ಮಾನ್ಯರೆ, ಮಡಿಕೇರಿ ನಗರದ ಮಾರುಕಟ್ಟೆ ರಸ್ತೆ, ಅಪ್ಪಚ್ಚಕವಿ ರಸ್ತೆ ಹೀಗೆ ನಗರದ ವಿವಿಧ ಭಾಗದಲ್ಲಿರುವ ರಸ್ತೆಗಳ ಮಧ್ಯೆ ವಾಹನಗಳ ವೇಗ ನಿಯಂತ್ರಿಸಲು ರಸ್ತೆ ಉಬ್ಬುಗಳನ್ನು ನಿರ್ಮಿಸಿರುತ್ತಾರೆ. ಇದು ಒಳ್ಳೆಯದೆ. ಆದರೆ ವಾಹನ ಸವಾರರಿಗೆ ರಸ್ತೆ ಉಬ್ಬುಗಳು ಇರುವುದೇ ತಿಳಿಯುವುದಿಲ್ಲ. ರಸ್ತೆಯೂ ಕಪ್ಪು, ರಸ್ತೆ ಉಬ್ಬುಗಳೂ ಕಪ್ಪು ಆಗಿರುವುದರಿಂದ ಗೊಂದಲಕ್ಕಿಡಾಗುವದಲ್ಲದೆ ಅಪಘಾತಗಳಾಗುತ್ತಿವೆ.

ರಸ್ತೆ ಮಧ್ಯೆ ಉಬ್ಬುಗಳಿಗೆ ಬಿಳಿ ಬಣ್ಣವನ್ನು ಬಳಿಯಲು ಸಂಬಂಧಪಟ್ಟವರು ಕ್ರಮ ಕೈಗೊಂಡು ರಸ್ತೆ ಉಬ್ಬುಗಳಿಂದ ವಾಹನಗಳು ಅಪಘಾತವಾಗುವುದನ್ನು ತಪ್ಪಿಸಿ, ಸವಾರರ ಸಾವು-ನೋವು ಆಗುವುದನ್ನು ತಡೆಗಟ್ಟುವಂತಾಗಲಿ. - ಬಿ. ಸಾತ್ವಿಕ್, ಮಡಿಕೇರಿ.