ಚೆಟ್ಟಳ್ಳಿ, ಡಿ. 26: ಚೆಟ್ಟಳ್ಳಿಯ ಜೋಮಾಲೆ ಪೊಮ್ಮಕ್ಕಡ ಕೂಟದ ವತಿಯಿಂದ ಚೆಟ್ಟಳ್ಳಿಯ ಮಂಗಳ ಸಭಾಂಗಣದಲ್ಲಿ ಪುತ್ತರಿ ನಮ್ಮೆ ಸಂತೋಷ ಕೂಟ ನಡೆಯಿತು. ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಮುಳ್ಳಂಡ ಶೋಭ ಚಂಗಪ್ಪ ದೀಪ ಬೆಳಗಿದರು.
ಕೂಟದ ಕಾರ್ಯದರ್ಶಿ ಐಚೆಟ್ಟಿರ ಸುನಿತ ಮಾಚಯ್ಯ ಕೂಟದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಹಿರಿಯರಾದ ನಿವೃತ್ತ ಏರ್‍ಫೋರ್ಸ್ ಅಧಿಕಾರಿ ಪುತ್ತರಿರ ಭೀಮಯ್ಯ, ನಿವೃತ್ತ ಕ್ಯಾಪ್ಟನ್ ಮುಳ್ಳಂಡ ತಿಮ್ಮಯ್ಯ ಮಾತನಾಡಿದರು. ಹಿರಿಯರಾದ ಪುತ್ತರಿರ ಸೀತಮ್ಮ ಮೊಣ್ಣಪ್ಪ, ಪುತ್ತರಿರ ಸುಜು ಬಿದ್ದಪ್ಪ, ಕೊಂಗೇಟಿರ ಕುಸುಮ ಪೊನ್ನಪ್ಪ, ಮುಳ್ಳಂಡ ಪಟ್ಟು ಮಾದಪ್ಪ, ಪುತ್ತರಿರ ಪ್ರೇಮ ಭೀಮಯ್ಯ, ಐಚೆಟ್ಟಿರ ಚೋಂದಮ್ಮ ಅಪ್ಪಯ್ಯ, ಕೊಂಗೇಟಿರ ದೇಚು ಮುದ್ದಯ್ಯ ಹಾಗೂ ಕೂಟದ ಸದಸ್ಯರು ಹಾಜರಿದ್ದರು.