ಶ್ರೀಮಂಗಲ, ಡಿ. 26: ತಲಕಾವೇರಿಯಲ್ಲಿ ಕಾವೇರಿ ಮಾತೆಯ ತೀರ್ಥೊಧ್ಬವವನ್ನು ಕೊಡವರು ಭಕ್ತಿ ಭಾವದಿಂದ ನಂಬುವಂತೆ ನಮ್ಮ ಪೂರ್ವಜರು ವೈಜ್ಞಾನಿಕ ರೀತಿಯಲ್ಲಿ ರೂಪಿಸಿರುವ ಪದ್ಧತಿಗಳನ್ನು ನಂಬಿ ಅನುಸರಿಸಿಕೊಂಡು ಬಂದಿದ್ದು, ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಹೊಣೆಗಾರಿಕೆ ಇದೆ ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುನಿಲ್‍ಸುಬ್ರಮಣಿ ಅವರು ಪ್ರತಿಪಾದಿಸಿದರು.

ಕಾಕೋಟುಪರಂಬುವಿನಲ್ಲಿ ಯುನೈಟೆಡ್ ಕೊಡವ ಅರ್ಗನೈಸೇಷನ್ (ಯುಕೊ) ಸಂಘಟನೆಯ ಆಶ್ರಯದಲ್ಲಿ ಆಯೋಜಿಸಿದ 6ನೇ ವರ್ಷದ ಕೊಡವ ಮಂದ್ ನಮ್ಮೆ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಇಂತಹ ಕಾರ್ಯಕ್ರಮ ನಡೆಸುತ್ತ ಬರುವುದರಿಂದ ನಮ್ಮ ಪದ್ಧತಿ, ಸಂಸ್ಕøತಿ ಬಗ್ಗೆ ಕಿರಿಯರಲ್ಲಿ ಹೆಚ್ಚಿನ ಅಭಿಮಾನ ಮೂಡುವಂತಾಗುತ್ತದೆ ಎಂದು ಹೇಳಿದ ಅವರು ಕಳೆದ 6 ವರ್ಷಗಳಿಂದ ಮಂದ್ ನಮ್ಮೆ ಆಯೋಜಿಸುವ ಮೂಲಕ ಕೊಡವರ ಸಾಂಸ್ಕøತಿಕ ಹೆಗ್ಗುರುತ್ತಾದ ಮಂದ್‍ಗಳ ಬಗ್ಗೆ ಯುವ ಜನಾಂಗಕ್ಕೆ ಅದರ ಮಹತ್ವ ಸಾರುತ್ತಿರುವ ಯುಕೊ ಸಂಘಟನೆಯ ಪ್ರಯತ್ನವನ್ನು ಶ್ಲಾಘಿಸಿದರು.

ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಮಲ್ಲಮಾಡ ಶ್ಯಾಮಲಾ ನಿರ್ದೇಶನದ ಬೆಕ್ಕೆಸೂಡ್ಲೂರುವಿನ ಮಂದತ್ತವ್ವ ಟ್ರಸ್ಟ್‍ನ ತಂಡದಿಂದ ಪ್ರದರ್ಶನಗೊಂಡ “ಗೆಜ್ಜೆತಂಡ್” ನೃತ್ಯರೂಪಕವನ್ನು ಮೆಚ್ಚಿ ಸುನಿಲ್‍ಸುಬ್ರಮಣಿಯವರು ಸ್ಥಳದಲ್ಲಿಯೇ ರೂ. 10 ಸಾವಿರ ಪ್ರೋತ್ಸಾಹ ಧನವನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯುಕೊ ಸಂಚಾಲಕ ಕೊಕ್ಕಲೆಮಾಡ ಮಂಜುಚಿಣ್ಣಪ್ಪ ಅವರು ಕೊಡವಾಮೆ ಎಂದರೆ ಏನು ಎಂಬುದನ್ನು ಮೊದಲು ನಾವು ಅರ್ಥಮಾಡಿಕೊಳ್ಳಬೇಕು, “ಮಣ್ಣ್ ಮನಸ್ತಾನ, ಆಯಿಮೆ-ಕೊಯಿಮೆ, ಒಕ್ಕಾಮೆ-ತಕ್ಕಾಮೆ” ಈ ಮೂರು ಅಂಶಗಳು ಕೊಡವ ಸಾಮಾಜಿಕ, ಸಾಂಸ್ಕøತಿಕ ಹಾಗೂ ಧಾರ್ಮಿಕ ನೆಲೆಗಟ್ಟನ್ನು ಸೂಚಿಸುತ್ತದೆ.ಇದರ ಒಟ್ಟಾರೆ ಸಾರಾಂಶವೇ ಕೊಡವಾಮೆ ಎಂದು ವ್ಯಾಖ್ಯಾನಿಸಿದರು.

