ಮಡಿಕೇರಿ, ಡಿ. 25: ಕೊಡಗು ಜಿಲ್ಲೆಯ ಪ್ರಮುಖ ಚರ್ಚ್‍ಗಳು ಸೇರಿದಂತೆ; ನಾಡಿನ ಹಲವೆಡೆಗಳಲ್ಲಿ ಇಂದು ಕ್ರೈಸ್ತ ಬಾಂಧವರು ಕ್ರಿಸ್‍ಮಸ್ ಆಚರಣೆಯೊಂದಿಗೆ ಸಂಭ್ರಮಪಟ್ಟರು. ಜಿಲ್ಲಾ ಕೇಂದ್ರ ಮಡಿಕೇರಿಯ ಸಂತಮೈಕಲರ ಚರ್ಚ್, ಸಿಎಸ್‍ಐ ಚರ್ಚ್ ಹಾಗೂ ವೀರಾಜಪೇಟೆ ಸಂತ ಅಂತೋಣಿ ಚರ್ಚ್ ಮತ್ತಿತರ ಕಡೆಗಳಲ್ಲಿ ಮಧ್ಯರಾತ್ರಿಯಿಂದಲೇ ಕ್ರಿಸ್‍ಮಸ್ ಸಂಭ್ರಮ ಕಂಡು ಬಂತು.ಪ್ರಾರ್ಥನಾ ಮಂದಿರ ಅಂತೋಣಿ ಚರ್ಚ್ ಮತ್ತಿತರ ಕಡೆಗಳಲ್ಲಿ ಮಧ್ಯರಾತ್ರಿಯಿಂದಲೇ ಕ್ರಿಸ್‍ಮಸ್ ಸಂಭ್ರಮ ಕಂಡು ಬಂತು.ಪ್ರಾರ್ಥನಾ ಮಂದಿರ ಸಡಗರ ಹಂಚಿಕೊಂಡರು. ಈ ಹಗಲು ನಾಡಿನ ಅನೇಕ ಕಡೆಗಳಲ್ಲಿ ಸಮಾಜ ಬಾಂಧವರು ಪ್ರಾರ್ಥನಾ ಮಂದಿರಗಳಗೆ ಆಗಮಿಸಿ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮಡಿಕೇರಿಯ ಸಂತ ಮೈಕಲರ ಚರ್ಚ್‍ನಲ್ಲಿಂದು ಸಂಜೆ ಕ್ರಿಸ್‍ಮಸ್ ಟ್ರೀ ಆಚರಣೆ ಯೊಂದಿಗೆ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮಗಳು, ಕ್ರಿಸ್‍ಮಸ್ ತಾತ (ಸಂತ ಕ್ಲಾಸ್) ಪುಟಾಣಿ ಮಕ್ಕಳೊಂದಿಗೆ ಅಡಿ ನಲಿದರು. ಬಳಿಕ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕೇಕ್ ಹಂಚಿ ಸಂಭ್ರಮಿಸಲಾಯಿತು.ದಕ್ಷಿಣ ಕೊಡಗಿನ ಕುಟ್ಟ, ಪೊನ್ನಂಪೇಟೆ, ಗೋಣಿಕೊಪ್ಪಲು, ವೀರಾಜಪೇಟೆ, ದೇವರಪುರ, ಪಾಲಿಬೆಟ್ಟ, ಸಿದ್ದಾಪುರ, ಸುಂಟಿಕೊಪ್ಪ, ಹೆಗ್ಗಳ, ಕುಶಾಲನಗರ, ಸೋಮವಾರ ಪೇಟೆ, ಕೊಡ್ಲಿಪೇಟೆ, ಶನಿವಾರಸಂತೆ, ಮಾದಾಪುರ ಮುಂತಾದೆಡೆಗಳಲ್ಲಿ ಕ್ರೈಸ್ತರು ವಿಶೇಷ ಪೂಜೆ, ಪ್ರಾರ್ಥನೆ ಗಳಲ್ಲಿ ಪಾಲ್ಗೊಂಡು ಧರ್ಮಗುರು ಗಳಿಂದ ಉಪದೇಶ ಪಡೆದ ಬಗ್ಗೆ ವರದಿಗಳು ಲಭಿಸಿವೆ.(ಮೊದಲ ಪುಟದಿಂದ) ಕೂಡಿಗೆ : ಕೂಡಿಗೆಯ ಪವಿತ್ರ ಕುಟುಂಬ ದೇವಾಲಯದಲ್ಲಿ ಕ್ರಿಸ್ಮಸ್ ಹಬ್ಬದ ಅಂಗವಾಗಿ ಮಧ್ಯರಾತ್ರಿಯಲ್ಲಿ ಬಾಲಏಸುವಿನ ಪೂಜೆಯೊಂದಿಗೆ ವಿಶೇಷ ಪ್ರಾರ್ಥನೆ ನಡೆಯಿತು. ಕೂಡಿಗೆಯ ಹೋಲಿ ಫ್ಯಾಮಿಲಿ ಚರ್ಚ್‍ನ ಧರ್ಮಗುರು ಜಾನ್ ಡಿ ಕುನ್ನಾ ಕ್ರಿಸ್ಮಸ್ ಹಬ್ಬವು ಉತ್ತಮ ಸಂದೇಶವನ್ನು ಸಾರುವ ಹಬ್ಬ ಆಚರಣೆಯಾಗಿದೆ ಎಂದರು.
