ಮಾನ್ಯರೆ, ಮೂರ್ನಾಡಿನಿಂದ 4 ಕಿ.ಮೀ. ಅಂತರದಲ್ಲಿ ಪಾರಾಣೆ, ವೀರಾಜಪೇಟೆ ರಸ್ತೆಯಲ್ಲಿ ಬಲಮುರಿ ಗ್ರಾಮದ ಚಿಕ್ಕಸೇತುವೆಯಿಂದ 2 ಕಿ.ಮೀ.ವರೆಗೆ ರಸ್ತೆಗಳು ತುಂಬಾ ಹಾಳಾಗಿದ್ದು, ಗುಂಡಿಗಳಿಂದ ಕೂಡಿದೆ.

ಚಿಕ್ಕ ಸೇತುವೆಯಿಂದ ಮುಂದಕ್ಕೆ ಕಾವೇರಿಯ ಎರಡನೇ ಪುಣ್ಯಕ್ಷೇತ್ರವಾದ ಬಲಮುರಿ ಈಶ್ವರ ದೇವಸ್ಥಾನ ಇರುವುದರಿಂದ ಮುಂದಕ್ಕೆ ಮಾಂಗೋಟು ಅಯ್ಯಪ್ಪ ದೇವಸ್ಥಾನ ಇದ್ದು, ಈ ಕೇರಿಯಲ್ಲಿ ಅಂದಾಜು 1200 ಜನರು ಇರುವುದರಿಂದ ಸರಿಯಾದ ಸಂಪರ್ಕ ವ್ಯವಸ್ಥೆ ಇರುವುದಿಲ್ಲ. ನಾವು ನಾಲ್ಕೈದು ವರ್ಷಗಳಿಂದ ಈ ರಸ್ತೆ ದುರಸ್ತಿಯ ಕುರಿತು ಜಿಲ್ಲಾಧಿಕಾರಿಗಳಿಗೂ, ಶಾಸಕರಿಗೂ, ಗ್ರಾಮ ಪಂಚಾಯಿತಿಯವರಿಗೂ ಹಲವು ಬಾರಿ ಲಿಖಿತ ರೂಪದಲ್ಲಿ ಮನವಿ ಮಾಡಿಕೊಂಡಿದ್ದರೂ ಈತನಕ ಯಾವುದೇ ರೀತಿಯ ಸ್ಪಂದನೆ ದೊರೆತಿರುವುದಿಲ್ಲ. ಕೂಡಲೇ ಈ ರಸ್ತೆಯನ್ನು ಡಾಮರೀಕರಣ ಮಾಡಿಕೊಡಬೇಕಾಗಿ ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ.

- ಬಲಮುರಿ ಗ್ರಾಮಸ್ಥರು.