆ ಕಲಾ, ವಾಣಿಜ್ಯ, ವಿಜ್ಞಾನ ಎಂಬ ಮೂರು ವಿಭಾಗಳಿವೆ. ಅದರಲ್ಲಿ ಯಾವುದಾದರೊಂದು ವಿಭಾಗವನ್ನು ವಿದ್ಯಾರ್ಥಿ ಆಯ್ಕೆ ಮಾಡಿಕೊಂಡು ಕಲಿಯುವುದು. ಆಯ್ಕೆಯಾದ ವಿಷಯದ ಜೊತೆಗೆ ಮತ್ತೊಂದು ವಿಷಯವನ್ನು ಆಯ್ಕೆ ಮಾಡಿಕೊಂಡು ಕಲಿಯಬಹುದಾಗಿದೆ.

ವಿಷಯಗಳ ಆಯ್ಕೆ ಹೇಗೆ ? : ತನ್ನ ಕಾಲೇಜಿನಲ್ಲಿರುವ ಯಾವುದಾದರೂ ಒಂದು ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲವೇ ಪಕ್ಕದ ಕಾಲೇಜಿನಲ್ಲಿ ರುವ ಯಾವುದಾದರು ಒಂದು ವಿಷಯವನ್ನು ಆಯ್ಕೆಮಾಡಿ ಕೊಳ್ಳಬಹುದು ಅಥವಾ ಆನ್‍ಲೈನ್‍ನಲ್ಲಿ ಇರುವ ಯಾವುದಾದರೂ ವಿಷಯ ವನ್ನು ಆಯ್ಕೆಮಾಡಿಕೊಳ್ಳಬಹುದು. ಒಂದು ವೇಳೆ ಆನ್‍ಲೈನ್‍ನಲ್ಲಿ ಆಯ್ಕೆಮಾಡಿಕೊಂಡರೆ ಆನ್‍ಲೈನ್‍ನಲ್ಲಿ ಅಥವಾ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಬಹುದು. ಇಲ್ಲಿ ಪಡೆಯುವ ವಿಷಯಕ್ಕೆ ತಮ್ಮ ಅಧಿಕೃತ ವಿಶ್ವವಿದ್ಯಾನಿಲಯದಲ್ಲಿ ಪ್ರಮಾಣ ಪತ್ರದಲ್ಲಿ ಹೆಚ್ಚುವರಿಯಾಗಿ ಅಂಕವನ್ನು ನಮೂದಿಸುತ್ತಾರೆ. ಅಂದರೆ ಒಬ್ಬ ವಿದ್ಯಾರ್ಥಿ ಎಷ್ಟು ಹೆಚ್ಚುವರಿ ವಿಷಯವನ್ನು ಆಯ್ಕೆ ಮಾಡಿಕೊಂಡು ಪರೀಕ್ಷೆ ಬರೆದು ಹೆಚ್ಚಿನ ಅಂಕವನ್ನು ಪಡೆಯ ಬಹುದಾಗಿದೆ. ಇದನ್ನು ಒಔಔಅS ಮತ್ತು SWಂಙಂಒ ಎಂಬ oಟಿಟiಟಿe ಛಿouಡಿses ನಿಂದ ಪಡೆಯಬಹುದು.

ಅಃಅS ಎಂದರೇನು ? : ಅಃಅS ಎಂದರೆ ಅhoiಛಿe ಃಚಿseಜ ಅಡಿeಜiಣ Sಥಿsಣem ಎಂದು ಅರ್ಥ. ಅಂದರೆ ಒಬ್ಬ ವಿದ್ಯಾರ್ಥಿ ಪಡೆಯುವ ಅಂಕಗಳಿಗೆ ಅಡಿeಜiಣ ಅಂಕವನ್ನು ವಿಶ್ವವಿದ್ಯಾನಿಲಯವು ನೀಡುತ್ತದೆ. ವಿದ್ಯಾರ್ಥಿ ಪಡೆಯುವ ಅಂಕಗಳ ಆಧಾರದ ಮೇಲೆ ಕ್ರೆಡಿಟ್ ಅಂಕವನ್ನು ನೀಡಲಾಗುತ್ತದೆ.

