ಕುಶಾಲನಗರ, ಡಿ. 25: ದುಬಾರೆ ಪ್ರವಾಸಿಧಾಮದಲ್ಲಿ ನಿಲ್ಲಿಸಿದ್ದ ಜೀಪು ನದಿಗೆ ಇಳಿದ ಪರಿಣಾಮ ಜಲಕ್ರೀಡೆಯಲ್ಲಿ ತೊಡಗಿದ್ದ ಪ್ರವಾಸಿ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಕೊಡಗರಹಳ್ಳಿಯ ನೌಶಾದ್ ಎಂಬವರು ಕುಟುಂಬ ಸಮೇತರಾಗಿ ದುಬಾರೆಗೆ ಬೊಲೆರೋ ಜೀಪಿನಲ್ಲಿ ಆಗಮಿಸಿದ್ದರು. ನದಿ ದಂಡೆಯಲ್ಲಿ ಲ್ಲಿಸಿದ್ದ ಬೊಲೇರೋ ಜೀಪಿನೊಳಗೆ ಆಟವಾಡುತ್ತಿದ್ದ ಪುಟ್ಟ ಮಗು ಜೀಪನ್ನು ಚಾಲು ಮಾಡಿದ ಸಂದರ್ಭ ಜೀಪು ನಿಲ್ಲಿಸಿದ್ದ ಸ್ಥಳದಿಂದ ಚಲಿಸಿ ನದಿಯತ್ತ ರಭಸವಾಗಿ ನುಗ್ಗಿದೆ. ಪರಿಣಾಮ ನದಿಯೊಳಗಿದ್ದ ತಮಿಳುನಾಡು ಮೂಲಕ ಪ್ರವಾಸಿ ಮಹಿಳೆ ಮೇಲೆ ಜೀಪು ಹರಿದಿದೆ.
ಘಟನೆಯಲ್ಲಿ ಮಾರಾಣಾಂತಿಕವಾಗಿ ಗಾಯಗೊಂಡ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ. ಘಟನೆಯಲ್ಲಿ ಜೀಪಿನೊಳಗಿದ್ದ ವೃದ್ಧೆ ಹಾಗೂ ಮಗು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.