ಸುಂಟಿಕೊಪ್ಪ: “ನೀವು ಚೆನ್ನಾಗಿದ್ದರೆ ದೇಶ ಚೆನ್ನಾಗಿರುತ್ತದೆ” ನಿಮ್ಮಿಂದ ಇನ್ನೊಬ್ಬರಿಗೆ ಹಿಂಸೆಯಾಗದಂತೆ ಬದುಕಿದರೆ; ನೀವು ದೇಶಕ್ಕೆ ಕೊಡುವ ಅತ್ಯಮೂಲ್ಯ ಕಾಣಿಕೆಯಾಗಲಿದೆ ಎಂದು ಅಂಕಣಕಾರ ಭಾರಧ್ವಾಜ ಕೆ.ಆನಂದತೀರ್ಥ ಹೇಳಿದರು.ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ನೀರು, ಮಣ್ಣು, ಗಾಳಿ ಮನುಷ್ಯನ ಬದುಕಿಗೆ ಅನಿವಾರ್ಯವಾಗಿದೆ ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವೈ.ಎಂ.ಕರುಂಬಯ್ಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಸುಂಟಿಕೊಪ್ಪ ಠಾಣಾಧಿಕಾರಿ ಬಿ. ತಿಮ್ಮಪ್ಪ ಪರೀಕ್ಷೆಗೆ ಇಂದಿನಿಂದಲೇ ತಯಾರಿ ನೆಡಸಿಕೊಳ್ಳಬೇಕು ಎಂದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪಿ.ಎಸ್. ಜಾನ್ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ರೋಸ್‍ಮೇರಿ ರಾಡ್ರಿಗಸ್, ತಾಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಲಾವತಿ, ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಕೆ. ಬಾಲಕೃಷ್ಣ ಮಾತನಾಡಿದರು.

ವೇದಿಕೆಯಲ್ಲಿ ಪ್ರೋಬೆಷನರಿ ಎಸ್.ಐ. ಶ್ರೀನಿವಾಸ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಗೀತಾ, ಕಾಲೇಜು ಅಭಿವೃದ್ಧಿ ಸಮಿತಿ ಖಜಾಂಚಿ ರಮೇಶ್ ಪಿಳ್ಳೈ, ಸದಸ್ಯರಾದ ಸತ್ಯಕುಮಾರ್, ಗ್ರಾ.ಪಂ. ಸದಸ್ಯೆ ಪಟ್ಟೆಮನೆ ಗಿರಿಜಾ ಉದಯಕುಮಾರ್, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್, ಸುಂಟಿಕೊಪ್ಪ ಸಂಸ್ಥೆಯ ಜಾಹೀದ್, ರಂಜೀತ್, ಜೆಸಿಐ ನಿಕಟಪೂರ್ವ ಅಧ್ಯಕ್ಷ ಅರುಣ್‍ಕುಮಾರ್, ಉಪನ್ಯಾಸಕರುಗಳಾದ ಪಿಲಿಫ್‍ವಾಸ್, ಈಶ, ಸೋಮಚಂದ್ರ ಮತ್ತಿತರರು ಇದ್ದರು.

ದ್ವಿತೀಯ ಪಿಯುಸಿಯಲ್ಲಿ ಭಾಷಾವಾರು ವಿಭಾಗದಲ್ಲಿ ಶೇ. 100 ಫಲಿತಾಂಶ ತಂದ ಕಾಲೇಜಿನ ಉಪನ್ಯಾಸಕರುಗಳಾದ ಸೋಮಚಂದ್ರ, ಕವಿತಾ, ಮಂಜುಳ, ಸುಕನ್ಯಾ, ಈಶ, ವಿದ್ಯಾರ್ಥಿ ಅನೀಶ್ ಅವರುಗಳನ್ನು ಗೌರವಿಸಲಾಯಿತು.

ಗೋಣಿಕೊಪ್ಪ ವರದಿ: ಗೋಣಿಕೊಪ್ಪ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಯೋಜಿಸಿದ್ದ ಚಿಗುರು ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ನೂರಾರು ಯುವ ಕಲಾವಿದರು ಪಾಲ್ಗೊಂಡು ಕಲೆ ಅನಾವರಣ ಗೊಳಿಸಿದರು.

ಸ್ಥಳೀಯ ವಿದ್ಯಾರ್ಥಿಗಳು ಸೇರಿದಂತೆ ಮೈಸೂರು, ಹುಣಸೂರು ಭಾಗದ ಯುವ ಕಲಾವಿದರುಗಳು ಸುಗಮ ಸಂಗೀತ, ಜಾನಪದ ಗೀತೆ, ಕೊಳಲು ವಾದನ, ಶಾಸ್ತ್ರೀಯ ಸಂಗೀತ, ಕೋಲಾಟ, ಜಾನಪದ ನೃತ್ಯ, ಸಮೂಹ ನೃತ್ಯ, ಭರತನಾಟ್ಯ, ಹಾಡುಗಾರಿಕೆ ಮತ್ತು ಚಿತ್ರಕಲೆ ಪ್ರದರ್ಶನ ನೀಡಿದರು.

