ಮಾನ್ಯರೆ, ತಾಳತ್ತಮನೆಯಿಂದ ಅಪ್ಪಂಗಳದ ಸ್ಪೈಸಸ್ ಬೋರ್ಡ್ ಸಂಶೋಧನಾ ಸಂಸ್ಥೆವರೆಗಿನ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವ ಕೆಲಸ ಹುತ್ತರಿಗೂ 3-4 ದಿನಗಳ ಮುಂಚೆ ಆರಂಭ ಮಾಡಿದರು. ದೊಡ್ಡ ಗುಂಡಿಗಳನ್ನು ಮಾತ್ರ ಮುಚ್ಚಿದ್ದು ಸಣ್ಣ ಗುಂಡಿಗಳನ್ನು ಹಾಗೇ ಬಿಟ್ಟಿದ್ದಾರೆ. ಅವು ದೊಡ್ಡದಾದ ನಂತರ ಮುಚ್ಚಲು ಬಿಟ್ಟಿದ್ದಾರೋ ಏನೋ ಗೊತ್ತಿಲ್ಲ.

ಒಟ್ಟಿನಲ್ಲಿ ಕೇವಲ ತೇಪೆ ಹಾಕುವ ಕೆಲಸ ಮಾಡಿ ಜನರ ಕಣ್ಣಿಗೆ ಮಣ್ಣೆರೆಚಿದ್ದಾರೆ. ಈ ರಸ್ತೆಯಲ್ಲಿ ಪ್ರಯಾಣಿಸುವುದು ಅಂದ್ರೆ ಹಿಂಸೆ. ಈ ರೀತಿ ಅರ್ಧಂಬರ್ಧ ಕಾಮಗಾರಿಗಳನ್ಯಾಕೆ ಮಾಡ್ತಾರೋ ಗೊತ್ತಿಲ್ಲ.

ಈ ರಸ್ತೆ ಕಾಮಗಾರಿಯನ್ನೊಮ್ಮೆ ಸಂಬಂಧಪಟ್ಟವರು ಬಂದು ವೀಕ್ಷಿಸಿದರೆ ವಾಹನ ಸಂಚಾರಕ್ಕೆ ಸುಗಮವಾಗಬಹುದೆಂಬ ಆಶಯ.

- ಜಿ.ಯನ್. ರಾಮಚಂದ್ರ ರಾವ್ ಅಪ್ಪಂಗಳ, ಹೆರವನಾಡು.