ಅಉPಂ ಯ ಅರ್ಥ: ಅಉPಂ ಎಂದರೆ ಅumuಟಚಿಣive ಉಡಿಚಿಜe Poiಟಿಣ ಂveಡಿಚಿge, ಇದನ್ನು ಪದವಿ ಶಿಕ್ಷಣದಲ್ಲಿ ಪಡೆಯುವ ಅಂಕಗಳನ್ನು ಆಧರಿಸಿ ಸಿ.ಜಿ.ಪಿ.ಎಯನ್ನು ನೀಡಲಾಗುತ್ತದೆ. ಉದಾಹರಣೆಗೆ ಇ(ಅ1ಘಿS1)/ಇಅ

SಉPಂ ಎಂದರೆ ಪದವಿ ವಿದ್ಯಾರ್ಥಿಗಳ ತೆಗೆಯುವ ಸಾಮಾನ್ಯ ಅಂಕ ಇದನ್ನು Semesಣeಡಿ ಉಡಿಚಿಜe Poiಟಿಣ ಂveಡಿಚಿge(SಉPಂ) ಎಂದು ಅಂದಾಜು ಮಾಡಿ ಅಂಕವನ್ನು ನೀಡಲಾಗುತ್ತದೆ. ಉದಾಹರಣೆಗೆ 35 ರಿಂದ 39 ಅಂಕ ಪಡೆದರೆ 4 ಅಂಕ SಉPಂ 40-45 ಅಂಕ ಪಡೆದರೆ 4.5 ಅಂಕ, 45-49 ಅಂಕ ಪಡೆದರೆ 5 ಅಂಕ, 50-54 ಅಂಕ ಪಡೆದರೆ 5.5, 55-57 ಅಂಕ ಪಡೆದರೆ 6, 60-64 ಅಂಕ ಪಡೆದರೆ 6.5 65-69 ಅಂಕ ಪಡೆದರೆ 7, 70-74 ಅಂಕ ಪಡೆದರೆ 7.5, 75-79 ಅಂಕ ಪಡೆದರೆ 8, 80-84- ಅಂಕ ಪಡೆದರೆ 8.5, 85-89 ಅಂಕ ಪಡೆದರೆ 9, 90-94 ಅಂಕ ಪಡೆದರೆ 9.5, 95-100 ಅಂಕ ಪಡೆದರೆ 10 ಅಂಕ ಉಡಿಚಿಜe ಸಿಗುತ್ತದೆ. ಈ ಅಂಕದ ಆಧಾರದ ಮೇಲೆ ಗ್ರೇಡನ್ನು ನೀಡಲಾಗುತ್ತದೆ. 4-5 ಅಂಕಕ್ಕೆ ಅ , 5-5.5 ಅಂಕಕ್ಕೆ ಃ, 5.5-6 ಅಂಕಕ್ಕೆ ಃ+, 6-7 ಅಂಕಕ್ಕೆ ಂ, 7-8 ಅಂಕಕ್ಕೆ ಂ+, 8-9 ಅಂಕಕ್ಕೆ ಔ, 9-10 ಅಂಕಕ್ಕೆ ಔ+ಗ್ರೇಡನ್ನು ನೀಡಲಾಗುತ್ತದೆ.