ವಿಜಯ ಸೂರ್ಯ ಅವರಿಂದ ಕೊಳಲು ವಾದನ, ಶ್ರೀ ದುರ್ಗ ನೃತ್ಯ ಮಂಡಳಿ ತಂಡದಿಂದ ಶಾಸ್ತ್ರೀಯ ಸಂಗೀತ, ರುಚಿತಾ ರಾಜೇಶ್ ತಂಡದ ಸುಗಮ ಸಂಗೀತ, ನಯನಾ ನಾಗರಾಜ್ ತಂಡದ ಜನಪದ ಗೀತೆ, ವೈಷ್ಣವಿ ತಂಡದ ಶಾಸ್ತ್ರೀಯ ನೃತ್ಯ, ಸ್ಥಳೀಯ ವಿದ್ಯಾರ್ಥಿಗಳ ಸಮೂಹ ನೃತ್ಯ ಗಮನ ಸೆಳೆಯಿತು.

ಟಿ.ವಿ.ಯಲ್ಲಿ ಹಲವು ಸಂಗೀತ ಕಾರ್ಯಕ್ರಮ ನೀಡಿರುವ ಹಾಡುಗಾರರಾದ ನಯನಾ ನಾಗರಾಜ್, ರುಚಿತಾ ಅವರುಗಳು ಹಾಡಿನ ಮೂಲಕ ಮನಸೆಳೆದರು. ನಾಡಗೀತೆ ಮೂಲಕ ಆರಂಭಗೊಂಡ ಕಾರ್ಯಕ್ರಮದಲ್ಲಿ ಹಾಡುಗಳು ಹೆಚ್ಚು ಗಮನ ಸೆಳೆಯಿತು.

ಉದ್ಘಾಟನೆ : ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಕೆ.ಆರ್. ಶಾಂತಿ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಟಿ. ದರ್ಶನ, ಶಾಲಾ ಮುಖ್ಯಶಿಕ್ಷಕಿ ಕೆ.ಆರ್. ಶಶಿಕಲಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರ. ಕಾರ್ಯದರ್ಶಿ ಟಿ.ಡಿ. ರಮಾನಂದ, ಸರ್ಕಾರಿ ನೌಕರರ ಸಂಘದ ರಾಜ್ಯ ನಿರ್ದೇಶಕ ಎ.ವಿ. ಮಂಜುನಾಥ್, ಸಮೂಹ ಸಂಪನ್ಮೂಲ ವ್ಯಕ್ತಿ ಹೆಚ್.ಹೆಚ್. ಜ್ಯೋತೀಶ್ವರಿ, ಕಲಾವಿದ ಬಿ.ಆರ್. ಸತೀಶ್, ಆಟೋ ಚಾಲಕರ ಸಂಘದ ಅಧ್ಯಕ್ಷ ಜಪ್ಪು ಸುಬ್ಬಯ್ಯ ಉಪಸ್ಥಿತರಿದ್ದರು.

ಕುಶಾಲನಗರ: ಕುಶಾಲನಗರದ ಮಹಾತ್ಮಾಗಾಂಧಿ ಪದವಿ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಎಂಜಿಎಂ ಕಪ್-2019 ವಾಲಿಬಾಲ್ ಪಂದ್ಯಾಟದÀಲ್ಲಿ ಗೋಣಿಕೊಪ್ಪದ ಕಾವೇರಿ ಕಾಲೇಜು ತಂಡ ಪ್ರಥಮ ಹುಣಸೂರಿನ ಟ್ಯಾಲೆಂಟ್ಸ್ ಕಾಲೇಜು ತಂಡ ದ್ವಿತೀಯ ಸ್ಥಾನ ಗಳಿಸಿದೆ. ಒಟ್ಟು 20 ತಂಡಗಳು ಪಾಲ್ಗೊಂಡಿದ್ದವು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ನಗದು ಮತ್ತು ಆಕರ್ಷಕ ಟ್ರೋಪಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕ್ರೀಡಾ ಕ್ಷೇತ್ರ ಸಾಧಕರಾದ ರಾಷ್ಟ್ರೀಯ ಕಬ್ಬಡಿ ಆಟಗಾರ ಅವಿನಾಶ್, ರಾಷ್ಟ್ರೀಯ ಹ್ಯಾಂಡ್ ಬಾಲ್ ಆಟಗಾರ ಗ್ರೀನಿಜ್ ಡಿ ಕುನ್ನ, ರಾಜ್ಯ ವಾಲಿಬಾಲ್ ತಂಡ ಮಾಜಿ ಆಟಗಾರ ಉಲ್ಲಾಸ್ ಕೃಷ್ಣ, ರಾಷ್ಟ್ರೀಯ ಚೆಕ್ ಪಟು ಹಾಗೂ ಕಾಲೇಜಿನ ವಿದ್ಯಾರ್ಥಿನಿ ಪ್ರಿಯಾಂಕ ನಾರಾಯಣ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭ ಕಾಲೇಜು ಪ್ರಾಂಶುಪಾಲ ನಾಗೇಶ್ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ವಿವೇಕಾನಂದ ಎಜ್ಯುಕೇಷನ್ ಟ್ರಸ್ಟ್ ಅಧ್ಯಕ್ಷ ಎನ್.ಎನ್. ಶಂಭುಲಿಂಗಪ್ಪ, ಕುಶಾಲನಗರ ರೋಟರಿ ಅಧ್ಯಕ್ಷ ಎಂ.ಡಿ. ಅಶೋಕ್, ಉದ್ಯಮಿ ಭಾಷಾ, ನವೀನ್, ಕಾಲೇಜಿನ ಪ್ರಮುಖರಾದ ಮಹೇಶ್ ಅಮೀನ್ ಮತ್ತು ಉಪನ್ಯಾಸಕ ವೃಂದದವರು ಇದ್ದರು.

