ಮಡಿಕೇರಿ, ಡಿ. 24 : ಶ್ರೀ ಚೌಡೇಶ್ವರಿ ಗೌಡ ಕೂಟದ 8ನೇ ವಾರ್ಷಿಕ ಸಭೆ ಮತ್ತು ಸಂತೋಷ ಕೂಟ ತಾ.25 ರಂದು (ಇಂದು) ಬೆಳಿಗ್ಗೆ 9:30 ಕ್ಕೆ ಇಲ್ಲಿನ ಗೌಡ ವಿದ್ಯಾಸಂಘದ ಸಭಾಂಗಣದಲ್ಲಿ ನಡೆಯಲಿದ್ದು, ಅಧ್ಯಕ್ಷತೆಯನ್ನು ಚೌಡೇಶ್ವರಿ ಗೌಡ ಕೂಟದ ಅಧ್ಯಕ್ಷ ಕುದುಪಜೆ ಎಸ್. ಆನಂದ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆ ಭಾಗವಹಿಸಲಿದ್ದಾರೆ.