ಗೋಣಿಕೊಪ್ಪಲು, ಡಿ.26: ಪೊನ್ನಂಪೇಟೆಯ ಪ್ರಶಾಂತಿ ನಿಲಯದ ಸಾಯಿ ಶಂಕರ್ ವಿದ್ಯಾಸಂಸ್ಥೆ ವತಿಯಿಂದ ತಾ.28ರ ಸಂಜೆ 4 ಗಂಟೆಗೆ ಸಾಯಿ ಕಲಾಮಂಚ್‍ನಲ್ಲಿ ಜ್ಯೋತಿ ಪ್ರಧಾನ್ ಕಾರ್ಯಕ್ರಮ ನಡೆಯಲಿದೆ. ಸಂಸ್ಥೆಯ ಅಧ್ಯಕ್ಷ ಕೋಳೆರ ಝರು ಗಣಪತಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್‍ನ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ, ಮಡಿಕೇರಿಯ ಕಾಫಿ ಬೆಳೆಗಾರ ನಡಿಕೇರಿಯಂಡ ಚಿಣ್ಣಪ್ಪ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.