ಸೋಮವಾರಪೇಟೆ: ಮಕ್ಕಳ ಸಹಾಯವಾಣಿ ಕೇಂದ್ರದ ವತಿಯಿಂದ ತಾಲೂಕಿನ ಕೊಡ್ಲಿಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛ ಭಾರತ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಸಭಾ ಕಾರ್ಯಕ್ರಮವನ್ನು ಶನಿವಾರಸಂತೆ ಪೊಲೀಸ್ ಠಾಣೆಯ ಎಎಸ್‍ಐ ಈರಪ್ಪ ಅವರು ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಬಿ.ಎ. ಉಷಾ ಅವರು, ವಿದ್ಯಾರ್ಥಿಗಳು ಅನುಸರಿಸಬೇಕಾದ ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡಿದರು. ಮಕ್ಕಳ ಸಹಾಯವಾಣಿ ಕೇಂದ್ರದ ಬಿ.ಕೆ. ಕುಮಾರಿ ಅವರು, ಸ್ವಚ್ಛಭಾರತ್ ಅಭಿಯಾನದ ಬಗ್ಗೆ ತಿಳಿಸಿದರು. ಈ ಸಂದರ್ಭ ಕೇಂದ್ರದ ಸಿಬ್ಬಂದಿ ಎ.ಎಸ್. ಯೋಗೇಶ್, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.ಗೋಣಿಕೊಪ್ಪ ವರದಿ: ಕಿರುಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆಯೋಜಿಸಿರುವ ಏಳು ದಿನಗಳ ವಿಶೇಷ ಶಿಬಿರವನ್ನು ಕಿರುಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ. ಎಂ. ಬೋಜಿ ಉದ್ಘಾಟಿಸಿದರು.

ಕಾಲೇಜು ಪ್ರಾಂಶುಪಾಲ ಪ್ರೊ. ಕೆ. ವಿ. ಕುಸುಮಾಧರ್ ಧ್ವಜಾರೊಹಣ ನೆರವೇರಿಸಿದರು. ಕಾವೇರಿ ಎಜುಕೇಷನ್ ಸೊಸೈಟಿ ಉಪಾಧ್ಯಕ್ಷ ಮೂಕಳಮಾಡ ಮೊಣ್ಣಪ್ಪ ಮಾತನಾಡಿ, ಸಮಯಪ್ರಜ್ಞೆ, ಸಾಮಾಜಿಕ ಕಳಕಳಿ ಮೈಗೂಡಿಸಿಕೊಳ್ಳಲು ಎನ್‍ಎಸ್‍ಎಸ್ ಸಹಕಾರಿಯಾಗುತ್ತಿದೆ ಎಂದು ಸಲಹೆ ನೀಡಿದರು.

ಈ ಸಂದರ್ಭ ಕಿರುಗೂರು ಗ್ರಾ.ಪಂ. ಸದಸ್ಯರಾದ ಪಿ.ಎಸ್. ಮಂಜುನಾಥ್, ಆಲೆಮಾಡ ಸುಧೀರ್, ಮುಖ್ಯಶಿಕ್ಷಕಿ ಸಿ. ರಾಜಮ್ಮ, ಬೆಳೆಗಾರರಾದ ಕೋದೇಂಗಡ ಸುಬ್ರಮಣಿ, ತೀತರಮಾಡ ಗಿರೀಶ್, ಕೊಕ್ಕೇಂಗಡ ರೀಟಾ ಪೂಣಚ್ಚ, ಎನ್‍ಎಸ್‍ಎಸ್ ಯೋಜನಾಧಿಕಾರಿಗಳಾದ ವಿನೀತ್‍ಕುಮಾರ್, ಮಚ್ಚಮಾಡ ರೀತಾ ಉಪಸ್ಥಿತರಿದ್ದರು. ಸಂಜೆ ಆಯೋಜಿಸಿದ್ದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ನಾಟ್ಯ ಸಂಕಲ್ಪ ತಂಡ ಮತ್ತು ನವೀನ್ ಕಿರುಗೂರ್ ತಂಡದಿಂದ ಹಾಡುಗಾರಿಕೆ ಮೂಡಿ ಬಂತು.