ಪದವಿ ಶಿಕ್ಷಣದಲ್ಲಿರುವ ಕೋರ್ಸ್‍ಗಳು: ಪದವಿ ಶಿಕ್ಷಣದಲ್ಲಿ ನಾಲ್ಕು ಭಾಗಗಳನ್ನು ವಿಂಗಡಿಸಲಾಗಿರುತ್ತದೆ. ಅದರಲ್ಲಿ ಮೊದಲಿಗೆ ಗ್ರೂಪ್-1-ಛಿouಡಿses ಅಂದರೆ ವಿದ್ಯಾರ್ಥಿ ಆಯ್ಕೆಮಾಡಿಕೊಂಡ ಐಚ್ಚಿಕ ವಿಷಯವಾಗಿರುತ್ತದೆ. ಕಲೆ, ವಾಣಿಜ್ಯ, ವಿಜ್ಞಾನ ಗ್ರೂಪ್-2ರಲ್ಲಿ ಇಟeಛಿಣive ಛಿouಡಿses ಇದರಲ್ಲಿ ವಿದ್ಯಾರ್ಥಿ ಇಷ್ಟಬಂದ ಒಂದು ವಿಷಯವನ್ನು ಔಟಿಟiಟಿe ಅಥವಾ ಕಾಲೇಜುಗಳಿಂದ ಆಯ್ಕೆಮಾಡಿಕೊಳ್ಳಬಹುದಾಗಿದೆ. ಗ್ರೂಪ್-3 ರಲ್ಲಿ ಂ) ಈouಟಿಜಚಿಣioಟಿ ಛಿouಡಿses ಇದರಲ್ಲಿ ಮುಖ್ಯವಾಗಿ ಟಚಿಟಿguಚಿges ನ್ನು ಆಯ್ಕೆ ಮಾಡಿಕೊಳ್ಳಬಹುದು. ಃ) ಇಟeಛಿಣive ಈouಟಿಜಚಿಣioಟಿ ಇದರಲ್ಲಿ ಭಾರತದ ಸಂವಿಧಾನ, ಮಾನವ ಹಕ್ಕು, ಲಿಂಗ ಸಮಾನತೆ, ಪರಿಸರ ಅಧ್ಯಯನವನ್ನು ವಿದ್ಯಾರ್ಥಿ ಕಲಿಯಬೇಕಾಗುತ್ತದೆ. ಗ್ರೂಪ್-4 ನಲ್ಲಿ ಇxಣಡಿಚಿ ಚಿಟಿಜ ಅo-ಛಿuಡಿಡಿiಛಿuಟಚಿಡಿ ಚಿಛಿಣiviಣies ಇದರಲ್ಲಿ ಪಠ್ಯ ಚಟುವಟಿಕೆಯನ್ನು ಬಿಟ್ಟು ಪಠೇತರ ಚಟುವಟಿಕೆಗಳಾದ ಓSS/ ಓಅಅ /ಖoತಿeಡಿs&amdiv;ಖಚಿಟಿgeಡಿs /ಖeಜ ಅಡಿoss /Sಠಿoಡಿಣs/ಅuಟಣuಡಿಚಿಟ ಯಾವುದಾದರೂ ಒಂದನ್ನು ಆಯ್ಕೆಮಾಡಿಕೊಂಡು ಸಕ್ರಿಯವಾಗಿ ಭಾಗವಹಿಸಬೇಕಾಗುತ್ತದೆ. ಏಕೆಂದರೆ ಇದಕ್ಕೆ ವಿಶ್ವವಿದ್ಯಾನಿಲಯ 50 ಅಂಕಗಳನ್ನು ಮತ್ತು 2 ಕ್ರೆಡಿಟ್ ಅಂಕವನ್ನು ನೀಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಕಡ್ಡಾಯವಾಗಿ ಆಯ್ಕೆಮಾಡಿಕೊಂಡು ಹಾಜರಾಗಲೇ ಬೇಕಾಗುತ್ತದೆ. ಒಂದು ವೇಳೆ ಹಾಜರಾಗದಿದ್ದರೆ ಅಂಕಗಳನ್ನು ಕಳೆದುಕೊಳ್ಳ ಬೇಕಾಗುತ್ತದೆ.

