ಮಡಿಕೇರಿ, ಡಿ. 23: ಅಭ್ಯತ್‍ಮಂಗಲ ಗ್ರಾಮದ ಸರ್ವೆ ನಂ.87/2ರ ಜಾಗ ದಲ್ಲಿ ಕಾವೇರಿ ನದಿಯ ಬದಿಯಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸಲು ಮರಗಳನ್ನು ತೆರವುಗೊಳಿಸುವ ಬಗ್ಗೆ ಪ್ರಸ್ತಾವನೆ ಬಂದಿದ್ದು, ಈ ಸಂಬಂಧ ತಾ. 30 ರಂದು ಬೆಳಗ್ಗೆ 11 ಗಂಟೆಗೆ ಮಡಿಕೇರಿ ಅರಣ್ಯ ಭವನ ಕಚೇರಿಯ 2ನೇ ಮಹಡಿ ಸಭಾಂಗಣದಲ್ಲಿ ಸಾರ್ವಜನಿಕರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಮರ ತೆರವಿನ ಕಾಮಗಾರಿಯನ್ನು ಮುಂದುವರೆಸುವ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡಬಹುದು ಅಥವಾ ಲಿಖಿತ ರೂಪದಲ್ಲಿ ಒಂದು ವಾರದೊಳಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವಿಭಾಗ, ಮಡಿಕೇರಿ ಕಚೇರಿಗೆ ನೀಡಬಹುದು. ಮಾಹಿತಿಗೆ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿ ಕಾರಿ ಕಚೇರಿಯನ್ನು ಸಂಪರ್ಕಿಸ ಬಹುದು.