ಮಡಿಕೇರಿ, ಡಿ. 23: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದಿಂದ 2020 ನೇ ಸಾಲಿನಲ್ಲಿ ವಿಶೇಷಚೇತನರ ರಿಯಾಯಿತಿ ದರದ ಬಸ್ ಪಾಸು ಗಳನ್ನು ವಿತರಣೆ/ನವೀಕರಣ ಮಾಡ ಬೇಕಿದೆ. ವಿಶೇಷಚೇತನ ಫಲಾನುಭವಿ ಗಳಿಗೆ ನವೀಕರಿಸಿ ಕೊಳ್ಳಲು ಆಗಬಹುದಾದ ತೊಂದರೆ ಗಮನ ದಲ್ಲಿಟ್ಟುಕೊಂಡು ಹಾಲಿ 2019ನೇ ಸಾಲಿನಲ್ಲಿ ವಿತರಿಸಿರುವ ವಿಶೇಷ ಚೇತನರ ಬಸ್‍ಪಾಸುಗಳನ್ನು 2020ರ ಫೆಬ್ರವರಿ 28 ರವರೆಗೆ ಮಾನ್ಯ ಮಾಡಲಾಗುವುದು.

ಫೆಬ್ರವರಿ 26 ರಿಂದ ವಿಶೇಷ ಚೇತನರ ಪಾಸುಗಳ ವಿತರಣೆ/ ನವೀಕರಣವನ್ನು ಪ್ರಾರಂಭಿಸಲಾಗು ವುದು. ಈ ಸಂಬಂಧ ಫಲಾನುಭವಿ ಗಳು ರೂ. 660 ನಗದು ರೂಪದಲ್ಲಿ ಪಾವತಿಸಿ 2020 ನೇ ಸಾಲಿಗೆ ಪಾಸ್ ಪಡೆಯಬಹುದಾಗಿದೆ. ಫಲಾನುಭವಿ ಗಳು ಫೆಬ್ರವರಿ 29ರೊಳಗೆ ವಿಶೇಷ ಚೇತನರ ರಿಯಾಯಿತಿ ಬಸ್‍ಪಾಸ್ ಪಡೆದುಕೊಳ್ಳಲು ಕೋರಿದೆ.

ಪ್ರಸ್ತುತ ಸಾಲಿನಲ್ಲಿ ವಿಶೇಷ ಚೇತನರ ಪಾಸುದಾರರ ನವೀಕರಣ/ ಹೊಸ ಪಾಸು ಪಡೆಯುವ ಸಮಯದಲ್ಲಿ ವಾಸ್ತವ್ಯದ ದೃಢೀಕರಣ, ಆಧಾರ್ ಕಾರ್ಡ್ ಪ್ರತಿ, ಪಾಸ್ ಪೋರ್ಟ್ ಸೈಜಿನ 2 ಫೋಟೋ, ಅಂಚೆ ಚೀಟಿ ಗಾತ್ರದ 1 ಫೋಟೋ ಹಾಗೂ ಯುಡಿಐಡಿ/ ಗುರುತಿನ ಚೀಟಿಯ ಮಾನ್ಯತಾ ಅವಧಿಯನ್ನು ಪರಿಶೀಲನೆ ಮಾಡುವ ಸಲುವಾಗಿ ವಿಶೇಷಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ವಿತರಿಸುವ ಗುರುತಿನ ಚೀಟಿಯ ದೃಢೀಕರಣ ಪತ್ರದ ಮೂಲ ಪ್ರತಿಯನ್ನು/ ಯುಡಿಐಡಿಯು ಮೂಲ ಪ್ರತಿ ಯಾವುದಾದರೊಂದು ಪರಿಶೀಲನೆ ಗಾಗಿ ತೋರಿಸಬೇಕು ಎಂದು ಪುತ್ತೂರು ವಿಭಾಗದ ಕ.ರಾ.ರ.ಸಾ. ನಿಗಮ, ಪುತ್ತೂರು ವಿಭಾಗಿಯ ನಿಯಂತ್ರಣಾಧಿ ಕಾರಿ ತಿಳಿಸಿದ್ದಾರೆ.