ಪ್ರತಿಯೊಂದು ಸಂಸ್ಕøತಿಗೂ ತನ್ನದೇ ಆದ ಹಿನ್ನೆಲೆ ಇರುತ್ತದೆ. ಮತ್ತೊಂದು ಜನಾಂಗವನ್ನು ಗೌರವಿಸುತ್ತಾ ತನ್ನ ಜನಾಂಗದ ಆಸ್ತಿತ್ವವನ್ನು ಉಳಿಸಿಕೊಳ್ಳುವುದು ಒಂದು ಗೌರವಯುತ ಸಮಾಜದ ಲಕ್ಷಣ ಎಂದು ಹೇಳಿದರು.

ವೈಯಕ್ತಿಕ ಹಾಗೂ ಸಾಮಾಜಿಕ ಹಾಗೂ ಆರ್ಥಿಕವಾಗಿ ಎಷ್ಟೇ ಸವಾಲುಗಳು ಎದುರಾದರೂ ಸಹ ಕೊಡವಾಮೆಯ ಕೆಲಸದಿಂದ ಯುಕೊ ಸಂಘಟನೆ ಹಿಂದೆ ಸರಿಯುವುದಿಲ್ಲ ಎಂದು ಅವರು ಹೇಳಿದರು.

ಈ ಸಂದರ್ಭ ನಡೆದ ವಿಚಾರಗೋಷ್ಠಿಯಲ್ಲಿ ಅಂತರಾಷ್ಟ್ರೀಯ ಅಥ್ಲಿಟ್ ತೀತಮಾಡ ಅರ್ಜುನ್‍ದೇವಯ್ಯ, ಅಪ್ಪನೆರವಂಡ ಸೋನಿಯಾಮಂದಪ್ಪ, ಉಳ್ಳಿಯಡ ಡಾಟಿಪೂವಯ್ಯ, ಕಂಬೆಯಂಡ ದೀನಾಬೋಜಮ್ಮ, ಮಾತಂಡ ಕಂಬುಉತ್ತಯ್ಯ, ಅಪ್ಪಚ್ಚೀರ ನಂದ, ಅರೆಯಡ ಪವಿನ್‍ಪೊನ್ನಣ್ಣ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಪತ್ರಕರ್ತ ಮಾಣಿಪಂಡ ಸಂತೋಷ್‍ತಮ್ಮಯ್ಯ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಕೊಡವರಲ್ಲಿ ಮೀಸೆ ಬಿಡುವ ಪದ್ಧತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆದ “ಕೊಂಬೊ ಮೀಸೆರ ಬಂಬೊ” ಪೈಪೋಟಿಯಲ್ಲಿ ಪುರುಷರು, ಯುವಕರು ತಮ್ಮ ಕೊಕ್ಕೆಮೀಸೆಯನ್ನು ತಿರುವುತ್ತ ವೇದಿಕೆಯಲ್ಲಿ ಹೆಜ್ಜೆ ಹಾಕಿದರು.

ಕಾರ್ಯಕ್ರಮದಲ್ಲಿ ಕಳ್ಳಿಚಂಡ ದೀನಾಉತ್ತಪ್ಪ, ತಡಿಯಂಗಡ ಗಾನ ಮತ್ತು ಕೇಲೇಟಿರ ಪವಿತ್ ನಿರ್ದೇಶನದಲ್ಲಿ ಆಯೋಜಿಸಿದ್ದ ಕೊಡವರ ಪದ್ಧತಿಗನುಸಾರವಾಗಿ ಇತಿಹಾಸದಿಂದ ನಡೆದುಕೊಂಡು ಬಂದ ಕೊಡವ ಸಾಂಪ್ರದಾಯಿಕ ಉಡುಪಿನ ಪೋಷಾಕುಗಳನ್ನು ರ್ಯಾಂಪ್ ವಾಕ್ ಮೂಲಕ ಪ್ರದರ್ಶಿಸಿ ಜನಮನ ಸೆಳೆದರು. ಇದೇ ಸಂದರ್ಭ ಕೊಡವ ಪದ್ಧತಿಯಲ್ಲಿ ಹಿಂದಿನ ಕಾಲದಲ್ಲಿ ಹುಲಿಯನ್ನು ಕೊಂದವರಿಗೆ ಮದುವೆ ಮಾಡುತ್ತಿದ್ದ ಪದ್ಧತಿಯನ್ನು (ನರಿಮಂಗಲ) ವೇದಿಕೆಯಲ್ಲಿ ನೃತ್ಯ ರೂಪಕವಾಗಿ ಪ್ರದರ್ಶನ ಮಾಡಲಾಯಿತು.

“ಕೊಂಬ ಮೀಸೆರ ಬಂಬೊ” ಪೈಪೋಟಿಯಲ್ಲಿ ಕಾಯಪಂಡ ಅಪ್ಪಣ್ಣ (ಪ್ರ), ಚೆಪ್ಪುಡೀರ ಸುಜುಕರುಂಬಯ್ಯ (ದ್ವಿ), ಕೊಂಗೇಟಿರ ಲೋಕೇಶ್ (ತೃ) ಸ್ಥಾನ ಪಡೆದರು.

“ಬೋಜಿ ಜಡೆರ ಬೋಜಕ್ಕ ಮತ್ತು ಬೋಜಿ ಜಡೆರ ಬೋಜಿ ಮೋವ” ಪೈಪೋಟಿಯಲ್ಲಿ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಗಮನ ಸೆಳೆದರು.

ಸಾಂಸ್ಕøತಿಕ ಪೈಪೋಟಿಯಲ್ಲಿ ವಿಜೇತ ತಂಡಗಳಿಗೆ ಮೂಲತಃ ಕಾಕೋಟುಪರಂಬು ನಿವಾಸಿ ಮೈಸೂರಿನಲ್ಲಿ ನೆಲೆಸಿರುವ ಕುಂಞÂರ ಮೋಹನ್‍ಮುತ್ತಪ್ಪ ಅವರು ಟ್ರೋಫಿ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯ ಟ್ರೋಫಿ ಹಾಗೂ ನಗದು ಬಹುಮಾನವನ್ನು ಪುರುಷರ ವಿಭಾಗಕ್ಕೆ ಬೊಳ್ಳುಮಾಡು ಗ್ರಾಮದ ಮಾತಂಡ ಕಂಬುಉತ್ತಯ್ಯ, ಮಹಿಳೆಯರ ವಿಭಾಗಕ್ಕೆ ಟಿ.ಶೆಟ್ಟಿಗೇರಿ ಗ್ರಾಮದ ಮಚ್ಚಮಾಡ ಸೋಮಯ್ಯ ಅವರ ಜ್ಞಾಪಕಾರ್ಥ ಪುತ್ರ ಅರುಣ್‍ಸೋಮಯ್ಯ, ಪರೆಯಕಳಿಗೆ ಕಾಕೋಟುಪರಂಬುವಿನ ಅಪ್ಪಚ್ಚಂಗಡ ಕುಟುಂಬ, ಬಾಳೋಪಾಟ್‍ಗೆ ಪೊರಾಡು ಗ್ರಾಮದ ಅಣ್ಣೀರ ಮಿಟ್ಟುಮಾದಪ್ಪ ಜ್ಞಾಪಕಾರ್ಥವಾಗಿ ಪತ್ನಿ ರಾಣಿಮಾದಪ್ಪ ಅವರ ಪ್ರಾಯೋಜಕತ್ವದಲ್ಲಿ ನೀಡಲಾಯಿತು.

