ಗೋಣಿಕೊಪ್ಪ ವರದಿ, ಡಿ. 26 : ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಬೊಟ್ಯತ್ನಾಡ್ ಸ್ಪೋಟ್ರ್ಸ್ ಅಸೋಸಿಯೇಷನ್ ಹಾಗೂ ಹಾಕಿಕೂರ್ಗ್ ಸಹಯೋಗದಲ್ಲಿ ಆರಂಭಗೊಂಡಿರುವ ಬೊಟ್ಯತ್ನಾಡ್ ಹಾಕಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯಗಳು ತಾ. 27 ರಂದು (ಇಂದು) ನಡೆಯಲಿದೆ.

ಎ. ಡಿವಿಜನ್ ಹಾಕಿ ಲೀಗ್‍ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಆತಿಥೇಯ ಬೊಟ್ಯತ್ನಾಡ್, ರನ್ನರ್ ಅಪ್ ಸ್ಥಾನ ಪಡೆದ ನಾಪೋಕ್ಲು ಶಿವಾಜಿ ತಂಡ ಸೇರಿದಂತೆ 8 ತಂಡಗಳು ಸೆಣೆಸಾಟ ನಡೆಸಲಿವೆ.