ಸ್ವಚ್ಛತಾ ಕಾರ್ಯಕ್ರಮವನ್ನು ತಾ.ಪಂ. ಸದಸ್ಯೆ ಬಿ.ಕೆ. ಸುಮಾ ಉದ್ಘಾಟಿಸಿದರು. ಸ್ಥಳೀಯ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಹೆಚ್.ಎಂ. ಡಿಕ್ಕಿ ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿದರು.

ಕುಶಾಲನಗರ: ಜೀವನದ ಮೌಲ್ಯ ಕಲಿಸುವ ಶಿಕ್ಷಣದ ಅಗತ್ಯ ಇದೆ ಎಂದು ಕೂಡಿಗೆ ಸರಕಾರಿ ಪಿ.ಯು. ಕಾಲೇಜು ಪ್ರಾಂಶುಪಾಲ ಮಹಾಲಿಂಗಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದ ಕನ್ನಡ ಭಾರತಿ ಪದವಿಪೂರ್ವ ಕಾಲೇಜು ಮತ್ತು ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸಕ್ತ ಅಂಕಗಳಿಸುವ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಮಾರುಹೋಗುತ್ತಿರುವುದು ಸರಿಯಲ್ಲ ಎಂದರು.

ಕಾಲೇಜು ಕಾರ್ಯದರ್ಶಿ ಬಿ. ರಾಮಕೃಷ್ಣಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಸಿಎಂ ಇಲಾಖೆ ತಾಲೂಕು ವಿಸ್ತರಣಾಧಿಕಾರಿ ಶ್ರೀಕಾಂತ್, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿರಬೇಕು ಎಂದರು.

ಪಿ.ಯು. ಕಾಲೇಜು ಪ್ರಾಂಶುಪಾಲ ಎಸ್.ಟಿ. ಪುರುಷೋತ್ತಮ್ ವಾರ್ಷಿಕ ವರದಿ ವಾಚಿಸುವುದರೊಂದಿಗೆ ಕಾಲೇಜಿನ ಶೈಕ್ಷಣಿಕ ಪ್ರಗತಿ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಫಾತಿಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜೆಫ್ರಿ ಡಿಸಿಲ್ವ, ಕನ್ನಡ ಭಾರತಿ ಪದವಿ ಕಾಲೇಜು ಪ್ರಾಂಶುಪಾಲ ಎನ್. ರುದ್ರಾಚಾರ್ ಇದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

ಚೆಟ್ಟಳ್ಳಿ: ಚೆಟ್ಟಳ್ಳಿ ಪ್ರೌಢಶಾಲೆಯ ವಾರ್ಷಿಕೋತ್ಸವಕ್ಕೆ ಯುವ ಕಾರ್ಯಕರ್ತ ತೇಲಪಂಡ ಶಿವಕುಮಾರ್ ಕ್ರೀಡಾಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

ವಿದ್ಯಾರ್ಥಿಗಳು ತಮಗೆ ಶಿಕ್ಷಣ ನೀಡಿದ ಶಾಲೆ ಹಾಗೂ ಶಿಕ್ಷಕರನ್ನು ಎಂದಿಗೂ ಮರೆಯಬಾರದು ಎಂದು ಕಿವಿಮಾತು ಹೇಳಿದರು. ಶಾಲಾ ವಿದ್ಯಾರ್ಥಿಗಳಿಗೆ ಯೋಗಾಸನ, ಸಾಮೂಹಿಕ ನೃತ್ಯ, ಕ್ರೀಡಾಕೂಟ ಹಾಗೂ ಸಾರ್ವಜನಿಕರಿಗೆ ಹಗ್ಗಜಗ್ಗಾಟ, ಸ್ಲೋ ಸೈಕಲ್, ಬೈಕ್ ಹಾಗೂ ವಿವಿಧ ಸ್ಪರ್ಧೆಗಳು ನಡೆಯಿತು.

