ಮಡಿಕೇರಿ, ಡಿ. 22: ಮಡಿಕೇರಿ ನಗರಸಭೆ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳ ಸಮಿತಿಗೆ ತಾ. 21 ರಂದು ನಡೆದ ಚುನಾವಣೆಯಲ್ಲಿ 9 ಸ್ಥಾನಗಳಿಗೆ ಅವಿರೋಧ ಆಯ್ಕೆಯೊಂದಿಗೆ ಒಂದು ಸ್ಥಾನಕ್ಕೆ ಚುನಾವಣೆ ನಡೆಯಿತು.
ಈ ಸಮಿತಿಯ ಅಧಿಕಾರ ಐದು ವರ್ಷಗಳ ಅವಧಿಯಿದ್ದು, ಮೂವರು ಮಹಿಳಾ ಸ್ಥಾನಕ್ಕೆ ಜಿ. ಉಮಾ, ವಿ.ಎಂ. ಸುಮಿತ್ರ, ಶಾಂತಕುಮಾರಿ ಆಯ್ಕೆಗೊಂಡಿದ್ದಾರೆ. ಪರಿಶಿಷ್ಟ ಜಾತಿಯಿಂದ ವಿ.ಟಿ. ಲೋಕೇಶ್, ಪರಿಶಿಷ್ಟ ಪಂಗಡದಿಂದ ಹೆಚ್.ಎನ್. ಕುಮಾರಿ, ಅಲ್ಪಸಂಖ್ಯಾತ ಸ್ಥಾನಕ್ಕೆ ಎಂ.ಆರ್. ಅಯೂಬ್, ವಿಶೇಷ ಚೇತನ ಸ್ಥಾನಕ್ಕೆ ಎಂ.ಐ. ಜಂಶದ್, ಸಾಮಾನ್ಯ ಸ್ಥಾನಕ್ಕೆ ಕೆ.ಬಿ. ಮೋಹನ್‍ರಾಜ್ ಹಾಗೂ ಎಂ.ವೈ. ಸುಲೇಮಾನ್ ನೇಮಕಗೊಂಡಿದ್ದಾರೆ.
ಒಂದು ಸ್ಥಾನಕ್ಕೆ ಹಿಂದುಳಿದ ವರ್ಗದಿಂದ ನಡೆದ ಚುನಾವಣೆಯಲ್ಲಿ ಪುಟ್ಟೋಜಿರಾವ್ ಜಯಗಳಿಸಿದ್ದಾರೆ. ಚುನಾವಣಾಧಿಕಾರಿಯಾಗಿ ಸಹಕಾರಿ ಇಲಾಖೆಯ ಭವಾನಿ ಕಾರ್ಯನಿರ್ವಹಿಸಿದರು. ಎಲ್ಲ ಅಭ್ಯರ್ಥಿಗಳಿಗೆ ನಗರಸಭೆ ಆಯುಕ್ತ ಎಂ.ಎಲ್. ರಮೇಶ್ ಆಯ್ಕೆ ಪತ್ರ ನೀಡಿದರು.
-ಟಿ.ಜಿ.ಎಸ್.