ಮಡಿಕೇರಿ, ಡಿ. 22: ಜಿಲ್ಲೆಯ ಹದಿನಾಲ್ಕು ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಸರಕಾರದಿಂದ ರೂ. 54 ಲಕ್ಷದ ಅನುದಾನ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪೈಕಿ ಮುಕ್ಕೋಡ್ಲುವಿನ ಕಾಟ್ಲಪ್ಪ ದೇವಾಲಯಕ್ಕೆ ರೂ. 10 ಲಕ್ಷ ಒದಗಿಸಿದ್ದಾರೆ. ಅಲ್ಲದೆ ಮೂರ್ನಾಡು ಶ್ರೀ ಭದ್ರಕಾಳಿ ಹಾಗೂ ಬೆಸೂರು ಶ್ರೀ ತ್ರಿಪುರ ಸುಂದರಿ ದೇವಾಲಯಕ್ಕೆ ತಲಾ ರೂ. 5 ಲಕ್ಷ ನೀಡಿದ್ದಾರೆ.

ಇನ್ನುಳಿದಂತೆ ಶಾಂತಳ್ಳಿ ಕುಮಾರಲಿಂಗೇಶ್ವರ ಹಾಗೂ ತೋಳೂರುಶೆಟ್ಟಳ್ಳಿ ಸಬ್ಬಮ್ಮ ದೇವಾಲಯಕ್ಕೆ ರೂ. 4 ಲಕ್ಷದೊಂದಿಗೆ, ಸೋಮವಾರಪೇಟೆ ಶ್ರೀ ಸೋಮೇಶ್ವರ, ಮುತ್ತಪ್ಪ ಸನ್ನಿಧಿಗಳಿಗೆ ತಲಾ ರೂ. 3 ಲಕ್ಷ ನೀಡಲಾಗಿದೆ.

ಮಾತ್ರವಲ್ಲದೆ ವೀರಾಜಪೇಟೆ ತಾಲೂಕಿನ ಯಡಮಕ್ಕಿ ಹೆಗ್ಗಳ ಅಯ್ಯಪ್ಪ, ಕೂಟಿಯಾಲ ಅಯ್ಯಪ್ಪ, ಕಾವಡಿ ಭಗವತಿ, ಕಾವಡಿ ಭದ್ರಕಾಳಿ, ಚೌಂಡಿ ಸನ್ನಿಧಿ, ವಿ. ಬಾಡಗ ಮಹದೇವ, ವೀರಾಜಪೇಟೆ ಮುತ್ತಪ್ಪ ದೇಗುಲಗಳಿಗೆ ತಲಾ ರೂ. 3 ಲಕ್ಷದಂತೆ ಅನುದಾನ ಕಲ್ಪಿಸಲಾಗಿದೆ ಎಂದು ಸುನಿಲ್ ಸುಬ್ರಮಣಿ ತಿಳಿಸಿದ್ದಾರೆ.