ಮಕ್ಕಂದೂರಿನ ಉಮ್ಮೇಟಿ ಮಂದ್ “ಗಟ್ಟಿಮಂದ್” ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಟ್ರೋಫಿ ಹಾಗೂ ರೂ. 10 ಸಾವಿರ ನಗದು ಬಹುಮಾನವನ್ನು ಪಡೆಯಿತು.

ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಮಹಿಳೆಯರ ವಿಭಾಗದಲ್ಲಿ: ಕಳ್ಳಿಚಂಡ ತೇಜಲ್‍ತಂಗಮ್ಮ (ಪ್ರ), ಬಡುವಂಡ ತ್ರಿಶಾಲಿ (ದ್ವಿ), ಕಳ್ಳಿಚಂಡ ಡಿಂಪಲ್‍ನಾಚಪ್ಪ (ತೃ) ಸ್ಥಾನ ಪಡೆದರು.

ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ: ಕಳ್ಳಿಚಂಡ ಉತ್ತಪ್ಪ(ಪ್ರ), ಬಾಚಮಾಡ ಲವ(ದ್ವಿ), ಮಣವಟ್ಟಿರ ಪೊನ್ನು(ತೃ) ಸ್ಥಾನ ಪಡೆದರು.

ಕಪ್ಪೆಯಾಟ್ ಸ್ಪರ್ಧೆಯಲ್ಲಿ ನೆಲ್ಲಮಾಡ ಸಿದ್ಧಾರ್ಥ್‍ಕಾವೇರಪ್ಪ(ಪ್ರ), ಕರ್ತಮಾಡ ಅನುಪ್‍ಅಯ್ಯಪ್ಪ(ದ್ವಿ), ಮುಂಡಂಡ ಸೋಹನ್‍ಸೋಮಯ್ಯ(ತೃ) ಸ್ಥಾನ ಪಡೆದರು.

ಕೋಲಾಟ್ ಪೈಪೋಟಿಯಲ್ಲಿ ಬಲ್ಲತ್‍ನಾಡ್ ಪೇರೂರು ಗ್ರಾಮದ ಮಚ್ಚರೋಡೆ ಮಂದ್(ಪ್ರ), ಪೊನ್ನಂಪೇಟೆ ಕೊಡವ ಸಮಾಜ ವಾಡೆ ಮಂದ್(ದ್ವಿ), ಮಕ್ಕಂದೂರು ಗ್ರಾಮದ ಉಮ್ಮೇಟಿ ಮಂದ್(ತೃ) ಸ್ಥಾನ ಪಡೆದರು.

ಬೊಳಕಾಟ್ ಪೈಪೋಟಿಯಲ್ಲಿ ಮಕ್ಕಂದೂರು ಗ್ರಾಮದ ಉಮ್ಮೇಟಿ ಮಂದ್(ಪ್ರ), ಬಲ್ಲತ್‍ನಾಡ್ ಪೇರೂರು ಗ್ರಾಮದ ಮಚ್ಚರೋಡೆ ಮಂದ್(ದ್ವಿ), ಹುದಿಕೇರಿಯ ಮಡ್‍ಕೋಡ್ ಮಂದ್(ತೃ) ಸ್ಥಾನ ಪಡೆಯಿತು.

ಉಮ್ಮತ್ತಾಟ್ ಪೈಪೋಟಿಯಲ್ಲಿ ಮಡಿಕೇರಿ ಕೊಡವ ಸಮಾಜ ಮಂದ್(ಪ್ರ), ನಾಲ್‍ನಾಡ್ ನೆಲಜಿ ಮಂದ್(ದ್ವಿ), ನಾಪೋಕ್ಲು ಬೇತು ಮಂದ್(ತೃ) ಸ್ಥಾನ ಪಡೆದರು.

