ನಾಪೆÇೀಕ್ಲು, ಡಿ. 23: ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಯಲ್ಲಿ ಹೆಚ್ಚಿನ ಜನ ಹೈನುಗಾರಿಕೆ ನಡೆಸುತ್ತಿದ್ದು, ಹಾಲು ಮಾರಾಟಕ್ಕೆ ಅವಕಾಶವಿಲ್ಲದೆ ನಷ್ಟ ಅನುಭವಿಸುತ್ತಿ ದ್ದಾರೆ. ಆದ್ದರಿಂದ ಪಶು ಪಾಲನಾ ಇಲಾಖೆ ಕಕ್ಕಬ್ಬೆಯಲ್ಲಿ ಹಾಲಿನ ಡೈರಿ ಆರಂಭಿಸುವದರ ಮೂಲಕ ರೈತರಿಗೆ ನೆರವಾಗಬೇಕು ಎಂದು ಕುಂಜಿಲ - ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ ಸಲಹೆ ನೀಡಿದರು.
ಕೊಡಗು ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಕಕ್ಕಬ್ಬೆ ಗ್ರಾಮ ಪಂಚಾಯಿತಿ, ಕಕ್ಕಬ್ಬೆ ಯಶಸ್ವಿನಿ ಸ್ವಸಹಾಯ ಸಂಘ, ಜಿಲ್ಲಾ ಪಶುಪಾಲನಾ ಇಲಾಖೆ, ಪಶು ವೈದ್ಯಕೀಯ ಆಸ್ಪತ್ರೆ ಮಡಿಕೇರಿ, ಇವರ ಸಂಯುಕ್ತಾಶ್ರಯದಲ್ಲಿ ಕುಂಜಿಲ ಗ್ರಾಮದ ಊರ ಅಂಬಲದಲ್ಲಿ ಏರ್ಪಡಿಸಲಾಗಿದ್ದ ವಿಸ್ತರಣಾ ಘಟಕ ಬಲಪಡಿಸುವಿಕೆ ಯೋಜನಾ ಕಾರ್ಯಕ್ರಮದಲ್ಲಿ “ಜಾನುವಾರು ಮಿಶ್ರತಳಿ ಕರುಗಳ ಪ್ರದರ್ಶನ ಕಾರ್ಯಕ್ರಮ” ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕುಂಜಿಲ ಭಗವತಿ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಕೋಟೆರ ಸುರೇಶ್ ಚಂಗಪ್ಪ ಮಾತನಾಡಿ, ಇಂದಿನ ದಿನಗಳಲ್ಲಿ ಪಶುಪಾಲನೆ ತುಂಬಾ ಕಷ್ಟಕರವಾಗಿದೆ. ಆದರೂ ಈ ವ್ಯಾಪ್ತಿಯ ಮಹಿಳೆ ಯರು ಇದರಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವದು ಶ್ಲಾಘನೀಯ ಎಂದರು. ಮಳೆಗಾಲ ದಲ್ಲಿ ಹೆಚ್ಚಿನ ಮಳೆ ಮತ್ತು ಚಳಿ ಇರುವ ಕಾರಣ ದನದ ಕೊಟ್ಟಿಗೆಗೆ ಮುಚ್ಚಲು ಪ್ಲಾಸ್ಟಿಕ್ ನೀಡಬೇಕು ಎಂದರು.
ಸಹಾಯಕ ನಿರ್ದೇಶಕ ಡಾ|| ಬೋಳ್‍ಕ ಮತ್ತು ಪಾರಾಣೆ ಪಶುಪಾಲನಾ ಕೇಂದ್ರದ ವೈದ್ಯ ಡಾ|| ಚೇತನ್ ಮಾತನಾಡಿ ಹಸು ಸಾಕಾಣೆ, ಕರು ಬೆಳವಣಿಗೆಯ ಬಗ್ಗೆ ರೈತರಿಗೆ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ಪಶು ಬಗ್ಗೆ ಯೋಜನೆ, ಹಸು ಘಟಕ, ಹಂದಿ ಸಾಕಾಣೆ ಘಟಕ, ಕುರಿ ಸಾಕಣೆ ಘಟಕ ನಿರ್ಮಿಸಲು ಸಬ್ಸಿಡಿ ದರದಲ್ಲಿ ಅನುದಾನ ನೀಡಲಾಗುತ್ತಿದೆ. ಹಂದಿ ಮಾಂಸ ಮಳಿಗೆ ಅರಂಭಿಸಲು ಸಹಾಯ ಧನ ನೀಡಲಾಗುವದು. ಇಲಾಖೆಯಿಂದ ಗಿರಿರಾಜ ಕೋಳಿ ಮರಿಗಳು ಲಭ್ಯವಿದ್ದು, ಜಿ.ಪಂ ಸದಸ್ಯರ ಶಿಫಾರಸ್ಸು ಮತ್ತು ಆಧಾರ್ ಕಾರ್ಡ್ ಪ್ರತಿ ನೀಡಿ ಪಡೆಯಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಸದಸ್ಯ ಬಾಚಮಂಡ ಭರತ್ ವಹಿಸಿದ್ದರು.
ವೇದಿಕೆಯಲ್ಲಿ ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಲ್ಯಾಟಂಡ ರಘು ತಮ್ಮಯ್ಯ, ಮಡಿಕೇರಿ ಕಾವೇರಿ ಕೋಳಿ ಸಾಕಾಣೆ ಸಹಕಾರ ಸಂಘದ ನಿರ್ದೇಶಕ ಕಲ್ಯಾಟಂಡ ಸುಧಾ ಗಣಪತಿ, ಹಿರಿಯರಾದ ಕಲ್ಯಾಟಂಡ ಅಯ್ಯಪ್ಪ, ಮೂರ್ನಾಡು ಪಶುಪಾಲನಾ ಕೇಂದ್ರದ ವೈದ್ಯೆ ಡಾ|| ಶಿಲ್ಪ, ಹಿರಿಯ ಪಶುವೈದ್ಯ ಪರೀಕ್ಷಕ ಪಳಂಗಪ್ಪ, ಸಿಬ್ಬಂದಿಗಳಾದ ನಂಜಪ್ಪ, ಪೂಣಚ್ಚ, ಅರವಿಂದ್ ಇದ್ದರು.
ಅಂಬಲ ಶಾಲಾ ವಿದ್ಯಾರ್ಥಿ ಗಳಿಂದ ಪ್ರಾರ್ಥಿಸಿ, ಪಶುಪಾಲನಾ ಇಲಾಖೆಯ ನಿರೀಕ್ಷಕ ಸುನಿಲ್ ಸ್ವಾಗತಿಸಿ, ಯಶಸ್ವಿನಿ ಸ್ವಸಹಾಯ ಸಂಘದ ಅಧ್ಯಕ್ಷೆ ಪೆÇನ್ನೊಲತಂಡ ಮೀನಾ ಸೋಮಯ್ಯ ವಂದಿಸಿದರು.