ವಾರ್ಷಿಕೋತ್ಸವದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಡಿಕೇರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪಿ. ಲಕ್ಷ್ಮಿ ಪಾಲ್ಗೊಂಡರು. ವಿದ್ಯೆಯಿಂದ ಮಾತ್ರ ನಮಗೆ ಜಗತ್ತಿನ ಎಲ್ಲವನ್ನೂ ಪಡೆಯಲು ಸಾಧ್ಯ ಎಂದು ಮನಶಾಸ್ತ್ರಜ್ಞೆ ಶಿಲ್ಪ ಮುತ್ತಮ್ಮ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತಿಗೆ ಒತ್ತು ನೀಡಬೇಕು ಎಂದರು.

ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪೇರಿಯನ ಪಿ. ಜಯಾನಂದ ವಹಿಸಿದ್ದರು. ಎಸ್.ಎಸ್.ಎಲ್.ಸಿ. ಹಾಗೂ 8, 9ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಶಾಲಾ ಆಡಳಿತ ಮಂಡಳಿಯ ಸಂಚಾಲಕ ಮುಳ್ಳಂಡ ರತ್ತು ಚಂಗಪ್ಪ, ಉಪಾಧ್ಯಕ್ಷ ದಿಲೀಪ್ ಅಪ್ಪಚ್ಚು, ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಜಿ.ಸಿ. ಸತ್ಯನಾರಾಯಣ, ಶಿಕ್ಷಕರಾದ ತಿಲಕ, ಸುನಂದಾ, ಮನೋಜ್, ಫಸೀಲ, ನಾಚಪ್ಪ, ನೂತನ ಇದ್ದರು.

ಗುಮ್ಮನಕೊಲ್ಲಿ: ಕುಶಾಲನಗರ ಸಮೀಪದ ಗುಮ್ಮನಕೊಲ್ಲಿ ಸರಕಾರಿ ಶಾಲೆಯಲ್ಲಿ ಫಿಟ್ ಇಂಡಿಯಾ ಸಪ್ತಾಹ ಕಾರ್ಯಕ್ರಮದ ಪ್ರಯುಕ್ತ ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು. ಕುಶಾಲನಗರ ಸರಕಾರಿ ಶಾಲೆಯಲ್ಲಿ ಕೂಡ ಸಪ್ತಾಹ ಕಾರ್ಯಕ್ರಮದ ಪ್ರಯುಕ್ತ ರಸಪ್ರಶ್ನೆಯನ್ನು ಏರ್ಪಡಿಸಲಾಗಿತ್ತು.ನಾಪೆÇೀಕ್ಲು: ಸತತ ಪರಿಶ್ರಮ, ನಂಬಿಕೆ, ವಿಶ್ವಾಸದಿಂದ ಮಾತ್ರ ಸಾಧನೆ ಸಾಧ್ಯ ಎಂದು ಮೂರ್ನಾಡು ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಾಪೆÇೀಕ್ಲು ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಸಮಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಯಾವ ಕೆಲಸವಾದರೂ ಶ್ರದ್ಧೆಯಿಂದ, ಪ್ರೀತಿಯಿಂದ, ಆಸಕ್ತಿಯಿಂದ ಮಾಡಬೇಕು. ನನ್ನಿಂದ ಸಾಧ್ಯವಿಲ್ಲ ಎಂಬದನ್ನು ಮನಸ್ಸಿನಿಂದ ಕಿತ್ತೊಗೆಯಬೇಕು ಆಗ ಎಲ್ಲವೂ ಸಾಧ್ಯ ವಾಗುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಬೊಪ್ಪಂಡ ಡಾ. ಜಾಲಿ ಬೋಪಯ್ಯ ವಹಿಸಿದ್ದರು. ಕ್ರೀಡಾ ಮತ್ತು ಸಾಂಸ್ಕøತಿಕ ವರದಿಯನ್ನು ಶಾಲಾ ನಾಯಕಿ ತಾನ್ಯ ಅಯ್ಯಪ್ಪ, ಶಾಲಾ ವರದಿಯನ್ನು ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಎಂ.ಬಿ. ಶಾರದ ವಾಚಿಸಿದರು.

ಈ ಸಂದರ್ಭ ಕಳೆದ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ಮತ್ತು ಪ್ರಸ್ತುತ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಸಂಜೆ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಆಯೋಜಿಸಲಾಗಿತ್ತು.

ವೇದಿಕೆಯಲ್ಲಿ ನಬಾರ್ಡ್ ಸಂಸ್ಥೆಯ ಜಿಲ್ಲಾಧಿಕಾರಿ ಮುಂಡಂಡ ಸಿ. ನಾಣಯ್ಯ, ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ಕಾರ್ಯದರ್ಶಿ ಬಿದ್ದಾಟಂಡ ಪಾಪ ಮುದ್ದಯ್ಯ, ನಿವೃತ್ತ ಪಾಂಶುಪಾಲ ಕಲ್ಯಾಟಂಡ ಪ್ರೊ. ಪೂಣಚ್ಚ, ಎಲ್ಲಾ ನಿರ್ದೇಶಕರು ಇದ್ದರು.