ಪರೆಯಕಳಿ ಮಕ್ಕಂದೂರು ಗ್ರಾಮದ ಉಮ್ಮೇಟಿ ಮಂದ್(ಪ್ರ), ಪೊನ್ನಂಪೇಟೆ ಕೊಡವ ಸಮಾಜ ವಾಡೆ ಮಂದ್(ದ್ವಿ), ಆರ್ಜಿ ಗ್ರಾಮದ ಬೋಟೋಳಿ ಮಂದ್(ತೃ) ಸ್ಥಾನ ಪಡೆದರು

ಬಾಳೋಪಾಟ್ ಬಲ್ಲತ್‍ನಾಡ್ ಪೇರೂರ್ ಗ್ರಾಮದ ಮಚ್ಚರೋಡೆ ಮಂದ್(ಪ್ರ), ಮಕ್ಕಂದೂರು ಗ್ರಾಮದ ಉಮ್ಮೇಟಿ ಮಂದ್(ದ್ವಿ), ಅರಮೇರಿ ಬೆಪ್ಪುನಾಡಿನ ಮಾದಪಟ್ಟಮಂದ್(ತೃ) ಸ್ಥಾನ ಪಡೆದರು.

ಸಮಾರೋಪ ಸಮಾರಂಭದಲ್ಲಿ ಜಿ.ಪಂ ಸದಸ್ಯ ಅಚ್ಚಪಂಡ ಮಹೇಶ್, ಪ್ರಮುಖರಾದ ಕಲ್ಯಾಟಂಡ ಡಾ.ಗೌತಮ್‍ಅಪ್ಪಣ್ಣ, ಪಲಾಂದಿರ ಶ್ಯಾಮ್‍ಸೋಮಣ್ಣ, ಕುಂಞÂರ ಮೋಹನ್‍ಮುತ್ತಪ್ಪ, ಕುಯ್ಮಂಡ ಕಾಳಯ್ಯ, ಮುಕ್ಕಾಟೀರ ವಿನಿತಾ, ದೇವತಕ್ಕ ಅಮ್ಮಂಡಿರ ಚೇತನ್, ಮೇವಡ ಚಿಣ್ಣಪ್ಪ, ಮೇವಡ ವಷ್ಮಕರುಂಬಯ್ಯ, ಕುಳಿಯಕಂಡ ಪೊನ್ನಪ್ಪ, ಕೂಳಂಡ ವಿನುಪೆಮ್ಮಯ್ಯ, ಮೂಳೇರ ಪ್ರತಾಪ್‍ಪೊನ್ನಪ್ಪ, ಮಂಡೇಟಿರ ಪೆಮ್ಮಯ್ಯ, ಮೇವಡ ಅಯ್ಯಣ್ಣ, ಬೇರೆರ ಮಿಥುನ್, ಮುಳ್ಳೇರ ಮಧು, ಮುಂಡಚಾಡಿರ ಭರತ್, ಮುಲ್ಲೇರ ಮಧು, ಬೇರೆರ ಮಿಥುನ್‍ಬೆಳ್ಯಪ್ಪ, ಮಂಡೇಟಿರ ಕಾಳಯ್ಯ, ಮಂಡೇಟಿರ ಅನಿಲ್, ಕುಯ್ಯಮಾಡ ಕಾಳಯ್ಯ, ಕಳ್ಳಿಚಂಡ ದಿನು, ಕುಪ್ಪಂಡ ತೇಜಸ್ವಿ, ಕೋಟೆರ ಪೂಣಚ್ಚ, ಸೋಮೆಯಂಡ ರೇಷ್ಮÀ, ಕಟ್ಟೇರ ಲವಿನ್ ಮತ್ತಿತರರು ಹಾಜರಿದ್ದರು.

- ಹರೀಶ್ ಮಾದಪ್ಪ