ಸೋಮವಾರಪೇಟೆ, ಡಿ. 23: ಶ್ರೀ ರವಿಶಂಕರ್ ಗುರೂಜಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ಸಮೀಪದ ಬೇಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕು ದಿನಗಳ ಬಾಲ ಚೇತನ ಶಿಬಿರ ನಡೆಯಿತು.

ಸಂಸ್ಥೆಯ ಶಿಕ್ಷಕಿ ರಾಗಿಣಿ ಅವರು, ವಿದ್ಯಾರ್ಥಿಗಳಿಗೆ ಪ್ರಾಣಾಯಾಮ, ಧ್ಯಾನ, ಭೌದ್ಧಿಕ ಬೆಳವಣಿಗೆಯ ತರಬೇತಿ, ಉಸಿರಿನ ಮಹತ್ವ, ಸ್ವಚ್ಛತೆ, ಪರಿಸರ ಕಾಳಜಿಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕರುಗಳಾದ ಸೋಮಶೇಖರ ಆಚಾರ್, ಕೆ.ಎನ್. ನಿರ್ಮಲ, ಎನ್.ಕೆ. ಸುಜಾತ, ಸಂಸ್ಥೆಯ ಸ್ವಯಂಸೇವಕಿ ದಿವ್ಯಾ ಮೋಹನ್ ಉಪಸ್ಥಿತರಿದ್ದರು.