ಮಡಿಕೇರಿ, ಡಿ. 22: ಅನಧಿಕೃತವಾಗಿ ಪ್ರವಾಸಿಗರನ್ನು ಕೊಂಡೊಯ್ಯುತ್ತಿದ್ದ ಬಿಳಿ ಫಲಕದ 2 ಕಾರುಗಳನ್ನು ಟ್ಯಾಕ್ಸಿ ಯೂನಿಯನ್ನವರು ಪತ್ತೆ ಹಚ್ಚಿ ಮಡಿಕೇರಿ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಕುಶಾಲನಗರದ ಇಟ್ಯೋಸ್ ಹಾಗೂ ಕಕ್ಕಬೆಯ ಸ್ವಿಫ್ಟ್ ಡಿಸೈರ್ ಕಾರುಗಳನ್ನು ಗದ್ದುಗೆ ಬಳಿ ಪತ್ತೆ ಹಚ್ಚಿ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.