ವಿದ್ಯಾರ್ಥಿನಿಯರಿಂದ ಪ್ರಾರ್ಥನೆ, ಶಿಕ್ಷಕಿ ಮುಂಡಂಡ ಕವಿತಾ ಸ್ವಾಗತಿಸಿ. ಪಾಡಿಯಮ್ಮಂಡ ಚಂದ್ರಕಲಾ ಮತ್ತು ಮೂವೇರ ಡಿಂಪಲ್ ನಿರೂಪಿಸಿ, ಬೊಳ್ಳಚೆಟ್ಟಿರ ಶೋಭಾ ವಂದಿಸಿದರು.

ಸುಂಟಿಕೊಪ್ಪ: ವಿದ್ಯಾರ್ಥಿಗಳ ಜೀವನ ತಪಸ್ಸು ಇದ್ದಂತೆ. ಶ್ರದ್ಧೆಯಿಂದ ಕಲಿಕೆ ಕಡೆಗೆ ಗಮನ ಹರಿಸಿದರೆ ವಿದ್ಯಾರ್ಥಿಗಳ ಜೀವನ ಪಾವನವಾಗಲಿದೆ ಎಂದು ಕೂಡಿಗೆ ಡಯಟ್‍ನ ಹಿರಿಯ ಉಪನ್ಯಾಸಕ ಕೆ.ಎಸ್. ಶಿವಕುಮಾರ್ ಹೇಳಿದರು.

ಸುಂಟಿಕೊಪ್ಪ ನಾಡು ಪ್ರೌಢಶಾಲೆ ಕೊಡಗರಹಳ್ಳಿಯ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಬದುಕನ್ನು ದುರುಪಯೋಗ ಪಡಿಸದೆ ಅದನ್ನು ಸಕಾರಗೊಳಿಸಲು ಶ್ರಮಿಸಿದರೆ ಮುಂದೆ ಸುಂದರ ಬದುಕನ್ನು ಕಟ್ಟಿಕೊಳ್ಳಬಹುದು ಎಂದರು.

ಅತ್ತೂರು ಎಸ್ಟೇಟ್ ಮಾಲೀಕ ದಾನಿ ಜಗನ್ನಾಥ ಶೆಣೈ ನೂತನ ರಂಗಮಂದಿರ ಹಾಗೂ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ವಿದ್ಯೆ, ಕಲೆ, ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಪ್ರತಿಭೆಯನ್ನು ಹೊರಹೊಮ್ಮಿಸಿ ಸತ್ಪ್ರಜೆಯಾಗಿ ಮುಂದೆ ಬರಬೇಕು ಎಂದು ಹೇಳಿದರು.

ಈ ಶಾಲೆಯ ಹಳೆಯ ವಿದ್ಯಾರ್ಥಿ ಪಶು ವೈದ್ಯ ಡಾ. ಅಕ್ಕಪಂಡ ಬಿ. ತಮ್ಮಯ್ಯ ಮಾತನಾಡಿ, ಶಿಕ್ಷಕರ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ವಿದ್ಯೆಯಲ್ಲಿ ತೊಡಗಿಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಎಸ್. ಮಂಜುನಾಥ್ ಮಾತನಾಡಿ, ಶಾಲೆಯ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಅಗತ್ಯವಾಗಿದೆ ಎಂದರು. ಸಮಾರಂಭದ ವೇದಿಕೆಯಲ್ಲಿ ಹರೀಶ್ ಪೈ, ರವಿ ಶೆಣೈ, ಕುಸುಮ ಜಗನ್ನಾಥ್ ಶೆಣೈ ಇದ್ದರು. ಶಾಲಾ ವಾರ್ಷಿಕೋತ್ಸವ ಅಂಗವಾಗಿ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಸಲಾಯಿತು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಶಾಲಾ ಮುಖ್ಯೋಪಾಧ್ಯಾಯಿನಿ ಕೆ.ಎಸ್. ಇಂದಿರಾ ಸ್ವಾಗತಿಸಿ, ವರದಿ ವಾಚಿಸಿ, ಗುರ್ಕಿ ನಿರೂಪಿಸಿ, ಶೋಭಾ ದಾಸ್ ವಂದಿಸಿದರು.

*ಗೋಣಿಕೊಪ್ಪಲು: ನೃತ್ಯ, ಹಾಡು, ನಾಟಕ, ಕ್ರೀಡೆ, ಭಾಷಣ, ಪ್ರಬಂಧ ಸ್ಪರ್ಧೆ ಮೊದಲಾದ ಚಟುವಟಿಕೆಗಳ ಮೂಲಕ ಪೊನ್ನಪ್ಪಸಂತೆ ಎಂಸಿಎಸ್ ಪ್ರೌಢಶಾಲೆ ವಿದ್ಯಾರ್ಥಿಗಳು ಸಂಭ್ರಮಿಸಿದರು.