ಶನಿವಾರಸಂತೆ: ಸಮೀಪದ ಗೋಪಾಲಪುರ ಗ್ರಾಮದ ಸಂತ ಅಂತೋಣಿ ಚರ್ಚ್‍ನಲ್ಲಿ ಕ್ರೈಸ್ತ ಸಮುದಾಯದವರು ಕ್ರಿಸ್‍ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಚರ್ಚ್ ಅನ್ನು ಸುಣ್ಣಬಣ್ಣಗಳಿಂದ ಅಂದಗೊಳಿಸಿದ್ದು, ನಕ್ಷತ್ರ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಚರ್ಚ್‍ನ ಆವರಣದಲ್ಲಿ ಸುಂದರ ಗೋದಲಿ ನಿರ್ಮಿಸಿದ್ದು; ಮಾತೆ ಮೇರಿ ಹಾಗೂ ಬಾಲ ಏಸುವಿನ ಗೊಂಬೆಗಳನ್ನು ಸ್ಥಾಪಿಸಲಾಗಿದೆ.
ಮಂಗಳವಾರ ರಾತ್ರಿ ದನದ ಕೊಟ್ಟಿಗೆಯ ಮಾದರಿಯಲ್ಲಿ ಏಸುವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಚರ್ಚ್‍ನ ಸಭಾಂಗಣದಲ್ಲಿ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ಬಾದಾಮಿ ತೀರ್ಥವನ್ನು ವಿತರಿಸಲಾಯಿತು. ಕೇಕ್ ಕತ್ತರಿಸಿ ಹಂಚಿ ಸಂಭ್ರಮಿಸಿದರು.
ಬುಧವಾರ ಬೆಳಿಗ್ಗೆ ಹಬ್ಬದ ಪ್ರಯುಕ್ತ ಧರ್ಮಗುರುಗಳಾದ ಪಾಧರ್ ಜೇಕಬ್ ಕೊಣನೂರ್ ಹಾಗೂ ಫಾದರ್ ರಾಹುಲ್ ಡೇವಿಡ್ ಸಗಾಯ್ ರಾಜ್ ಅವರು ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಗೋಪಾಲಪುರ, ಶನಿವಾರಸಂತೆ, ಕೊಡ್ಲಿಪೇಟೆ, ಜಾಗೇನಹಳ್ಳಿ ಸುತ್ತಮುತ್ತಲಿನ ಗ್ರಾಮಗಳಿಂದ ಬಂದ ಕ್ರೈಸ್ತ ಸಮುದಾಯದವರು ಪೂಜೆ ಹಾಗೂ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ಮನೆಗಳಲ್ಲಿ ಕೇಕ್ ಕತ್ತರಿಸಿ, ತಿಂಡಿ ತಿನಿಸುಗಳೊಂದಿಗೆ ವಿಶೇಷ ಭಕ್ಯಗಳನ್ನು ತಯಾರಿಸಿ ಸಹಭೋಜನ ಸವಿದರು. ಕ್ರಿಸ್‍ಮಸ್ ಹಬ್ಬವನ್ನು ಸಾಮೂಹಿಕವಾಗಿ ಆಚರಿಸಿ ಸಂಭ್ರಮಿಸಿದರು.
