ಮಡಿಕೇರಿ, ಡಿ. 23: ಕ್ಯಾಂಪಸ್ ಫ್ರಂಟ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಮಡಿಕೇರಿಯ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ಎನ್.ಆರ್.ಸಿ. ಹಾಗೂ ಸಿ.ಎ.ಎ. ವಿರೋಧಿಸಿ ಪ್ರತಿಭಟನೆ ನಡೆಯಿತು.ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ಕೊಡಗು ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ದೇಶದಲ್ಲಿ ಯುವ ಜನತೆ,ವಿದ್ಯಾರ್ಥಿಗಳು ಸಿ.ಎ.ಎ. ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ಕೇಂದ್ರ ಸರ್ಕಾರ ಮಾತ್ರ ಪ್ರತಿಭಟನಾಕಾರರ ಮನವಿಗೆ ಸ್ಪಂದಿಸದೆ ಹೋರಾಟಗಾರರ ಮೇಲೆ ಲಾಠಿ,ಗೋಲಿಬಾರ್ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.(ಮೊದಲ ಪುಟದಿಂದ) ಕ್ಯಾಂಪಸ್ ಫ್ರಂಟ್ ಮಾಜಿ ಜಿಲ್ಲಾಧ್ಯP À ತೈಸೀರ್ ಮಾತನಾಡಿ, ಸಿ.ಎ.ಎ, ಹಾಗೂ ಎನ್.ಆರ್.ಸಿ, ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ, ಜಾತಿ-ಧರ್ಮ ವಿಭಜಿಸಿ ಪೌರತ್ವ ನೀಡುವುದು ಸಂವಿಧಾನ ಭಾಹಿರ ಎಂದು ಅಭಿಪ್ರಾಯ ಪಟ್ಟ ಅವರು ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಾವಶ್ಯಕ ಎಂದರು

ಈ ಸಂದರ್ಭ ಕ್ಯಾಂಪಸ್ ಫ್ರಂಟ್ ಕೊಡಗು ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ, ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.