ಶಾಲೆಯಲ್ಲಿ ನಡೆದ ಪೋಷಕರ ದಿನಾಚರಣೆ ಹಾಗೂ ಕ್ರೀಡಾ ವಾರ್ಷಿಕೋತ್ಸವದಲ್ಲಿ ಜಾನಪದ ಗೀತೆ, ಕೋಲಾಟ, ಚಲನಚಿತ್ರ ಗೀತೆ, ಎರವರ ಕುಣಿತ, ಕೊಡವ ಗೀತೆಗಳ ನೃತ್ಯ ಮನ ತಣಿಸಿತು. ವಿದ್ಯಾರ್ಥಿಗಳ ಪೋಷಕರಿಗೆ ವಿವಿಧ ಕ್ರೀಡಾ ಚಟುವಟಿಕೆ ನಡೆಸಲಾಯಿತು. ವಿಜೇತರಿಗೆ ಬಹುಮಾನ ನೀಡಲಾಯಿತು.

ಸಭಾ ಕಾರ್ಯಕ್ರಮವನ್ನು ಬಾಳೆಲೆ ವಿಜಯಲಕ್ಷ್ಮಿ ಪಿ.ಯು. ಕಾಲೇಜು ಪ್ರಾಂಶುಪಾಲ ಡಾ. ಜೆ. ಸೋಮಣ್ಣ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪುಚ್ಚಿಮಾಡ ಲಾಲಾ ಪೂಣಚ್ಚ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯ ಗಣೇಶ್ ತಿಮ್ಮಯ್ಯ, ಪಾರುವಂಗಡ ಉತ್ತಪ್ಪ, ಪುಳ್ಳಂಗಡ ನಟೇಶ್, ಕೆ.ವಿ. ರಾಮಚಂದ್ರ, ಪಿ.ಬಿ. ಕಾವೇರಿ, ಎಸ್.ಸಿ. ತಿಮ್ಮಯ್ಯ, ಸಿ.ಪಿ. ಮಾಚಯ್ಯ, ಕೆ.ಬಿ. ಕರುಂಬಯ್ಯ, ಅಬ್ದುಲ್ ರಶೀದ್, ಮುಖ್ಯ ಶಿಕ್ಷಕಿ ಸಿ.ಎಂ. ರಾಧಾ ಹಾಜರಿದ್ದರು.ಮಡಿಕೇರಿ: ಶಾಲೆ ಕಾಲೇಜುಗಳೆಂದರೆ ಅಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾನ್ಯತೆ ಇರುತ್ತದೆ ಹಾಗೂ ಆಯೋಜನೆಗೊಳ್ಳುವ ಕಾರ್ಯಕ್ರಮಗಳೆಲ್ಲವು ಇವರನ್ನು ಕೇಂದ್ರಿಕರಿಸಿ ಸಂಘಟಿಸಲಾಗಿರುತ್ತದೆ. ಆದರೆ ತಾ.21 ರಂದು ವೀರಾಜಪೇಟೆಯ ಕಾವೇರಿ ಪದವಿಪೂರ್ವ ಮತ್ತು ಪದವಿ ಕಾಲೇಜಿನಲ್ಲಿ ವಿಭಿನ್ನವಾಗಿ ಕಾಲೇಜಿನ ವಿದ್ಯಾರ್ಥಿಗಳ ಪೋಷಕರಿಗೆ ಪೋಷಕರ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಪ್ರತಿ ದಿನವು ತಮ್ಮ ಮಕ್ಕಳ ಭವಿಷ್ಯ ಹಾಗೂ ಅವರಿಗೆ ಉತ್ತಮವಾದ ಜೀವನವನ್ನು ಕಟ್ಟಿಕೊಳ್ಳುವಲ್ಲಿ ಕಾರ್ಯನಿರತರಾಗಿರುವ ಪೋಷಕರಿಗೆ ದಣಿವಾರಿಸಿಕೊಳ್ಳಲು ಮತ್ತು ತಮ್ಮ ದೈನಂದಿನ ಚಟುವಟಿಕೆಗಳಿಂದ ವಿಶ್ರಾಂತಿ ದೊರಕಿಸಿಕೊಡುವ ಸಲುವಾಗಿ ಕಾವೇರಿ ಕಾಲೇಜು ಪೋಷಕರಿಗೆ ಕೆಲವೊಂದು ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕಾವೇರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಚಿರಿಯಪಂಡ ಉತ್ತಪ್ಪ ಹಾಗೂ ನಿರ್ದೇಶಕ ಪ್ರೊ. ಇಟ್ಟಿರ ಬಿದ್ದಪ್ಪ, ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎ.ಎಂ. ಕಮಲಾಕ್ಷಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ. ನಾಣಯ್ಯ, ಪೋಷಕ ಬೋಧಕ ಸಂಘದ ಸಂಚಾಲಕ, ಇತಿಹಾಸ ವಿಭಾಗದ ಉಪನ್ಯಾಸಕ ಕಾವೇರಿ ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ನಖಿಯಾಬಾನು, ಪೋಷಕ ಬೋಧಕ ಸಂಘದ ಉಪಾಧ್ಯಕ್ಷ ಪಿ.ಬಿ. ಮಾದಪ್ಪ, ಕಾರ್ಯದರ್ಶಿ ಧನಿಶೇಖರ್ ವೇದಿಕೆಯಲ್ಲಿ ಆಸೀನರಾಗಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಉತ್ತಪ್ಪ, ಶಿಕ್ಷಣವು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುವುದರೊಂದಿಗೆ ಸಾಧನೆ ಮಾಡಲು ಮತ್ತು ಜೀವನ ಕಟ್ಟಿಕೊಳ್ಳಲು ಅಡಿಪಾಯವನ್ನು ನಿರ್ಮಿಸುತ್ತದೆ ಎಂದು ಹೇಳಿದರು. ಪ್ರೊ. ಬಿದ್ದಪ್ಪನವರು ತಮ್ಮ ಭಾಷಣದಲ್ಲಿ ಒಂದು ವಿದ್ಯಾಸಂಸ್ಥೆ ಹಾಗೂ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಪೋಷಕರ ಕೊಡುಗೆಯು ಅತ್ಯಂತ ಪ್ರಮುಖ ಎಂದು ಹೇಳಿದರು.