ವೀರಾಜಪೇಟೆ: ಎರಡು ಶತಮಾನಗಳಿಗೂ ಅಧಿಕ ಇತಿಹಾಸವಿರುವ ವೀರಾಜಪೇಟೆಯ, ಪುರಾತನವಾದ ಸಂತ ಅನ್ನಮ್ಮ ದೇವಾಲಯದಲ್ಲಿ ಕ್ರಿಸ್‍ಮಸ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಕ್ರಿಸ್‍ಮಸ್ ಪ್ರಯುಕ್ತ ನಿನ್ನೆ ರಾತ್ರಿ 11ಗಂಟೆಗೆ ಕ್ರೈಸ್ತ ಬಾಂಧವರು ಸಂತ ಅನ್ನಮ್ಮ ದೇವಾಲಯದಲ್ಲಿ ಸಾಮೂಹಿಕವಾಗಿ ಸಾಂಪ್ರದಾಯಿಕ ಪ್ರಾರ್ಥನೆ ಸಲ್ಲಿಸಿದ ನಂತರ ವಿಧಿ ವಿದಾನಗಳಂತೆ ಬಲಿಪೂಜೆ ನೆರವೇರಿತು.
ಮಧ್ಯರಾತ್ರಿ ಹನ್ನೆರಡು ಗಂಟೆಗೆ ಯೇಸುವಿನ ಜನನ, ಬಾಲ ಯೇಸು ಧರೆಗೆ ಬಂದಂತೆ ದೇವಾಲಯದ ಪ್ರಧಾನ ಧರ್ಮಗುರು ರೆ.ಫಾ:ಮದಲೈಮುತ್ತು ಯೇಸುವಿನ ಜನನವನ್ನು ಸಾರುವ ಮೂಲಕ ಗೋದಲಿಯಲ್ಲಿ ಬಾಲ ಯೇಸುವನ್ನು ಮಲಗಿಸಿ ಪೂಜೆ ಸಲ್ಲಿಸಿದರು. ಅಲ್ಲಿಯೇ ಇದ್ದ ಕ್ರೈಸ್ತಬಾಂಧವರು ಕೇಕ್‍ನ್ನು ಹಂಚಿ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಸಂತ ಅನ್ನಮ್ಮ ದೇವಾಲಯದ ವಿದ್ಯುತ್ ದೀಪಾಲಂಕಾರ ಹಾಗೂ ಕ್ರಿಸ್‍ಮಸ್ ಹಬ್ಬದ ಆಚರಣೆಯನ್ನು ವೀಕ್ಷಿಸಲು ವಿವಿಧ ಸಮುದಾಯದವರು ಸಂತ ಅನ್ನಮ್ಮ ದೇವಾಲಯದಲ್ಲಿ ಪಾಲ್ಗೊಂಡಿದ್ದರು.
ಸುಂಟಿಕೊಪ್ಪ : ಇಲ್ಲಿನ ಸಂತ ಅಂತೋಣಿ ದೇವಾಲಯದಲ್ಲಿ ಕ್ರಿಸ್ ಮಸ್ ಹಬ್ಬವನ್ನು ಬಹು ಸಡಗರದಿಂದ ಆಚರಿಸಲಾಯಿತು. ಸಂತ ಅಂತೋಣಿ ದೇವಾಲಯವನ್ನು ವಿದ್ಯುತ್ ಅಲಂಕಾರ ಮತ್ತು ಬಣ್ಣ ಬಣ್ಣದ ನಕ್ಷತ್ರಗಳಿಂದ ಅಲಂಕರಿಸಿ ಸುಂಟಿಕೊಪ್ಪ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ನೂರಾರು ಕ್ರೈಸ್ತ ಬಾಂಧವರು ಸಂತ ಅಂತೋಣಿ ದೇವಾಲಯದಲ್ಲಿ ಸೇರುವುದರ ಮೂಲಕ ಪ್ರಾರ್ಥನೆ ಸಲ್ಲಿಸಿದರು. ಚರ್ಚ್‍ನ ಧರ್ಮಗುರು ಎಡ್ವಾರ್ಡ್ ವಿಲಿಯಂ ಸಾಲ್ದಾನಾ ಅವರು; ದಿವ್ಯ ಬಲಿ ಪೂಜೆ ನಡೆಸಿದರು. ಮದ್ಯರಾತ್ರಿ ವೇಳೆಯಲ್ಲಿ ಚರ್ಚ್‍ನ ಆವರಣದಲ್ಲಿ ನಿರ್ಮಿಸಲಾದ ಗೋದಲಿಯಲ್ಲಿ ಬಾಲ ಯೇಸುವಿನ ಮೂರ್ತಿಯನ್ನು ಮಲಗಿಸಿ; ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ದೇವಾಲಯದ ಧರ್ಮಗುರುಗಳು ಭಕ್ತರಿಗೆ ಯೇಸುವಿನ ಜನನ ವಿಚಾರಧಾರೆಗಳನ್ನು ಬೋದಿಸಿದ ನಂvರ ಎಲ್ಲರೂ ಶಾಂತಿ ನೆಮ್ಮದಿಯಿಂದ ಜೀವನ ಸಾಗಿಸುವಂತೆ ಕರೆ ನೀಡಿದರು. ಕ್ರಿಸ್ಮಸ್ ಹಬ್ಬದ ಪ್ರಯುಕ್ತ ನಾನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಸೋಮವಾರಪೇಟೆ: ಪಟ್ಟಣ ಸೇರಿದಂತೆ ಸುತ್ತಮುತ್ತ ಕ್ರಿಶ್ಚಿಯನ್ ಬಾಂಧವರು, ಕ್ರಿಸ್‍ಮಸ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ಪಟ್ಟಣದಲ್ಲಿರುವ ಜಯವೀರಮಾತೆ ಚರ್ಚ್‍ನಲ್ಲಿ ಕ್ರಿಸ್‍ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಮಂಗಳವಾರ ರಾತ್ರಿ ಮತ್ತು ಬುಧವಾರ ಸಂಭ್ರಮ ಸಡಗರದಿಂದ ಆಚರಿಸಿದರು. ಚರ್ಚ್ ಮುಂಭಾಗದಲ್ಲಿ ನಿರ್ಮಿಸಿರುವ ಗೋದಲಿಯಲ್ಲಿ ಬಾಲ ಏಸುವಿನ ಮೂರ್ತಿಯನ್ನು ಇಟ್ಟು ಪೂಜಿಸಲಾಯಿತು. ಹಬ್ಬದ ಅಂಗವಾಗಿ ಚರ್ಚ್‍ನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ರಾತ್ರಿ ಸಾಮೂಹಿಕ ಪೂಜೆ ನಡೆಯಿತು. ಮನೆಗಳಲ್ಲಿ ವಿಶೇಷ ನಕ್ಷತ್ರ ಹಾಗೂ ಗೋದಲಿ ನಿರ್ಮಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಧರ್ಮಗುರುಗಳಾದ ಎಂ. ರಾಯಪ್ಪ, ಅಂತೋಣಿ ರಾಜ್, ಜೆ. ಬ್ಯಾಪ್ಟಿಸ್ಟ್ ಸನ್ನಿ, ಸಿಸ್ಟರ್ ಮಮತ, ಚರ್ಚ್ ಆಡಳಿತ ಮಂಡಳಿ ಉಪಾಧ್ಯಕ್ಷ ಮಾರ್ಷಲ್ ಲೋಬೋ, ಕಾರ್ಯದರ್ಶಿ ಶೀಲಾ ಡಿಸೋಜ ಮತ್ತಿತರರು ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಇದರೊಂದಿಗೆ ಪಟ್ಟಣ ಸಮೀಪದ ಅಬ್ಬೂರುಕಟ್ಟೆ ಚರ್ಚ್ ನಲ್ಲೂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಸಿದ್ದಾಪುರ: ಸಂತ ಜೋಸೆಫರ ಚರ್ಚ್‍ನಲ್ಲಿ ಕ್ರಿಸ್‍ಮಸ್ ಹಬ್ಬವನ್ನು ಚರ್ಚ್‍ನ ಧರ್ಮ ಗುರುಗಳಾದ ಫಾ. ಜೋನಸ್ ನೇತೃತ್ವದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಚರ್ಚ್‍ನ ಆವರಣದಲ್ಲಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.