ಒಔಔಅ ಮತ್ತು SWಂಙಂಒ: ಇದು ಆಯ್ಕೆ ಆಧಾರಿತ ಶಿಕ್ಷಣದಲ್ಲಿ ಇರುವ ಒಂದು ಹೊಸ ರೀತಿಯ ಅವಕಾಶ. ಇದರ ಮೂಲಕ ಆನ್‍ಲೈನ್‍ನಲ್ಲಿ ದಾಖಲಾತಿ ಪಡೆದು ಶಿಕ್ಷಣ ಪಡೆಯುವ ಪದ್ಧತಿ. ಈ ಪದ್ಧತಿಯಲ್ಲಿ ಯಾರು ಎಲ್ಲಿ ಬೇಕಾದರೂ ಶಿಕ್ಷಣ ಪಡೆಯಬಹುದು. ಇದಕ್ಕೆ ಆನ್‍ಲೈನ್‍ನಲ್ಲಿ ಪ್ರಮಾಣ ಪತ್ರ ಪಡೆಯಬಹುದು. ಅಲ್ಲದೆ ತಾವು ಬರೆದ ಪುಸ್ತಕವನ್ನು ಆನ್‍ಲೈನ್‍ನಲ್ಲಿ ದಾಖಲಿಸಬಹುದು. ಅದನ್ನು ಮತ್ತೊಬ್ಬರು ಓದಲು ಸಹಾಯವಾಗುವುದಲ್ಲದೆ ಶಿಕ್ಷಣವನ್ನು ಪಡೆಯಬಹುದು. ಒಔಔಅ ಎಂದರೆ ಒಚಿssive oಠಿeಟಿ ಔಟಿಟiಟಿe ಅouಡಿses ಎಂದು ಅರ್ಥ. SWಂಙಂಒ ಎಂದರೆ Sಣuಜಥಿ Web oಜಿ ಂಛಿಣive ಐeಚಿಡಿಟಿiಟಿg bಥಿ ಙouಟಿg ಚಿಟಿಜ ಂsಠಿiಡಿiಟಿg ಒiಟಿಜs ಎಂಬುವುದಾಗಿದೆ. ವಿದ್ಯಾರ್ಥಿಗಳು ಈ ಪದ್ಧತಿಯಲ್ಲಿ ಅತ್ಯಧಿಕ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ಅಲ್ಲದೆ ಹೆಚ್ಚಿನ ಅಂಕಪಡೆಯಲು ಮತ್ತು ಪ್ರಮಾಣ ಪತ್ರವನ್ನು ತಮ್ಮ ಶಿಕ್ಷಣದೊಂದಿಗೆ ಪಡೆಯಬಹುದಾಗಿದೆ. ಬಹುತೇಕ ಇದನ್ನು ತಮ್ಮ ತಮ್ಮ ಮೊಬೈಲ್‍ನಿಂದಲೇ ತಿಳಿಯಬಹುದು. ಅಧಿಕ ಮೊಬೈಲ್ ಬಳಕೆ ವಿದ್ಯಾರ್ಥಿಗಳು ಇದನ್ನು ಉಪಯೋಗಿಸಿಕೊಂಡು ಶಿಕ್ಷಣ ಪಡೆದರೆ ಹೆಚ್ಚಿನ ಅಂಕಗಳಿಸಲು ಸಾಧ್ಯವಾಗುತ್ತದೆ.

ಒಟ್ಟಿನಲ್ಲಿ ಆಯ್ಕೆ ಆಧಾರಿತ ಶಿಕ್ಷಣ ಪದ್ಧತಿ ಕಲಿಯುವ ಯುವಜನರಿಗೆ ಸ್ಫೂರ್ತಿಯನ್ನು ನೀಡಿದರೆ ಕಲಿಯುವ ಸೋಮಾರಿ ವಿದ್ಯಾರ್ಥಿಗಳಿಗೆ ಇದು ಬಲುಕಷ್ಟವಾಗಿದೆ. ಮೊಬೈಲ್ ಕಂಪ್ಯೂಟರ್ ಬಳಕೆ ಮಾಡುವ ವಿದ್ಯಾರ್ಥಿ ಗಳನ್ನು ಇತ್ತ ಕಡೆ ಗಮನಹರಿಸುವಂತೆ ಮಾಡಿ ಆಧುನಿಕ ಮಾದರಿಯಲ್ಲಿ ಶಿಕ್ಷಣವನ್ನು ಪಡೆಯುವಂತೆ ಈ ಪದ್ಧತಿಯನ್ನು ರೂಪಿಸಲಾಗಿದೆ. ಪ್ರಸ್ತುತ 2019-20ನೇ ಸಾಲಿನಿಂದ ಮಂಗಳೂರು ವಿಶ್ವವಿದ್ಯಾನಿಲಯ ಈ ಪದ್ಧತಿ ಯನ್ನು ಅಳವಡಿಸಿಕೊಂಡಿವೆ.

-ಮಂದೆಯಂಡ ವನಿತ್‍ಸಂಜು

ಉಪನ್ಯಾಸಕರು, ವೀರಾಜಪೇಟೆ