ಬಾಂಬ್ ಇನ್ ದ ಸಿಟಿ ಪುರುಷರ ವಿಭಾಗದಲ್ಲಿ ಮೊಣ್ಣಪ್ಪ ಪ್ರಥಮ ಸ್ಥಾನ, ಧನುಶೇಖರ್ ದ್ವಿತೀಯ ಸ್ಥಾನ, ಜೀವನ್ ತೃತೀಯ ಸ್ಥಾನ ಪಡೆದುಕೊಂಡರು. ಮಹಿಳೆಯರ ವಿಭಾಗದಲ್ಲಿ ಗೀತಾ ಪ್ರಥಮ ಸ್ಥಾನ, ಚೋಂದಮ್ಮ ದ್ವಿತೀಯ ಸ್ಥಾನ, ಶಶಿ ತೃತೀಯ ಸ್ಥಾನ ಪಡೆದುಕೊಂಡರು.

ಪಾಸಿಂಗ್ ಬಾಲ್ ಪುರುಷರ ವಿಭಾಗದಲ್ಲಿ ಪ್ರಕಾಶ್ ಪ್ರಥಮ ಸ್ಥಾನ, ಮಾದಪ್ಪ ದ್ವಿತೀಯ ಸ್ಥಾನ, ದೀಪಕ್ ತೃತೀಯ ಸ್ಥಾನ ಪಡೆದುಕೊಂಡರು. ಮಹಿಳೆಯರ ವಿಭಾಗದಲ್ಲಿ ಪೊನ್ನಮ್ಮ ಪ್ರಥಮ ಸ್ಥಾನ, ಲಿಲ್ಲಿ ದೀಪಕ್ ದ್ವಿತೀಯ ಸ್ಥಾನ, ಲಲಿತಾ ತೃತೀಯ ಸ್ಥಾನ ಪಡೆದುಕೊಂಡರು.

ವಾಲಗತಾಟ್ ಪುರುಷರ ವಿಭಾಗದಲ್ಲಿ ಕಾಶಿ ಪ್ರಥಮ ಸ್ಥಾನ, ಮಾದಪ್ಪ ದ್ವಿತೀಯ ಸ್ಥಾನ, ದೀಪಕ್ ತೃತೀಯ ಸ್ಥಾನ ಪಡೆದುಕೊಂಡರು. ಮಹಿಳೆಯರ ವಿಭಾಗದಲ್ಲಿ ಪೊನ್ನಮ್ಮ ಪ್ರಥಮ ಸ್ಥಾನ, ಕಾವೇರಮ್ಮ ದ್ವಿತೀಯ ಸ್ಥಾನ, ವೀಣಾ ತೃತೀಯ ಸ್ಥಾನ ಪಡೆದುಕೊಂಡರು.

ಕೂಡಿಗೆ: ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ವಾರ್ಷಿಕೋತ್ಸವ ಮತ್ತು ಸಮಾಜೋತ್ಸವ ಕಾರ್ಯಕ್ರಮ ನಡೆಸುವುದರಿಂದ ವಿದ್ಯಾರ್ಥ�?