ಸುಂಟಿಕೊಪ್ಪ, ಡಿ. 26: ಸುಂಟಿಕೊಪ್ಪದ ಶ್ರೀಪುರಂ ಅಯ್ಯಪ್ಪ ಕ್ಷೇತ್ರದ 49ನೇ ವಾರ್ಷಿಕ ಮಂಡಲಪೂಜೋತ್ಸವವು ತಾ.27 (ಇಂದು) ರಂದು ನಡೆಯಲಿದೆ.

ತಾ. 27 ರಂದು (ಇಂದು) ಪೂರ್ವಾಹ್ನ 6.45 ಗಂಟೆಗೆ ಗಣಪತಿಹೋಮ, 7.30 ಗಂಟೆಗೆ ಚಂಡೆಮೇಳ, 8 ಗಂಟೆಗೆ ಗಣಪತಿ ಹೋಮ, 9 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಗೆ ಪಂಚಾಮೃತಾಭಿಷೇಕ, ಅಪರಾಹ್ನ ಅಯ್ಯಪ್ಪ ಸ್ವಾಮಿಗೆ 12 ಗಂಟೆಗೆ ಶ್ರೀ ಅಯ್ಯಪ್ಪಸ್ವಾಮಿಗೆ ಮಧ್ಯಾಹ್ನದ ಪೂಜೆ,12.30 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಗೆ ಲಕ್ಷಾರ್ಚನೆ,ಪಲ್ಲಪೂಜೆ, 12.45 ಗಂಟೆಗೆ ಪಟಾಕಿ ಪ್ರದರ್ಶನ, ಅಪರಾಹ್ನ 1 ಯಿಂದ 4. ಗಂಟೆಯವರೆಗೆ ಅನ್ನಸಂತರ್ಪಣೆ ಹಾಗೂ ದಿನದ ಅಂಗವಾಗಿ ವಿಶೇಷ ಪೂಜೆ ಬಿಲ್ವಪತ್ರೆ ಅರ್ಚನೆ, ತುಳಸಿ ಆರ್ಚನೆ, ಪಂಚಾಮೃತ ಅಭಿಷೇಕ ನಡೆಯಲಿದೆ.

ಅಪರಾಹ್ನ 1 ಗಂಟೆಯಿಂದ 4 ಗಂಟೆಯವರೆಗೆ ಅನ್ನ ಸಂತರ್ಪಣೆ, ಸಂಜೆ 6 ಗಂಟೆಗೆ ವಿದ್ಯುತ್ ದೀಪಾಲಂಕೃತವಾದ ಭವ್ಯ ಮಂಟಪದಲ್ಲಿ ನಿಲಾಂಜನ ದೀಪ ಹಿಡಿದು ಚಂಡೆ ಮೇಳದೊಂದಿಗೆ ವಿಜೃಂಭಣೆಯಿಂದ ಶ್ರೀ ಅಯ್ಯಪ್ಪ ಸಾಮಿಯ ಉತ್ಸವ ಮೂರ್ತಿಯನ್ನು ನಗರದ ಮುಖ್ಯ ಬೀದಿಗಳಲ್ಲಿ ಕೊಂಡೊಯ್ಯಲಾಗುವುದು ಎಂದು ದೇವಾಲಯ. ಆಡಳಿತ ಮಂಡಳಿ ಅಧ್ಯಕ್ಷ ಎಂ.ಟಿ. ಧನುಕಾವೇರಪ್ಪ ಪ್ರಧಾನ ಕಾರ್ಯದರ್ಶಿ ಸುರೇಶ್‍ಗೋಪಿ ತಿಳಿಸಿದ್ದಾರೆ.